ಗಂಗಾವತಿ

ಅತಿಯಾದ ಕೆಲಸದ ಒತ್ತಡ ಕಡಿಮೆ ಸಂಬಳ..ವಿಜಯಲಕ್ಷ್ಮಿ ಆಚಾರ್ಯ

ಗಂಗಾವತಿ.09 ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಇಂದು ಗಂಗಾವತಿ ಗ್ರೇಟ್ ಟು ತಹಶಿಲ್ದಾರ ಮಹಾಂತಗೌಡ ಪಾಟೀಲ್ ಇವರಿಗೆ ನಗರ ಘಟಕ ಅಧ್ಯಕ್ಷೆ ವಿಜಯಲಕ್ಷ್ಮಿ ಆಚಾರ್ಯ ಇವರು ಮನವಿಯನ್ನು ಸಲ್ಲಿಸಿದರು.

ನಂತರ ಮಾತನಾಡಿದ ನಗರ ಘಟಕ ಅಧ್ಯಕ್ಷೆ ವಿಜಯಲಕ್ಷ್ಮಿ ಆಚಾರ್ಯ ಕರ್ನಾಟಕ ರಾಜ್ಯ ಆರೋಗ್ಯ ಸಚಿವರಾದ ದನೇಶ ಗುಂಡುರಾವ್ ಹಾಗೂ ಕೇಂದ್ರ ಆರೋಗ್ಯ ಸಚಿವ ಶ್ರೀ ಜೆ.ಪಿ. ನಡ್ಡಾ ರಾಜ್ಯಸಭೆಗೆ ಮಾಹಿತಿ ನೀಡಿರುವಂತೆ ರಾಷ್ಟ್ರೀಯ ಆರೋಗ್ಯ ಮಿಷನ್‌ ಮಿಷನ್ ಸ್ಟೀರಿಂಗ್ ಗ್ರೂಪ್ ಆಶಾ ಕಾರ್ಯಕರ್ತೆಯರ ಪ್ರೋತ್ಸಾಹ ಧನವನ್ನು ಹೆಚ್ಚಿಸಲು ನಿರ್ಧರಿಸಿದೆ. ಮತ್ತು ಸರ್ಕಾರ ಈ ನಿಟ್ಟಿನಲ್ಲಿ ಮುಂದುವರಿಯಲಿದೆ ಎಂದು ತಿಳಿಸಿದಂತೆ ಕೂಡಲೇ ಕೇಂದ್ರದಿಂದ ಆದೇಶಿಸಬೇಕು. ಮತ್ತು

ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮತ್ತು ಫೆಡರೇಷನ್‌ಗಳ ಕರೆಯ ಮೇರೆಗೆ ಕೇಂದ್ರ ಸರ್ಕಾರದ ಕಾರ್ಮಿಕ-ವಿರೋಧಿ, ಜನ-ವಿರೋಧಿ ಹಾಗೂ ಕಾರ್ಪೊರೇಟ್ ಪರವಾದ ನೀತಿಗಳನ್ನು ಹಿಂಪಡೆಯಲು ಆಗ್ರಹಿಸಿ. ಜುಲೈ 9, 2025 ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ದಿನದಂದು ಸಲ್ಲಿಸುತ್ತಿರುವ ಪತ್ರ

ನಮ್ಮ ಸಂಘಟನೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಸಂಯೋಜಿತ AIUTUC ಆಗಿದೆ. AIUTUC ಸೇರಿದಂತೆ 10 ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮತ್ತು ಫೆಡರೇಷನ್‌ಗಳು ತಮ್ಮ ಕೇಂದ್ರ ಬಿಜೆಪಿ ಸರ್ಕಾರದ ಕಾರ್ಮಿಕ ವಿರೋಧಿ, ಜನ ವಿರೋಧಿ ನೀತಿಗಳ ವಿರುದ್ಧ, ವಿವಿಧ ಬೇಡಿಕೆಗಳ

ಈಡೇರಿಕೆಗೆ ಒತ್ತಾಯಿಸಿ ದೇಶದಾದ್ಯಂತ ತೀವ್ರವಾದ ಹೋರಾಟಗಳನ್ನು ಬೆಳೆಸುತ್ತಲೇ ಇವೆ. ಆದರೆ ತಮ್ಮ ಕೇಂದ್ರ ಸರ್ಕಾರವು ದೇಶದ ಕಾರ್ಮಿಕ ವರ್ಗದ ಹಲವಾರು ಪ್ರಮುಖ ಬೇಡಿಕೆಗಳನ್ನು ಮನ್ನಿಸಿ ಅವುಗಳಿಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳದೆ ಈ ಹಿಂದಿನ ಕೇಂದ್ರ ಕಾಂಗ್ರೆಸ್ ಸರ್ಕಾರದ ಅವೇ ಜನವಿರೋಧಿ, ಕಾರ್ಮಿಕ ವಿರೋಧಿ ನೀತಿಗಳಿಗೆ ಇನ್ನಷ್ಟು ಜನವಿರೋಧಿ ನೀತಿಗಳನ್ನು ಸೇರಿಸಿ, ಅತೀ ವೇಗವಾಗಿ ಜಾರಿಗೊಳಿಸುತ್ತಿರುವುದನ್ನು ಪ್ರತಿಭಟಿಸಿ, ಮತ್ತು ಕಾರ್ಮಿಕರ ಹಕ್ಕೊತ್ತಾಯಗಳನ್ನು ಪರಿಗಣಿಸಲು ಆಗ್ರಹಿಸಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಜುಲೈ 9, 2025 ರಂದು ಕರೆ ನೀಡಿವೆ.

ಪ್ರಮುಖ ಸಾಮಾಜಿಕ ಸೇವಾ ಕ್ಷೇತ್ರಗಳಾದ ಆರೋಗ್ಯ, ಶಿಕ್ಷಣ, ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಸರ್ಕಾರದ ಇಲಾಖೆಗಳಲ್ಲಿ ಕೆಳಸ್ತರದ ಜನತೆಗೆ ಸೇವೆ ಸಲ್ಲಿಸುತ್ತಿರುವ ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಮಿಕರು ಕಳೆದ ಹಲವಾರು ದಶಕಗಳಿಂದ ಅತ್ಯಂತ ನಿಕೃಷ್ಟ ವೇತನದಲ್ಲಿ ಸೇವೆ ಸಲ್ಲಿಸುತ್ತಿರುವರು. ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಗೌರವಧನ, ಪ್ರೋತ್ಸಾಹಧನದ ಹೆಸರಿನಲ್ಲಿ ದೇಶದ ಲಕ್ಷಾಂತರ ಮಹಿಳ= ಕಾರ್ಮಿಕರನ್ನು ಕಾರ್ಯಕರ್ತೆಯರೆಂದು ಸೇವೆ ಪಡೆದುಕೊಳ್ಳುತ್ತಾ, ಕಾರ್ಮಿಕ ಹಕ್ಕುಗಳಿಂದ ವಂಚಿತರನ್ನಾಗಿ ಮಾಡಿರುವರು. ಕನಿಷ್ಟ ವೇತನ ಸೇವಾ ಭದ್ರತೆ ಇಲ್ಲದೆ ಹಗಲಿರುಳು ಸೇವೆ ಸಲ್ಲಿಸುತ್ತಿರುವರು. ಸರ್ಕಾರ ಇವರ ಸೇವೆಗೆ ತಕ್ಕ ಪ್ರತಿಫಲ ನೀಡುವುದಿರಲಿ, ದುಡಿದಷ್ಟು ವೇತ ನೀಡದೇ ಈ ಬಡ ಹೆಣ್ಣುಮಕ್ಕಳನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿವೆ. ರಾಷ್ಟ್ರದ ತಳಮಟ್ಟದಲ್ಲಿ ಸದಾ ಸೇವೆಗೆ ಸಿದ್ಧರಿರುವ ಈ ಮಹಿಳಾ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಶಾಸನಬದ್ಧ ಕನಿಷ್ಟ ವೇತನ ಮತ್ತು ಸಾಮಾಜಿಕ ಭದ್ರತೆ ಒದಗಿಸಿ ಖಾಯಂ ಮಾಡಬೇಕು ಎಂದರು.

ಗಂಗಾವತಿ ತಾಲೂಕು ಅಧ್ಯಕ್ಷೆ ಜ್ಯೋತಿ ಲಕ್ಷ್ಮೀ ಮಾತನಾಡಿ ಕಳೆದ 3 ತಿಂಗಳ ಹಿಂದೆ, ರಾಷ್ಟ್ರೀಯ ಆರೋಗ್ಯ ಮಿಷನ್‌ನ ಸ್ಟೀರಿಂಗ್ ಗ್ರೂಪ್ ಆಶಾ ಕಾರ್ಯಕರ್ತೆಯರ ಪ್ರೋತ್ಸಾಹ ಧನವನ್ನು ಹೆಚ್ಚಿಸಲು ನಿರ್ಧರಿಸಿದೆ. ಮತ್ತು ಸರ್ಕಾರ ಈ ನಿಟ್ಟಿನಲ್ಲಿ ಮುಂದುವರಿಯಲಿದೆ ಎಂದು ದಿನಾಂಕ: 11-03-2025 ರಂದು ಮಂಗಳವಾರ ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜೆ.ಪಿ. ನಡ್ಡಾ ರಾಜ್ಯಸಭೆಗೆ ಮಾಹಿತಿ ನೀಡಿದ್ದರು.

ಆಶಾ ಕಾರ್ಯಕರ್ತೆಯರ ಸಂಭಾವನೆ ಹೆಚ್ಚಿಸುವಂತೆ ಕೆಲವು ರಾಜ್ಯಗಳಿಂದ ಬಂದ ಬೇಡಿಕೆಗಳ ಮಧ್ಯೆ ಇದನ್ನು ಹೇಳಲಾಗಿದೆ. ಮಿಷನ್ ಸ್ಪೀರಿಂಗ್ ಗ್ರೂಪ್ (MSG) ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿಯಲ್ಲಿ ನೀತಿ ನಿರೂಪಣೆ ಮತ್ತು ಕಾರ್ಯಾಚರಣಾ ಸಂಸ್ಥೆಯಾಗಿದೆ. ಪ್ರಶೋತ್ತರ ಅವಧಿಯಲ್ಲಿ ಪೂರಕ ಪ್ರಶ್ನೆಗಳಿಗೆ ಉತ್ತರಿಸಿದ ಶ್ರೀ ಜೆ.ಪಿ. ನಡ್ಡಾ, ದೇಶಾದ್ಯಂತ ಶಿಶು ಮತ್ತು ತಾಯಂದಿರ ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಆಶಾ ಕಾರ್ಯಕರ್ತೆಯರು ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸಿದ್ದರು ಮತ್ತು ಸರ್ಕಾರವು ತಳಮಟ್ಟದಲ್ಲಿ ಅವರ ಪಾತ್ರವನ್ನು ಗುರುತಿಸುತ್ತದೆ ಎಂದು ಹೇಳಿದರು. ಆರೋಗ್ಯ ಸಚಿವರು ಮೇಲ್ಮನೆಗೆ ತಿಳಿಸಿದ್ದರು.

“ಆಶಾ ಕಾರ್ಯಕರ್ತೆಯರು ಉತ್ತಮ ಕೆಲಸ ಮಾಡುತ್ತಿದ್ದಾರೆ ಮತ್ತು ತಳಮಟ್ಟದಲ್ಲಿ ಅವರ ಪ್ರಯತ್ನಗಳು ತಾಯಂದಿರ ಮರಣ ಪ್ರಮಾಣ. ಶಿಶು ಮರಣ ಪ್ರಮಾಣ (IMR) ಮತ್ತು ಐದು ವರ್ಷದೊಳಗಿನ ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡಿವೆ ಎಂದು ಶ್ರೀ ಜೆ.ಪಿ. ನಡ್ಡಾ, ಸಂಪೂರ್ಣವಾಗಿ ಕೃತಜ್ಞನಾಗಿದ್ದೇನೆ ಎನ್ನುತ್ತಾ, ಒಂದು ವಾರದ ಹಿಂದೆ, NHM ನ ಮಿಷನ್ ಸ್ಟೀರಿಂಗ್ ಗ್ರೂಪ್ ಸಭೆ ಸೇರಿತ್ತು, ಆಶಾ ಕಾರ್ಯಕರ್ತೆಯರು ತಮ್ಮ ಚಟುವಟಿಕೆಗಳಿಂದಾಗಿ ಅವರ ಆರ್ಥಿಕ ಪಾಲನ್ನು ಹೆಚ್ಚಿಸಬೇಕು ಎಂದು ನಾವು ಖಚಿತಪಡಿಸಿಕೊಂಡಿದ್ದೇವೆ. ಇದನ್ನು ಮಿಷನ್ ಸ್ಟೀರಿಂಗ್ ಗ್ರೂಪ್ ಅನುಮತಿಸಿದೆ ಮತ್ತು ನಾವು ಈ ನಿಟ್ಟಿನಲ್ಲಿ ಮುಂದುವರಿಯುತ್ತೇವೆ” ಎಂದು ಶ್ರೀ ಜೆ.ಪಿ. ನಡ್ಡಾ ಹೇಳಿದ್ದರು.ಈ ಹಿನ್ನಲೆಯಲ್ಲಿ ರಾಷ್ಟ್ರದ ಆಶಾ ಕಾರ್ಯಕರ್ತೆಯರಿಗೆ ಕೂಡಲೇ ಪ್ರೋತಾದರದ ಹೆಚ್ಚಳದ ಆದೇಶವನ್ನು ಮಾಡಿ ಅಗತ್ಯ ಆರ್ಥಿಕ ಅನುದಾನವನ್ನು ನೀಡಲು ಈ ದಿನದಂದು ರಾಜ್ಯದ ಕರ್ನಾಟಕ ರಾಜ್ಯದ ಎಲ್ಲಾ ಆಶಾ ಕಾರ್ಯಕರ್ತೆಯರು ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೂ ಹಾಗೂ ಕೇಂದ್ರ ಆರೋಗ್ಯ ಮಂತ್ರಿಗಳಾದ ಶ್ರೀ ಜೆ.ಪಿ. ನಡ್ಡಾ ಅವರಿಗೂ ಕೇಂದ್ರ ಸರ್ಕಾರಕ್ಕೂ ಈ ಮೂಲಕ ಆಗ್ರಹಿಸುತ್ತೇವೆ.

ಈ ಸಂದರ್ಭದಲ್ಲಿ ಗಂಗಾವತಿ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಲಾಲಬಿ, ಸಂಘದ ಸದಸ್ಯರಾದ ಆಪ್ರೀನ್ ಬೇಗಂ,ಗೌಸೀಯಾ,ಸುಮಾ ಸಿದ್ದೇಶ,ಮೀನಾಕ್ಷಿ, ಸರೋಜಬಾಯಿ,ದೀಪಾ,ಜಯಶ್ರೀ, ಸಮೀರಾಬೇಗಂ,ರೇಖಾ,ಈರಮ್ಮ,ಲಕ್ಷ್ಮೀದೇವಿ, ಸರ್ವಮಂಗಳ,ಲಲಿತಾ ಹಿರೇಮಠ, ಜ್ಯೋತಿ, ಸಂಗೀತ, ಶರಣಮ್ಮ,ಸೇರಿದಂತೆ ಇತರರು ಇದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!