ಕೂಲಿ ದಲಿತ ಜನಾಂಗ ಬಳಸುವ ಜಾಗದಲ್ಲಿ ಅಧಿಕಾರಿಗಳಿಂದ ಟಿಸಿ ನಿರ್ಮಾಣ ಮಹಿಳೆಯರಿಂದ ವಿರೋಧ

ಕೂಲಿ ದಲಿತ ಜನಾಂಗ ಬಳಸುವ ಜಾಗದಲ್ಲಿ ಅಧಿಕಾರಿಗಳಿಂದ ಟಿಸಿ ನಿರ್ಮಾಣಕ್ಕೆ ಯತ್ನ ಮಹಿಳೆಯರಿಂದ ವಿರೋಧ
ಕಾರಟಗಿ ; ತಾಲೂಕಿನ ಬಸವಣ್ಣ ಕ್ಯಾಂಪಿನಲ್ಲಿ ದಲಿತ ಕೂಲಿ ಜನಾಂಗ ಬಳಸುವ ಜಾಗದಲ್ಲಿ ಕೆಇಬಿ ಅಧಿಕಾರಿಗಳು ವಿದ್ಯುತ್ ಟಿಸಿಯನ್ನು ನಿರ್ಮಿಸಲು ಮುಂದಾಗಿರುವುದಕ್ಕೆ ಗ್ರಾಮದ ಕೂಲಿ ದಲಿತ ಜನಾಂಗದಿಂದ ವಿರೋಧ ವ್ಯಕ್ತವಾಗಿದೆ , ಅಧಿಕಾರಿಗಳು ಖಾಸಗಿ ವ್ಯಕ್ತಿಯೊಬ್ಬರ ಮಾತು ಕೇಳಿ ಪಕ್ಕದಲ್ಲಿರುವ ಸುರಕ್ಷಿತವಾದ ಟಿಸಿಯನ್ನು ಸಾರ್ವಜನಿಕರ ಸ್ಥಳದಲ್ಲಿ ಸ್ಥಳಾಂತರಿಸಲು ಮುಂದಾಗಿರುವುದಕ್ಕೆ ಮಹಿಳೆಯರು ಮತ್ತು ಓಣಿಯ ಜನರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ, ಕೂಲಿ ದಲಿತ ಜನಾಂಗಕ್ಕೆ ಸ್ಥಳಾವಕಾಶವಿಲ್ಲದೆ ಕಳೆದ 50 ವರ್ಷಗಳಿಂದ ವಾರ್ಡ್ ನಂಬರ್ ಎರಡರಲ್ಲಿ ನೀರಾವರಿ ಇಲಾಖೆಯ ಜಾಗದಲ್ಲಿ ವಾಸಿಸುತ್ತಿದ್ದಾರೆ, ಓಣಿಯ ಜನರಿಗೆ ಬಳಸಲು ಇರುವ ಏಕೈಕ ಜಾಗದಲ್ಲಿ ಅಧಿಕಾರಿಗಳು ಟಿಸಿ ನಿರ್ಮಾಣಕ್ಕೆ ಮುಂದಾಗಿದ್ದಾರೆ, ಟಿಸಿಯನ್ನು ಸ್ಥಳಾಂತರಿಸಲು ಬಂದ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಮಹಿಳೆಯರು ವಿರೋಧ ವ್ಯಕ್ತಪಡಿಸಿದರು,
ಯಾವ ಕಾರಣಕ್ಕಾಗಿ ಟಿಸಿಯನ್ನು ಸ್ಥಳಾಂತರಿಸುತ್ತಿದ್ದೀರಿ ? ಚಿಕ್ಕ ಮಕ್ಕಳು ಓಡಾಡುವ ಮತ್ತು ಶೌಚಾಲಯಕ್ಕೆ ಬಳಸುವ ಜಾಗದಲ್ಲಿ ಟಿಸಿಯನ್ನು ಸ್ಥಳಾಂತರಿಸುತ್ತಿರುವುದು ಬೇಡ ಚಿಕ್ಕ ಮಕ್ಕಳು ಪ್ರತಿನಿತ್ಯ ಇದೇ ಜಾಗದಲ್ಲಿ ಓಡಾಡುತ್ತಾರೆ ಹಾಗೂ ಶೌಚಾಲಯಕ್ಕೆ ಇಲ್ಲಿಯೇ ಹೋಗುತ್ತಾರೆ ಇದರಿಂದ ಮಕ್ಕಳಿಗೆ ತೊಂದರೆ ಆಗುತ್ತದೆ ಆ ಕಾರಣಕ್ಕಾಗಿ ಇಲ್ಲಿ ಟಿಸಿ ನಿರ್ಮಾಣ ಮಾಡಕೂಡದು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ, ಮುಂದೆ ಸರ್ಕಾರದಿಂದ ಅಂಗನವಾಡಿ ಸೇರಿದಂತೆ ಸಮುದಾಯ ಭವನ ನಿರ್ಮಾಣಕ್ಕೆ ಇದೇ ಸ್ಥಳವನ್ನು ಕಾಯ್ದಿರಿಸಿಕೊಂಡಿದ್ದೇವೆ ಇಲ್ಲಿ ಟಿಸಿ ನಿರ್ಮಾಣವಾಗುವುದರಿಂದ ತೊಂದರೆಯಾಗುತ್ತದೆ ಒಂದು ವೇಳೆ ವಿರೋಧದ ನಡುವೆ ಟಿಸಿಯನ್ನು ಇಲ್ಲಿ ನಿರ್ಮಿಸಿದರೆ ಮುಂದೆ ಆಗುವ ಅನಾಹುತಗಳಿಗೆ ಕೆಇಬಿ ಅಧಿಕಾರಿಗಳ ನೇರ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ