ಸ್ನೇಹ ಸಿದ್ಧಿ ಸೇವಾ ಟ್ರಸ್ಟ್ ಹಾಗೂ ಎನ್.ಆರ್.ಆಸ್ಪತ್ರೆ,ಸಹಯೋಗದಲ್ಲಿ…!

- ಯಶಸ್ವಿಯಾಗಿ ಜರುಗಿದ ಮಹಿಳಾ ಆರೋಗ್ಯ ತಪಾಸಣೆ ಶಿಬಿರ:
ಗಂಗಾವತಿ: 28-05-2025 ಬುಧವಾರ ರಂದು ಬೆಳಿಗ್ಗೆ 9 ರಿಂದ ಸಂಜೆ 5 ವರೆಗೆ ಶಾದಿಮಹಲ್ ಮೆಹಬೂಬನಗರ, 1ನೇ ವಾರ್ಡ್, ಬಸಾಪಟ್ಟಣ ಗ್ರಾಮದಲ್ಲಿ ಸ್ನೇಹ ಸಿದ್ಧಿ ಸೇವಾ ಟ್ರಸ್ಟ್ (ರಿ) ಬಸಾಪಟ್ಟಣ ಹಾಗೂ ಎನ್. ಆರ್. ಆಸ್ಪತ್ರೆ, ವಡ್ಡರಹಟ್ಟಿ ಇವರ ಸಹಯೋಗದಲ್ಲಿ
“ಮಹಿಳಾ ಆರೋಗ್ಯ ತಪಾಸಣೆ ಶಿಬಿರವನ್ನು ಉಚಿತವಾಗಿ” ನಡೆಸಲಾಯಿತು.
ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸಿದ್ರಾಮಯ್ಯ ಸಿದ್ದಯ್ಯ ಗುರುವಿನ ಈ ಒಂದು ಗ್ರಾಮದಲ್ಲಿ ಆಯೋಜನೆ ಮಾಡಿದ ನಮ್ಮ ದಳಪತಿ ಹಾಗೂ ವೈದ್ಯರು ಸೇರಿಕೊಂಡು ಒಳ್ಳೆಯ ಕಾರ್ಯಕ್ರಮ ಮಾಡಿದ್ದಾರೆ, ನಮ್ಮ ಊರಿನವರಿಗೆ ಮತ್ತು ನಮ್ಮ ಸುತ್ತಮುತ್ತಲಿನ ಗ್ರಾಮದ ಮಹಿಳೆಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸುಮಾರು 413 ಜನ ಉಚಿತ ಆರೋಗ್ಯ ಶಿಬಿರದಲ್ಲಿ ಉಚಿತವಾಗಿ ತಪಾಸಣೆ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಐದು ಜನ ವೈದ್ಯರು ಇದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿರೂಪಾಕ್ಷಯ್ಯ ಸ್ಚಾಮಿ ಹಿರೇಮಠ, ಗ್ರಾಮದ ಹಿರಿಯ ಮುಖಂಡರಾದ ಯಮನಪ್ಪ ವಿಠಲಾಪೂರು, ಸಣ್ಣಕ್ಕಿನೀಲಪ್ಪ, ಶರಣೇಗೌಡ, ಕೆ.ಮೈಬುಸಾಬ, ಎಸ್.ರಾಮಕೃಷ್ಣ, ಧನಂಜಯ, ಎಸ್.ಮೈಬುಸಾಬ, ಸ್ನೇಹಸಿದ್ದಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮಹ್ಮದ್ ಸಾಬ ದಳಪತಿ, ಸೇರಿದಂತೆ ಇತರರು ಇದ್ದರು.