ಗಂಗಾವತಿಯಲ್ಲಿ ಮಾದಕ ವಸ್ತು ಜಾಲ ಪತ್ತೆ: ₹18 ಲಕ್ಷ ಮೌಲ್ಯದ ಹೈಡೋ ಗಾಂಜಾ ವಶ, 8 ಆರೋಪಿಗಳ ಬಂಧನ

ಗಂಗಾವತಿಯಲ್ಲಿ ಮಾದಕ ವಸ್ತು ಜಾಲ ಪತ್ತೆ: ₹18 ಲಕ್ಷ ಮೌಲ್ಯದ ಹೈಡೋ ಗಾಂಜಾ ವಶ, 8 ಆರೋಪಿಗಳ ಬಂಧನ
ಗಂಗಾವತಿ, ಮೇ 28, 2025: ಗಂಗಾವತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಮಾದಕ ವಸ್ತುಗಳ ಅಕ್ರಮ ವ್ಯಾಪಾರದ ಜಾಲವನ್ನು ಭೇದಿಸಿ 8 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಧ್ಯಾಹ್ನ 11 ಗಂಟೆಯ ಸುಮಾರಿಗೆ ಗಂಗಾವತಿ ನಗರದಿಂದ ಸೂರ್ಯ ನಾಯಕ ತಾಂಡಕ್ಕೆ ಹೋಗುವ ರಸ್ತೆ ಪಕ್ಕದಲ್ಲಿನ ಸರ್ಕಾರಿ ಐಟಿಐ ಕಾಲೇಜು ಬಳಿ, ಸಾರ್ವಜನಿಕ ಸ್ಥಳದಲ್ಲಿ ಎರಡು ಕಾರುಗಳಲ್ಲಿ ನಿಂತಿದ್ದ ವ್ಯಕ್ತಿಗಳು ಹೈಡೋ ಗಾಂಜಾ ಮಾದಕ ವಸ್ತುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದರು.
ಬಂಧಿತ ಆರೋಪಿಗಳ ವಿವರ:
1. ಸೌಜೇಶ ಕೆಕೆ (28), ಅಯ್ಯನಕುನ್ನು, ಕಣ್ಣೂರು, ಕೇರಳ
2. ಸಲಿಂ ಪಿಪಿ (27), ಮುಜಾಖುನ್ನು, ಕಣ್ಣೂರು, ಕೇರಳ
3. ಬಿ. ದುರ್ಗಾ ಪ್ರಸಾದ್ (27), ಬಳ್ಳಾರಿ
4. ಬಾದಷಾ (32), ತ್ರಿಶೂರ್, ಕೇರಳ
5. ಮದನ್ (26), ಬಳ್ಳಾರಿ
6. ಸೂರ್ಯ ಪ್ರತಾಪ್ ರೆಡ್ಡಿ (19), ಬಳ್ಳಾರಿ
7. ಮಹ್ಮದ್ ಅಮೀದ್ (22), ಬಳ್ಳಾರಿ
8. ಮಣಿಕಂಠ (23), ಬಳ್ಳಾರಿ
ಪೊಲೀಸರು ಆರೋಪಿಗಳಿಂದ ಒಟ್ಟು ₹18,06,000 ಮೌಲ್ಯದ 1806 ಗ್ರಾಂ ಹೈಡೋ ಗಾಂಜಾ, 2 ಕಾರುಗಳು, ಮತ್ತು 8 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ತಂಡ:
ಈ ಯಶಸ್ವೀ ಕಾರ್ಯಾಚರಣೆಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹೆಮಂತಕುಮಾರ್ ಆರ್., ಡಿಎಸ್‌ಪಿ ಸಿದ್ದಲಿಂಗಪ್ಪ ಪಾಟೀಲ್, ಪಿಐ ಪ್ರಕಾಶ ಮಾಳಿ, ಡಿಸಿಆರ್‌ಬಿ ಪಿಐ ಶಿವರಾಜ್, ಪಿಎಸ್‌ಐ ನಾಗರಾಜ್ ಟಿ.ಜಿ, ಎಎಸ್‌ಐ ವೀರಭದ್ರಪ್ಪ, ಮತ್ತು ಸಿಬ್ಬಂದಿ ಚಿರಂಜೀವಿ, ಮರಿಶಾಂತಗೌಡ, ವಿಶ್ವನಾಥ, ರಾಘವೇಂದ್ರ, ಬೀಮಪ್ಪ, ಪರಶುರಾಮ, ಮೈಲಾರಪ್ಪ, ಶ್ರೀಕಾಂತ, ಮಂಜುನಾಥ ಸೇರಿ ಸಾಕಷ್ಟು ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದಾರೆ.
ಕಾನೂನು ಕ್ರಮ:
ಬಂಧಿತ 8 ಮಂದಿಗಿಂತ 3 ಜನರು ಕೇರಳ ರಾಜ್ಯದವರಾಗಿದ್ದು, ಥೈಲ್ಯಾಂಡ್ ನಿಂದ ಹೈಡೋ ಗಾಂಜಾ ತರಿಸಿ ಮಾರಾಟ ಮಾಡುತ್ತಿದ್ದರೆಂದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಇವರ ಮೇಲೆ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯ ಸೆಕ್ಷನ್‌ಗಳಡಿ (ಸೆಕ್ಷನ್ 20(ಬಿ), 23(ಎ)) ಪ್ರಕರಣ ದಾಖಲಿಸಲಾಗಿದೆ.
ಅಭಿನಂದನೆಗಳು:
ಪೊಲೀಸ್ ಅಧೀಕ್ಷಕ ಡಾ. ರಾಮ್ ಎಲ್. ಅರಸಿದ್ದಿ (ಐಪಿಎಸ್) ಅವರು, ಈ ಯಶಸ್ವೀ ಪತ್ತೆ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡವನ್ನು ಶ್ಲಾಘಿಸಿ, ಬಹುಮಾನ ಘೋಷಿಸಿದ್ದಾರೆ.