ರೆಡ್ಡಿ ಬಂಗಾರದ ಕಡ್ಡಿ , ವಿಜೃಂಭಣೆಯಿಂದ ಜರುಗಿದ ಶ್ರೀ ಮಹಾ ಸಾಧ್ವಿ ಹೇಮರೆಡ್ಡಿ ಮಲ್ಲಮ್ಮನವರ 603 ನೇಯ ಜಯಂತೋತ್ಸವ
ವರದಿ ಸುಂದರರಾಜ್ BA ಕಾರಟಗಿ

ರೆಡ್ಡಿ ಬಂಗಾರದ ಕಡ್ಡಿ , ವಿಜೃಂಭಣೆಯಿಂದ ಜರುಗಿದ ಶ್ರೀ ಮಹಾ ಸಾಧ್ವಿ ಹೇಮರೆಡ್ಡಿ ಮಲ್ಲಮ್ಮನವರ 603 ನೇಯ ಜಯಂತೋತ್ಸವ
ಕಾರಟಗಿ ; ರೆಡ್ಡಿ ಬಂಗಾರದ ಕಡ್ಡಿ ಎನ್ನುವ ಮಾತಿನ ತಾತ್ಪರ್ಯದಂತೆ ಕಾರಟಗಿಯಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ನವರ 603 ನೆಯ ಜಯಂತೋತ್ಸವ ಅತ್ಯಂತ ಸಡಗರ ಸಂಭ್ರಮ ಉತ್ಸವದಲ್ಲಿ ಸಂಪನ್ನ ಪೂರ್ಣವಾಯಿತು. ಇದೆ ಮೊದಲ ಬಾರಿಗೆ ಕಾರಟಗಿ ತಾಲೂಕಿನ ಇಡೀ ರೆಡ್ಡಿ ಸಮಾಜದ ಸಾವಿರಾರು ಬಾಂಧವರು ಹೇಮ ರೆಡ್ಡಿ ಮಲ್ಲಮ್ಮ ನವರ ಜಯಂತೋತ್ಸವದಲ್ಲಿ ಪಾಲ್ಗೊಂಡು ರೆಡ್ಡಿ ಸಮಾಜದ ಕೀರ್ತಿಯನ್ನು ಜಿಲ್ಲಾಧ್ಯಂತ ಹರಡಿಸಿದರು. ಎಪಿಎಂಸಿಯ ಪನ್ನಾಪುರ ಕ್ರಾಸ್ ಹತ್ತಿರವಿರುವ ಬನ್ನಿ ಮಹಾಕಾಳಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸುವ ಮೂಲಕ ಮಹಾ ಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ನವರ ಭವ್ಯ ಮೆರವಣಿಗೆ ಪ್ರಾರಂಭಿಸಲಾಯಿತು, ತಾಲೂಕ ವೇಮ ಹೇಮ ರೆಡ್ಡಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಆಯೋಜನೆ ಮಾಡಿರುವ ಶಿವ ಶರಣೆ ಹೇಮರೆಡ್ಡಿ ಮಲ್ಲಮ್ಮ ನವರ 603 ಜಯಂತೋತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಅಲಂಕಾರಗೊಂಡ ಟ್ರ್ಯಾಕ್ಟರ್ ನಲ್ಲಿ ಶ್ರೀ ಹೇಮರೆಡ್ಡಿ ಮಲ್ಲಮ್ಮನವರ ಚಿತ್ರಪಟಕ್ಕೆ ಗಣ್ಯರ ಮೂಲಕ ಪೂಜೆ ಸಲ್ಲಿಸಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು ಕುಂಭ ಕಳಸ ಹೊತ್ತು ನೂರಾರು ಮಹಿಳೆಯರಿಂದ ಮೆರವಣಿಗೆ ಸಾಗಿತು ಮಾಜಿ ಸಚಿವ ಸನ್ಮಾನ್ಯ ನಾಗಪ್ಪ ಸಾಲೋಣಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ಎಸ್ ತಂಗಡಗಿ ಹಾಗೂ ಶ್ರೀಶ್ರೀ ವೇಮಾನಂದ ಮಹಾಸ್ವಾಮಿಗಳು ಪಾಲ್ಗೊಂಡಿದ್ದರು, ಮೆರವಣಿಗೆಯಲ್ಲಿ ವಿವಿಧ ಸಮಾಜಗಳ ಮುಖಂಡರು ಪಾಲ್ಗೊಂಡು ಶ್ರೀ ಹೇಮರೆಡ್ಡಿ ಮಲ್ಲಮ್ಮನವರ ಚಿತ್ರಪಟಕ್ಕೆ ಹೋಮಾಲೆಗಳನ್ನು ಹಾಕಿ ನಮಸ್ಕರಿಸಿದರು
ವಿವಿಧ ವಾದ್ಯ ಮೇಳಗಳೊಂದಿಗೆ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಡೊಳ್ಳು ಕುಣಿತ ಸಂಭ್ರಮದೊಂದಿಗೆ ಜಯಂತೋತ್ಸವದ ಮೆರವಣಿಗೆ ಪಟ್ಟಣದ ಹಳೆಯ ಬಸ್ ಸ್ಟ್ಯಾಂಡ್ ಮೂಲಕ ಕನಕದಾಸ ವೃತ್ತ ತಲುಪಿ ಕೆಪಿಎಸ್ ಶಾಲಾ ಆವರಣದ ಸಿದ್ಧೇಶ್ವರ ರಂಗಮಂದಿರಕ್ಕೆ ತಲುಪಿತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಜನರಿಗೆ ವೇದಿಕೆಯ ಮುಂಭಾಗದಲ್ಲಿ ಉತ್ತಮ ಆಸನಗಳನ್ನು ವ್ಯವಸ್ಥೆ ಮಾಡಲಾಗಿತ್ತು ಶ್ರೀ ಹೇಮ ರೆಡ್ಡಿ ಮಲ್ಲಮ್ಮನವರ 603 ನೆಯ ಜಯಂತೋತ್ಸವ ವೇದಿಕೆಯನ್ನು ಸುಂದರವಾಗಿ ಅಲಂಕರಿಸಲಾಗಿತ್ತು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹರಿಹರ ತಾಲೂಕಿನ ಎರೆಹೊಸಳ್ಳಿ ಹೇಮ ವೇಮ ಸದ್ಭೋದನ ವಿದ್ಯಾಪೀಠದ ಶ್ರೀ ಶ್ರೀ ಶ್ರೀ ವೇಮಾನಂದ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು, ಬೂದಗುಂಪ ಗ್ರಾಮದ ಶ್ರೀ ಕೊಟ್ಟೂರೇಶ್ವರ ಶಾಖ ಮಠದ ಶ್ರೀ ಶ್ರೀ ಶ್ರೀ ಮ.ನಿ.ಪ್ರ. ಶ್ರೀ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ಶ್ರೀ ಮರಳು ಸಿದ್ದಯ್ಯಸ್ವಾಮಿಗಳು ಹೀರೆಮಠ ಇವರುಗಳು ವಹಿಸಿದ್ದರು,
ಉದ್ಘಾಟನೆಯನ್ನು ಸಾರಿಗೆ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ನೆರವೇರಿಸಿದರು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರು ಹೇಮರೆಡ್ಡಿ ಮಲ್ಲಮ್ಮನವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿದರು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಪ್ರವಾಸೋದ್ಯಮ ಸಚಿವರಾದ ಶ್ರೀ ಎಚ್ ಕೆ ಪಾಟೀಲ್ ಅವರು ಹಾಗೂ ಸಣ್ಣ ಕೈಗಾರಿಕಾ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪುರ ಬೆಂಗಳೂರು ಇವರು ಮಹಾಯೋಗಿ ವೇಮನ ಭಾವ ಚಿತ್ರಕ್ಕೆ ಪುಷ್ಪಾರ್ಚನೆಯನ್ನು ನೆರವೇರಿಸಿದರು ರೆಡ್ಡಿ ಸಮಾಜದ ತಾಲೂಕ ಘಟಕ ಅಧ್ಯಕ್ಷರಾದ ಶ್ರೀ ರುದ್ರಗೌಡ ಪಾಟೀಲ್ ನಂದಿಹಳ್ಳಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು ವಿಶೇಷ ಆಹ್ವಾನಿತರಾಗಿ ಮುಖ್ಯಮಂತ್ರಿಗಳ ಆರ್ಥಿಕ ಸಲಹಾಗಾರರು ಮತ್ತು ಯಲಬುರ್ಗಾ ಶಾಸಕರಾದ ಶ್ರೀ ಬಸವರಾಜ ರಾಯರೆಡ್ಡಿ ಗಂಗಾವತಿಯ ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ ಸಿಂಧನೂರು ಶಾಸಕರಾದ ಹಂಪನಗೌಡ ಬಾದರ್ಲಿ ಇವರು ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ರೆಡ್ಡಿ ಸಮಾಜದಲ್ಲಿ ಸಾಧನೆಗೈದ
ಸಹಾಯಕ ಪ್ರಾಧ್ಯಾಪಕರಾದ ಡಾ. ಚನ್ನಬಸಪ್ಪ ಆಸ್ಪರಿ ಬೇವಿನಹಾಳ,
ಬಳ್ಳಾರಿ ಸಂಚಾರಿ ಠಾಣೆಯ ಸಿಪಿಐ ಶ್ರೀ ಅಯ್ಯನಗೌಡ ,
ಗೋಗಿ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ದೇವೇಂದ್ರ ರೆಡ್ಡಿ ನವಲಿ, ಗಂಗಾವತಿಯ ಡಿವೈಎಸ್ಪಿ ಶ್ರೀ ಸಿದ್ಧಲಿಂಗಪ್ಪ ಗೌಡ ಆರ್ ಪಾಟೀಲ್, ಗಂಗಾವತಿಯ ಹೃದಯ ರೋಗ ತಜ್ಞರಾದ ಡಾಕ್ಟರ್ ಜಿ ಚಂದ್ರಪ್ಪ, ಗಂಗಾವತಿಯ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ದೊಡ್ಡಪ್ಪ ದೇಸಾಯಿ ಚಳ್ಳೂರು
6 ಜನ ಮಹನೀಯರಿಗೆ ಗೌರವಿಸಿ ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ರೆಡ್ಡಿ ಸಮಾಜದ ಕಾರಟಗಿ ತಾಲೂಕ ಘಟಕ ಪದಾಧಿಕಾರಿಗಳು ಮತ್ತು ಕಾರಟಗಿ ತಾಲೂಕಿನ ವಿವಿಧ ಗ್ರಾಮಗಳ ರೆಡ್ಡಿ ಸಮಾಜದ ಬಾಂಧವರು ಪಾಲ್ಗೊಂಡಿದ್ದರು ಕಾರ್ಯಕ್ರಮಕ್ಕೆ ಆಗಮಿಸಿದ ಸಾವಿರಾರು ಜನರಿಗೆ ಅನ್ನ ಸಂತರ್ಪಣೆಯನ್ನು ನೆರವೇರಿಸಲಾಯಿತು