ಕಾರಟಗಿ

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರತಿಭಾ ಸ್ಕೂಲ್ ತಾಲೂಕಿಗೆ ಪ್ರಥಮ ಸ್ಥಾನ , ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿ ಕೀರ್ತನಾ

ವರದಿ ಸುಂದರರಾಜ್ BA ಕಾರಟಗಿ

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರತಿಭಾ ಸ್ಕೂಲ್ ತಾಲೂಕಿಗೆ ಪ್ರಥಮ ಸ್ಥಾನ , ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿ ಕೀರ್ತನಾ

ಕಾರಟಗಿ : ಪಟ್ಟಣದ ಪ್ರತಿಭಾ ಸ್ಕೂಲ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 100 ಕ್ಕೆ 100% ಫಲಿತಾಂಶ ಪಡೆಯುವ ಮೂಲಕ ಅತ್ಯುತ್ತಮ ಶಾಲೆಯಾಗಿ ಹೆಸರು ಪಡೆದಿದೆ, ತಾಲೂಕಿನ ಒಟ್ಟು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರತಿಭಾ ಪ್ರಾಥಮಿಕ ಪ್ರೌಢ ಶಾಲೆ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದಿದೆ,

ಪ್ರತಿಭಾ ಕನ್ನಡ ಮಾಧ್ಯಮ ಪ್ರೌಢಶಾಲೆ ಕಾರಟಗಿ. ಎಪ್ರಿಲ್ 2026ರ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಶಾಲೆ ಶೇಕಡ ನೂರರಷ್ಟು ಫಲಿತಾಂಶವನ್ನು ಸಾಧಿಸಿದೆ. ಕೀರ್ತನ ತಂದೆ ಮಹೇಶ್ 600/625 ಪ್ರಥಮ ಶ್ರೇಣಿ,ಹರ್ಷಿಯ 548/625 ದ್ವಿತೀಯ ಶ್ರೇಣಿ, ವಿನಾಯಕ ಗೋಡಿ 457/625 ತೃತೀಯ ಶ್ರೇಣಿ, ವರ್ಷಿಣಿ 455/625 ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಒಟ್ಟಾರೆಯಾಗಿ ಪರೀಕ್ಷೆಗೆ ಹಾಜರಾದ 15 ವಿದ್ಯಾರ್ಥಿಗಳಲ್ಲಿ ಇಬ್ಬರು ಡಿಸ್ಟಿಂಕ್ಷನ್ ಐದು ಜನ ಫಸ್ಟ್ ಕ್ಲಾಸ್ ಎಂಟು ಜನ ಸೆಕೆಂಡ್ ಕ್ಲಾಸ್ ನಲ್ಲಿ ಉತ್ತೀರ್ಣರಾಗಿ ನೂರಕ್ಕೆ ನೂರರಷ್ಟು ಫಲಿತಾಂಶವನ್ನು ಪಡೆದಿದ್ದು ಶಾಲಾ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿರುತ್ತಾರೆ.625 ಕ್ಕೆ 600 ಅಂಕ ಪಡೆದ ವಿದ್ಯಾರ್ಥಿ ಕುಮಾರಿ ಕೀರ್ತನಾ ಅವರನ್ನು ಶಾಲೆಯ ಮುಖ್ಯೋಪಾಧ್ಯರಾದ ಗೌರವಾನ್ವಿತ ಪ್ರಭಾಕರ ಗೋಡೆ ಅವರು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.ಈ ಸಂಧರ್ಭದಲ್ಲಿ ಮಾತನಾಡಿದ ಅವರು ಫಲಿತಾಂಶ ಎನ್ನೋದು ಅದೃಷ್ಟವಲ್ಲ ಅದು ನಿರಂತರ ವಿಧ್ಯಾರ್ಥಿಗಳ ಪರಿಶ್ರಮದಿಂದ ಮಾತ್ರ ಸಾಧ್ಯ. ನಮ್ಮ ಶಾಲೆಯ ವಿದ್ಯಾರ್ಥಿ ಕುಮಾರಿ ಕೀರ್ತನಾ ಇಡೀ ತಾಲೂಕಿಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ನಮ್ಮ ವಿಧ್ಯಾ ಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ ಎಂದು ವಿದ್ಯಾರ್ಥಿಗೆ ಸಿಹಿ ತಿನಿಸಿ ಹರ್ಷ ವ್ಯಕ್ತಪಡಿಸಿದರು.

ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಕುಮಾರಿ ಕೀರ್ತನಾ ಅವರು ಮಾತನಾಡಿ 625 ಕ್ಕೆ 625 ಅಂಕ ಪಡೆಯುವ ನಂಬಿಕೆ ಇತ್ತು. ಆದ್ರೆ 600 ಅಂಕ ಮಾತ್ರ ಬಂದಿವೆ. ಫಲಿತಾಂಶದ ಬಗ್ಗೆ ತುಂಬಾ ನಂಬಿಕೆ ಇತ್ತು. ಟೀಚರ್ಸ್ ಮಾರ್ಗದರ್ಶನ ನಾನು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಲಾಗಳು ಸಹಕಾರಿಯಾಗಿದೆ ಹಾಗೂ ಪಾಲಕರ ಸಪೋರ್ಟ್ ಬಹು ಮುಖ್ಯವಾಗಿದೆ ಎಂದರು

Related Articles

Leave a Reply

Your email address will not be published. Required fields are marked *

Back to top button
error: Content is protected !!