ತಾಲೂಕ ಸುದ್ದಿಗಳು

ವ್ಯಸನ ಮುಕ್ತರಾಗುವುದಕ್ಕೆ ಒಂದು ಉತ್ತಮ ಅವಕಾಶ – ಡಾ. ವಾದಿರಾಜ್ *

ಸಮೀಪದ ಮರಳಿ ಗ್ರಾಮದಲ್ಲಿ ನವೋದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಪ್ರಾರಂಭವಾಗಿರುವ ನವೋದಯ ಸಮಗ್ರ ವ್ಯಸನ ಮುಕ್ತ ಕೇಂದ್ರಕ್ಕೆ ಗಂಗಾವತಿ ಉಪ ವಿಭಾಗ ಆಸ್ಪತ್ರೆಯ ಮನೋರೋಗ ತಜ್ಞರಾದ ಡಾ. ವಾದಿರಾಜ ಅವರು ಭೇಟಿ ನೀಡಿ ಕೇಂದ್ರದಲ್ಲಿ ಇರುವ ಪ್ರಶಿಕ್ಷಣಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ವ್ಯವಸ್ಥೆ ಮತ್ತು ಚಿಕಿತ್ಸೆ ಬಗ್ಗೆ ಚರ್ಚಿಸಿದರು ಹಾಗೂ ಈ ಒಂದು ಕೇಂದ್ರದ ಸೌಲಭ್ಯಗಳನ್ನ ನೋಡಿ ಪ್ರಶಂಶಿಸಿದರು ಹಾಗೂ ಸಮಾಜದಲ್ಲಿ ಈ ಒಂದು ಕೇಂದ್ರವು ಉತ್ತಮವಾದಂತಹ ವಿಶಿಷ್ಟವಾದಂತಹ ಪ್ರಕ್ರಿಯೆಗಳನ್ನು ಒಳಗೊಡಿಸಿಕೊಂಡು ಹಲವಾರು ವ್ಯಸನಗಳಿಗೆ ಉತ್ತಮ ಹಾಗೂ ವಿಶಿಷ್ಟ ಪ್ರಕ್ರಿಯೆಗಳಿಂದ ವ್ಯಸನದಿಂದ ಮುಕ್ತಿ ಹೊಂದಿಸಿ ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಹಾಗೂ ವ್ಯಸನ ಮುಕ್ತ ಹೊಂದಲು ಈ ಕೇಂದ್ರವು ಉತ್ತಮವಾದಂತಹ ಅವಕಾಶವನ್ನು ಒದಗಿಸುತ್ತದೆ ಎಂದು ತಿಳಿಸಿದರು ಮತ್ತು ಈ ವ್ಯಸನ ಮುಕ್ತ ಕೇಂದ್ರದ ಉಪಯೋಗವನ್ನು ಸಮಾಜದ ಎಲ್ಲ ಜನರು ಪಡೆದುಕೊಳ್ಳಬೇಕೆಂದು ತಿಳಿಸಿದರು. ಹಾಗೂ ಈ ಒಂದು ಸಂದರ್ಭದಲ್ಲಿ ಉಪ ವಿಭಾಗ ಆಸ್ಪತ್ರೆ ಗಂಗಾವತಿ ಆಪ್ತಸಮಾಲೋಚಕರಾದ ಶ್ರೀ ಯಮನೂರಪ್ಪ, ಶ್ರೀ ಮಲ್ಲಿಕಾರ್ಜುನ್, ಜಿಲ್ಲಾಸ್ಪತ್ರೆ ಸಿಬ್ಬಂದಿಗಳು ಹಾಗೂ ಕೇಂದ್ರದ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!