ಸಮೀಕ್ಷೆ ಕಾರ್ಯ ನಿರ್ಲಕ್ಷ್ಯ ಕೊಪ್ಪಳದ ಕುಷ್ಟಗಿ ತಾಲೂಕಿನ ಶಿಕ್ಷಕ ಅಮಾನತ್

ವರದಿ ಸುಂದರರಾಜ್ BA ಕಾರಟಗಿ
ಕುಷ್ಟಗಿ: ರಾಜ್ಯ ಸರ್ಕಾರ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿದೆ. ಸಮೀಕ್ಷೆಯಲ್ಲಿ ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸುತ್ತಿರುವ ಘಟನೆಗಳು ಒಂದಾದ ಮೇಲೊಂದು ಜರುಗುತ್ತಿವೆ. ಲಿಂಗಸೂಗೂರು ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ರಮೇಶ್ ರಾಠೋಡ್ ಅವರನ್ನು ಸಸ್ಪೆಂಡ್ ಆದ ಬೆನ್ನಲ್ಲೆ,
ಮತ್ತೊಬ್ಬ ಅಧಿಕಾರಿ ಅಮಾನತ್ ಆಗಿರುವುದು ಸಮೀಕ್ಷೆ ಕಾರ್ಯ ನಿರ್ಲಕ್ಷ್ಯ ವಹಿಸಿದರೆ ತಲೆದಂಡ ಖಚಿತ ಎನ್ನುವುದನ್ನು ಸರ್ಕಾರ ಖಚಿತ ಪಡಿಸಿದೆ
ಕುಷ್ಟಗಿ ತಾಲೂಕಿನ ಜುಲಕುಂಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರಾಮಪ್ಪ ತಳವಾರ ಇವರನ್ನು ಅಮಾನತ್ ಮಾಡಿ ಜಿಲ್ಲಾಧಿಕಾರಿ ಸುರೇಶ್ ಹಿಟ್ನಾಳ್ ಆದೇಶಿಸಿದ್ದಾರೆ.ರಾಮಪ್ಪ ತಳವಾರ ಇವರು ಅವರಿಗೆ ವಹಿಸಿಕೊಟ್ಟಿರುವ ಸಮೀಕ್ಷೆ ಕಾರ್ಯ ನಿರ್ವಹಿಸದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಸಿ ಆರ್ ಪಿ ರವರು ಮನೆಗೆ ಭೇಟಿ ನೀಡಿದ್ದರು ಯಾವುದೇ ಪ್ರಯೋಜನ ವಾಗಿರುವುದಿಲ್ಲ, ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಸಮೀಕ್ಷೆ ಕಾರ್ಯ ನಡೆಸದೆ ಕರ್ತವ್ಯ ಲೋಪ ಮಾಡಿರುವುದರಿಂದ ಸಿ ಆರ್ ಪಿ ರವರು ನೀಡಿದ ವರದಿ ಆಧರಿಸಿ ಜಿಲ್ಲಾಧಿಕಾರಿಗಳು ಅಮಾನತ್ ಆದೇಶ ಹೊರಡಿಸಿದ್ದಾರೆ