ಜಿಲ್ಲಾ ಸುದ್ದಿಗಳು
ಸಮೀಕ್ಷಾ ಕಾರ್ಯಕ್ಕೆ ಗೈರು..18 ಶಿಕ್ಷಕರಿಗೆ ನೋಟಿಸ್ ನೀಡಿದ ಡಿ ಡಿ ಪಿ ಐ

ವರದಿ ಸುಂದರರಾಜ್ BA ಕಾರಟಗಿ
ಚಿಕ್ಕ ಮಂಗಳೂರು : ಸರ್ಕಾರದ ಆದೇಶಿಸಿದ ಸಾಮಾಜಿಕ ಶೈಕ್ಷಣಿಕ ಸಮೀಕ್ಷಾ ಕಾರ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ 18 ಶಿಕ್ಷಕರು ಗೈರಾಗಿರುವುದು ಗಮನಕ್ಕೆ ಬಂದಿದ್ದು, ಜಿಲ್ಲಾ ಉಪ ಶಿಕ್ಷಣಾಧಿಕಾರಿ (DDPI) ತಿಮ್ಮರಾಜು ನೋಟಿಸ್ ಜಾರಿ ಮಾಡಿದ್ದಾರೆ. ಸಮೀಕ್ಷೆಗೆ ಹಾಜರಾಗದ ಶಿಕ್ಷಕರಿಗೆ ಜಿಲ್ಲಾ ಉಪ ಶಿಕ್ಷಣಾಧಿಕಾರಿ (DDPI) ತಿಮ್ಮರಾಜು ನೋಟಿಸ್ ಜಾರಿ ಮಾಡಿದ್ದಾರೆ. ಗೈರಾಗಲು ಕಾರಣ ಕೇಳಿದ್ದು, ಇಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಥವಾ ತಹಶೀಲ್ದಾರ್‌ರ ಮುಂದೆ ದಾಖಲೆಗಳೊಂದಿಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ತರೀಕೇರೆ ತಹಶೀಲ್ದಾರ್ ಮುಂದೆ ಹಾಜರಾಗಿ ದಾಖಲೆ ನೀಡುವಂತೆ ಸೂಚಿಸಲಾಗಿದ್ದು, ಈ ಕ್ರಮವು ಸಮೀಕ್ಷೆಯ ಕಾರ್ಯ ವಿಳಂಬ ಆಗದಂತೆ ತಡೆಯಲು ತೆಗೆದುಕೊಳ್ಳಲಾಗಿದೆ.