ಕುಷ್ಟಗಿ

ಕುಷ್ಟಗಿ ಪಟ್ಟಣದಲ್ಲಿ ನಿರಾಶ್ರಿತರ ಗೋಳಾಟ ಅಧಿಕಾರಿಗಳ ಜಾಣ ಕುರುಡು. 

  • ಕುಷ್ಟಗಿ ಪಟ್ಟಣದಲ್ಲಿ ನಿರಾಶ್ರಿತರ ಗೋಳಾಟ ಅಧಿಕಾರಿಗಳ ಜಾಣ ಕುರುಡು. ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಈಗಿನ ಶಾಸಕ ದೊಡ್ಡನಗೌಡ ಪಾಟೀಲ್ ಇವರ ತಂದೆ ಹನುಮಗೌಡ ಪಾಟೀಲ್ 1993 94ರಲ್ಲಿ ಸರ್ಕಾರದಿಂದ ಶೂರ್ ಇಲ್ಲದವರಿಗೆ 12 ಎಕ್ರೆ ಭೂಮಿ ಖರೀದಿ ಮಾಡಿ 134 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದರು. ಅಂದಿನ ಶಾಸಕರಾದ ದಿ.ಹನುಮ ಗೌಡ್ರು 30 40 ಅಳತೆಯ ಪ್ಲಾಟನ್ನು ವಿತರಣೆ ಮಾಡುವಂತೆ ಆದೇಶಿಸಿದರು. ಗಜೇಂದ್ರಗಡ ರಸ್ತೆಯಲ್ಲಿ ಇರುವ ಸರ್ವೇ ನಂಬರ್ 190 /1/3 ರಲ್ಲಿ ಅದರಲ್ಲಿ 25 ಮನೆಗಳು ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಮಂಜುರಾಗಿರುತ್ತವೆ. ಸದರಿ ಮನೆಗಳಲ್ಲಿ ಜನರು ವಾಸವಾಗಿರುತ್ತಾರೆ. ಅವುಗಳ ಅಳತೆಯು 30 40 ಇರುತ್ತದೆ ಉಳಿದ ಫಲಾನುಭವಿಗಳಿಗೆ ಠರಾವವಿನಲ್ಲಿ ಸೂಚಿಸಿರುವಂತೆ 30 40 ಅಳತೆಯಲ್ಲಿ ಹಕ್ಕು ಪತ್ರಗಳನ್ನು ವಿತರಿಸಬೇಕೆಂದು ಫಲಾನುಭವಿಗಳ ಮನವಿಯಾಗಿದೆ.ಆದರೆ ಈಗ ಪುರಸಭೆಯವರು 20 30 ಅಳತೆಯ ಪ್ಲಾಟನ್ನು ಕೊಡುವುದಾಗಿ ಹೇಳುತ್ತಾರೆ. ತಮ್ಮ ಹಿಂಬಾಲಕರಿಗೆ 30 ರಿಂದ 40 ಸಾವಿರ ತೆಗೆದುಕೊಂಡು ಫ್ಲಾಟ್ ವಿತರಣೆ ಮಾಡಿದ್ದಾರೆ ಎಂಬ ಆರೋಪಗಳು ನಿರಾಶಿತರು ಹೇಳುತ್ತಾರೆ.

ಪುರಸಭೆಯವರು ಅಧ್ಯಕ್ಷರು ಮತ್ತು ಮುಖ್ಯ ಅಧಿಕಾರಿಗಳು ಮತ್ತು ತಹಶೀಲ್ದಾರ್ ಕೇಳಿದರೆ ಹಾರೈಕೆ ಉತ್ತರ ಕೊಡುತ್ತಾ ಸುಮಾರು ವರ್ಷಗಳಿಂದ ನಿರಾಸಿತರು ಅಲೆದು ಅಲೆದು ಸುಸ್ತಾಗಿ ಕಡಕ್ಕೆ ಕೇಂದ್ರ ಸ್ಥಾನ ಕೊಪ್ಪಳಕ್ಕೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. 32 ವರ್ಷಗಳಿಂದ ಅಲೆದಾಡಿ ನಿರಾಸಿತರು ಕೊನೆಗೂ ಕೇಂದ್ರ ಸ್ಥಾನಕ್ಕೆ ಬಂದಿದ್ದಾರೆ. ಈಗಿನ ಶಾಸಕರಾದ ದೊಡ್ಡನಗೌಡ ಪಾಟೀಲ್ ಅಧಿಕಾರಿಗಳಿಗೆ ಹೇಳಿದ್ದಾರೆ ಎಂದು ನಿರಾಶ್ರಿತರು ಹೇಳುತ್ತಾರೆ. ಆದರೆ ಏನೋ ಇದರಲ್ಲಿ ಗೋಲ್ಮಾಲ್ ಇದೆ ಎಂದು ಕೆಲವರು ಹೇಳುತ್ತಾರೆ. ತಾಲೂಕಿನ ಶಾಸಕರು ಅಧಿಕಾರಿಗಳಿಗೆ ಸ್ಟ್ರಿಕ್ ಆಗಿ ಹೇಳಿದ ಮೇಲೆ ಏಕೆ ಪ್ಲಾಟ್ ವಿತರಣೆ ಮಾಡುವುದಿಲ್ಲ ಕುಪತ್ರ ಏಕೆ ಕೊಡುವುದಿಲ್ಲ ಎಂಬ ಅನುಮಾನ ಕೂಡ ಕೇಳಿ ಬರುತ್ತದೆ. ಸುಮಾರು ನೂರಕ್ಕೂ ಹೆಚ್ಚು ನಿರಾಸೆತರು ಕುಷ್ಟಗಿಯಿಂದ ಕೊಪ್ಪಳಕ್ಕೆ ಬಂದು ಜಿಲ್ಲಾಧಿಕಾರಿಗೆ ಮನವಿ ಕೊಟ್ಟಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳ. ಮತ್ತು ಆಡಳಿತ ನಡೆಸುವ ಅಧಿಕಾರಿಗಳ ನಿರ್ಲಕ್ಷತನ ಎದ್ದು ಕಾಣುತ್ತದೆ.

ಜಿಲ್ಲಾಧಿಕಾರಿಗಳು ನನ್ನ ಗಮನಕ್ಕೆ ಇಲ್ವೇ ಇಲ್ಲ ನಾನು ಇದನ್ನು ಕುಲಂಕುಶವಾಗಿ ಪರಿಶೀಲಿಸಿ ನಿಮಗೆ ನ್ಯಾಯ ದೊರಕಿಸಿ ಕೊಡುತ್ತೇನೆ ಎಂದು ನಿರಾಶ್ರಿತರಿಗೆ ಭರವಸೆ ಕೊಟ್ಟಿದ್ದಾರೆ ಎಂದು ಲಕ್ಷ್ಮವ್ವ ಟಕ್ಕಳಿಕಿ. ಶರಣಪ್ಪ ಬನ್ನಿ ಗೋಳ. ಹನುಮಂತಪ್ಪ ಕರಿಗಾರ್. ದೊಡ್ಡಪ್ಪ. ಭೀಮಪ್ಪ .ನಾಗಪ್ಪ. ಲಕ್ಷ್ಮಿ. ಅನ್ನಕ್ಕ. ಶರಣಪ್ಪ. ನಾಗಪ್ಪ .ಹನುಮಪ್ಪ. ಗಂಗವ್ವ ಇನ್ನೂ ಆಶ್ರಯ ಇಲ್ಲದ ನಿರಾಶಿತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button
error: Content is protected !!