ಗಂಗಾವತಿತಾಲೂಕ ಸುದ್ದಿಗಳು
ಮುನಿರಾಬಾದ್ ಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ಅವರು ಚಾಲನೆ ನೀಡಿದರು.
ಇಂದು ಗಂಗಾವತಿ ವಿಧಾನಸಭಾ ಕ್ಷೇತ್ರದ ಹನುಮನಹಳ್ಳಿಯಲ್ಲಿ ಕೇಂದ್ರ ರಸ್ತೆ ನಿಧಿ (ಸಿ.ಆರ್.ಎಫ್) ಯೋಜನೆ ಅಡಿ ಸುಮಾರು 3.31ಕೋಟಿ ರೂ. ವೆಚ್ಚದಲ್ಲಿ ಯಲಬುರ್ಗಾ – ಕನಕಗಿರಿ ಹಾಗೂ ಗಂಗಾವತಿ – ಮುನಿರಾಬಾದ್ ಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಂಸದರಾದ ಕೆ ರಾಜಶೇಖರ್ ಹಿಟ್ನಾಳ್, ಮುಖಂಡರಾದ ಮನೋಹರ್ ಗೌಡ ಹೇರೂರು, ಡಿ.ಕೆ ಆಗೋಲಿ, ವೀರೇಶ್ ಬಲಕುಂದಿ, ಟಿ.ಜಿ ಬಾಬು, ವೀರೇಶ್ ಸೂಳೆಕಲ್, ಚನ್ನವೀರಗೌಡ್ರು, ವೆಂಕಟೇಶ್ ಜಬ್ಬಲಗುಡ್ಡದ, ಜಂಗ್ಲಿಯ ಬಾಬು ರೆಡ್ಡಿ, ಆನೆಗುಂದಿಯ ಮಲ್ಲಿಕಾರ್ಜುನ ಸ್ವಾಮಿ, ರಾಘವೇಂದ್ರ ಮಲ್ಲಾಪುರ, ಹನುಮನಹಳ್ಳಿಯ ವೀರೇಶ್, ಆನೆಗುಂದಿಯ ರಾಜಶೇಖರ್, ರಾಂಪುರ ಕಾಶಿ, ಪುಟ್ಟಣ್ಣ, ಕೊರಮ್ಮ ಕ್ಯಾಂಪ್ನ ಶ್ರೀನಿವಾಸ್, ಸಾಣಾಪುರದ ಮಲ್ಲಿ ಹಾಗೂ ಇತರರು ಉಪಸ್ಥಿತರಿದ್ದರು.