ಕೆರೆಯಂತಾದ ರಸ್ತೆ, ಸಂಚಾರಕ್ಕೆ ತೊಂದರೆ ! ರಸ್ತೆ ಅಭಿವೃದ್ಧಿ ಪಡಿಸುವಂತೆ ವಣಗೇರಿ ಒತ್ತಾಯ

ವರದಿ ಸುಂದರರಾಜ್ BA ಕಾರಟಗಿ
ಕಾರಟಗಿ ; ಒಂದು ವಾರದಿಂದ ಉತ್ತರ ಕರ್ನಾಟಕದಾದ್ಯಂತ ಮೋಡ ಮುಚ್ಚಿದ ವಾತಾವರಣ ಸೃಷ್ಟಿಯಾಗಿದೆ ನಿರಂತರ ಮಳೆ ಸುರಿಯುತ್ತಿದೆ ಇದರಿಂದ ಸಾರ್ವಜನಿಕರ ಜೀವನ ಅಸ್ತವ್ಯಸ್ಥವಾಗಿದ್ದು, ಮಳೆಯಿಂದ ರೈತರು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ನಿರಂತರ ಮಳೆಯಿಂದ ಬೆಳೆಗಳು ನಷ್ಟವಾಗಿವೆ ಹಾಗೂ ನಿರಂತರ ಮಳೆಯಿಂದ ಸಂಚಾರಗಳು ಸ್ಥಗಿತಗೊಂಡಿವೆ.ಜಿಲ್ಲೆಯ ಕಾರಟಗಿ ತಾಲೂಕಿನ ಚಳ್ಳೂರು ಗ್ರಾಮ ಹಾಗೂ ಸೋಮನಾಳ ಗ್ರಾಮ ಸಂಪರ್ಕಿಸುವ ರಸ್ತೆಯ ಮೇಲೆ ತಗ್ಗು ಗುಂಡಿಗಳು ಸೃಷ್ಟಿಯಾಗಿವೆ, ಸತತ ಸುರಿಯುವ ಮಳೆಯಿಂದಾಗಿ ರಸ್ತೆ ಕೆರೆಯಂತಾಗಿದೆ ಹೊಲಗದ್ದೆಗಳಿಗೆ ಬರುವ ರೈತರಿಗೆ ರಸ್ತೆ ದಾಟುವುದೇ ಸವಾಲಾಗಿದೆ,
ಹಲವು ರೈತರು ಜನರು ರಸ್ತೆ ದಾಟುವಾಗ ಬಿದ್ದು ಗಾಯಗೊಂಡ ಘಟನೆಗಳು ನಡೆಯುತ್ತಿವೆ. ಈ ಕುರಿತು ರಸ್ತೆ ಅಭಿವೃದ್ಧಿ ಪಡಿಸುವಂತೆ ಪಂಚಾಯತಿ ಅಧಿಕಾರಿಗಳಿಗೆ ಹಲವು ಬಾರಿ ಮೌಖಿವಾಗಿ ಹೇಳಿದರು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಲಾಗುತ್ತಿದೆ ಈ ಕೂಡಲೇ ರಸ್ತೆ ಅಭಿವೃದ್ಧಿ ಪಡಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಕಾರಟಗಿ ತಾಲೂಕ ದಲಿತ ವಿಮೋಚನ ಸೇನೆಯ ಪ್ರಧಾನ ಕಾರ್ಯದರ್ಶಿ ಶರಣಪ್ಪ ವಣಿಗೇರಿ ಅಧಿಕಾರಿಗಳಲ್ಲಿ ವಿನಂತಿಸಿದ್ದಾರೆ