ಜಿಲ್ಲಾ ಸುದ್ದಿಗಳು

ಡಾ. ಬಾಬಾ ಸಾಹೇಬ್ ನ್ಯಾಷನಲ್ ಫಿಲಾಶಿಫ್ ಅವಾರ್ಡ್ : ಹೊಳೆಪ್ಪನವರ ಆಯ್ಕೆ  

ಕೊಪ್ಪಳ ಡಿ- 6 : – ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ನವ ದೆಹಲಿ ದವರು 2024 – 25 ನೇ ಸಾಲಿನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಫಿಲಾಶಿಫ್ ಅವಾರ್ಡನ್ನು ಕೊಪ್ಪಳದ ಬಸವೇಶ್ವರನಗರದ ನಿವಾಸಿ ಪ್ರಕಾಶ್. ಎಚ್. ಹೋಳೆಯಪ್ಪನವರು ಆಯ್ಕೆಯಾಗಿದ್ದಾರೆ. ಪ್ರಕಾಶ್ ಎಚ್ ಹೊಳೆಪ್ಪನವರು ಕಾನೂನು

ಪದವೀದರ ಆಗಿದ್ದು ಶೋಷಿತ ದಲಿತ ಸಮಾಜದ ಮಕ್ಕಳಿಗೆ ಹಾಗೂ ಯುವಕರಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತ ಕಾನೂನು ಅರಿವು ಕಾರ್ಯಕ್ರಮವನ್ನು ಹಾಕುತ್ತಾ ದೌರ್ಜನ್ಯಕ್ಕೆ ಒಳಗಾದವರಿಗೆ ಧೈರ್ಯ ತುಂಬುತ್ತಾ ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಕೊಟ್ಟು ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನ ತರುತ್ತ ಸದಾ ಸಮಾಜ ಸೇವೆಯಲ್ಲಿ ನಿರಂತರವಾಗಿರುವ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡುತ್ತಾ ಸದಾ ಸೇವೆ ಮಾಡುತ್ತಿರುವ ಸಮಾಜಮುಖಿ ಕೆಲಸದಲ್ಲಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪ್ರಕಾಶ್ ಹೆಚ್ ಹೊಳೆಪ್ನವರನ್ನು ಗುರುತಿಸಿ ಇತ್ತೀಚಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆಯ ರಾಜ್ಯ ಘಟಕದವರು ಪ್ರಕಾಶ್ ಹೊಳೆಪ್ಪನವರನ್ನ ಕೊಪ್ಪಳ ಜಿಲ್ಲಾ ಸಂಚಾಲಕರನ್ನಾಗಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಯಾಧ ಅವರನ್ನು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಮಾಡೆಲ್ ಟೌನ್ ನವದೆಹಲಿ ರವರು ಇದೆ 2024 ರ ಡಿಸೆಂಬರ್ 8, 9 ರಂದು ಅಂಬೇಡ್ಕರ್ ಮಂಡಪ , ಪಂಚಶೀಲ ಆಶ್ರಮ, ಜಾರ್ಡಲ್ ವಿಲೇಜ್ , ನವ ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಧಾನ ಮಾಡಲಾಗುವುದು ಎಂದು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಯ ಸುಮನಾಕ್ಷರ ಆಮಂತ್ರಣ ಪತ್ರಿಕೆಯಲ್ಲಿ ತಿಳಿಸಿದ್ದಾರೆ

Related Articles

Leave a Reply

Your email address will not be published. Required fields are marked *

Back to top button
error: Content is protected !!