ಕಾರಟಗಿ

TC ಕೊಡದ ಖಾಸಗಿ ಶಾಲೆ ! 28 ಸಾವಿರ ಬಾಕಿ ಶುಲ್ಕಕಕ್ಕೆ 2ನೆಯ ತರಗತಿ ವಿದ್ಯಾರ್ಥಿಗಳ ಶಿಕ್ಷಣ ಅತಂತ್ರ ! ನಲುಗಿದ ಬಡ ವಿದ್ಯಾರ್ಥಿಗಳು

ವಿಶೇಷ ವರದಿ ಸುಂದರರಾಜ್ BA ಕಾರಟಗಿ

ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದೆಂದು ಮಕ್ಕಳ ಕಡ್ಡಾಯ ಶಿಕ್ಷಣ ಹಕ್ಕು ಒತ್ತಿ ಹೇಳುತ್ತದೆ, ಹಾಗೂ ಮಕ್ಕಳಿಗೆ ಪೂರಕ ಶಿಕ್ಷಣ ನೀಡಲು ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ, ಆದರೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ವಿದ್ಯಾರ್ಥಿಗಳಿಬ್ಬರ ಶಿಕ್ಷಣ ಅತಂತ್ರ ಸ್ಥಿತಿ ತಲುಪಿದೆ. ಹೌದು
ಕಾರಟಗಿ ತಾಲೂಕಿನ ನಾಗನಕಲ್ ಗ್ರಾಮದ

ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಾದ ಪೃಥ್ವಿ ತಂದೆ ಶರಣಪ್ಪ ಹಾಗೂ ಸಂಗಮೇಶ್ ತಂದೆ ಶರಣಪ್ಪ ಇವರು ಎರಡನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ ಶೈಕ್ಷಣಿಕ ವರ್ಷ ಪ್ರಾರಂಭವಾಗಿ 03ತಿಂಗಳ ವಾದರೂ  ಇನ್ನೂವರೆಗೂ ಅಡ್ಮಿಷನ್ ಆಗಿಲ್ಲ ಪ್ರವೇಶಕ್ಕಾಗಿ ಕಾಯುತ್ತಿದ್ದಾರೆ. ಈ ವಿಧ್ಯಾರ್ಥಿಗಳು ಈ ಮೊದಲು ಕಾರಟಗಿ ಪಟ್ಟಣದ ರಾಮನಗರದಲ್ಲಿರುವ ವಿಜ್ಞಾನ ಜ್ಯೋತಿ ಶಾಲೆಯಲ್ಲಿ ಒಂದನೇ ತರಗತಿ ಅಭ್ಯಾಸ ಮಾಡಿದ್ದು ಈ ವಿದ್ಯಾರ್ಥಿಗಳಿಗೆ ಆ ಶಾಲೆಯ ವರ್ಗಾವಣೆ ಪತ್ರವನ್ನು ಸದರಿ ಅಭ್ಯಾಸ ಮಾಡುತ್ತಿರುವ ನಾಗನಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀಡಿರುವುದಿಲ್ಲ. ಹೀಗಾಗಿ ಆ ಮಕ್ಕಳ ಶಾಲಾ ಪ್ರವೇಶ ನಡೆದಿಲ್ಲ.

ಈ ಕುರಿತು ನಾಗನಕಲ್ ಶಾಲೆಯ ಮುಖ್ಯೋಪಾಧ್ಯಾಯರಾದ ಸಂಗಪ್ಪ ಇವರು ರಾಮನಗರದ ವಿಜ್ಞಾನ ಜ್ಯೋತಿ ಶಾಲೆಯ ಆಡಳಿತ ಮಂಡಳಿ ಗೆ ಪತ್ರವನ್ನುಸಹ ಬರೆದಿರುತ್ತಾರೆ. ಹಾಗೂ ಎಸ ಡಿಎಂಸಿ ಅಧ್ಯಕ್ಷರಾದ ಆಂಜನೇಯ ಇವರು ಸಹ ಹಲವು ಬಾರಿ ಮೌಕಿಕವಾಗಿ ಕೇಳಿಕೊಂಡಿರುತ್ತಾರೆ.ಸದರಿ ವಿದ್ಯಾರ್ಥಿಗಳ ವರ್ಗಾವಣೆ ಪತ್ರ ನೀಡುವಂತೆ ಮನವಿಯನ್ನು ಸಹ ಮಾಡಿರುತ್ತಾರೆ. ಆದರೆ ಇಲ್ಲಿವರೆಗೆ ಅವರು ವರ್ಗಾವಣೆ ಪತ್ರ ನೀಡಿರುವುದಿಲ್ಲ. ಎರಡು ವಿದ್ಯಾರ್ಥಿಗಳ ಬಾಕಿ ಶುಲ್ಕ ನೀಡಿದರೆ ಮಾತ್ರ ವರ್ಗಾವಣೆ ಪತ್ರ ನೀಡುತ್ತೇವೆ ಇಲ್ಲವಾದರೆ ಇಲ್ಲ ಎಂದು ವಿಜ್ಞಾನ ಜ್ಯೋತಿಯ ಆಡಳಿತ ಮಂಡಳಿ ಹೇಳಿರುತ್ತಾರೆ.

ಹೀಗಾಗಿ ನಾಗನಕಲ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ವರ್ಗಾವಣೆ ಪತ್ರ ಇಲ್ಲದೆ ಪ್ರವೇಶ ಇನ್ನುವರೆಗೆ ನಡೆದಿರುವುದಿಲ್ಲ ಹೀಗಾಗಿ ಸದರಿ ವಿದ್ಯಾರ್ಥಿಗಳ ಶಿಕ್ಷಣದ ಬದುಕು ಅತಂತ್ರ ಸ್ಥಿತಿಯಲ್ಲಿದೆ, ವಿಜ್ಞಾನ ಜ್ಯೋತಿ ಶಾಲೆಯಲ್ಲಿ ಈ ವಿದ್ಯಾರ್ಥಿಗಳ ಒಂದನೇ ತರಗತಿಯ ಬಾಕಿ ಶುಲ್ಕ 28 ಸಾವಿರ ರೂಪಾಯಿ ಇದೆ ಬಾಕಿ ಶುಲ್ಕ ನೀಡಿದರೆ ಮಾತ್ರ ವರ್ಗಾವಣೆ ಪತ್ರ ನೀಡುತ್ತೇವೆ ಎನ್ನುತ್ತಿದ್ದಾರೆ ಶಾಲಾ ಮುಖ್ಯೋಪಾಧ್ಯಾಯರು. ಆದರೆ ವಿಧ್ಯಾರ್ಥಿಗಳದ್ದು ಕಿತ್ತು ತಿನ್ನುವ ಬಡತನ ಪಾಲಕರು ಕೂಲಿ ಕೆಲಸ ಮಾಡಿ ಜೀವನ ನಡೆಸುವುದೇ ಕಷ್ಟವಾಗಿದೆ ಇವರು ಬಾಕಿ ಶುಲ್ಕ ನೀಡಲು ಆಗುವುದಿಲ್ಲವೆಂದು ನಾಗನಕಲ್ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ವಿವರಿಸಿದ್ದಾರೆ, ಆದರೆ ಇದೊಂದೇ ಶುಲ್ಕ ಕಾರಣದಿಂದಾಗಿ ವಿದ್ಯಾರ್ಥಿಗಳ ಶಿಕ್ಷಣ ಕುಂಠಿತಗೊಳ್ಳಬಾರದು ಈ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳು
ಮಕ್ಕಳ ಹಿತದೃಷ್ಟಿಯಿಂದ ಕೂಡಲೆ ವಿಜ್ಞಾನ ಜ್ಯೋತಿ ಶಾಲೆಯಿಂದ ವರ್ಗಾವಣೆ ಪತ್ರ ಕೊಡಿಸಬೇಕು ಹಾಗೂ ಮಕ್ಕಳ ಶೈಕ್ಷಣಿಕ ಹಿತಾದೃಷ್ಟಿಯನ್ನು ಕಾಪಾಡಬೇಕಾಗಿದೆ

Related Articles

Leave a Reply

Your email address will not be published. Required fields are marked *

Back to top button
error: Content is protected !!