ಮೇವು ಸಾಗಿಸುವಾಗ ವಿದ್ಯುತ್ ಅಗ್ನಿ ಅವಘಡ ! ಬೆಂಕಿ ನಂದಿಸಿದ ಅಗ್ನಿ ಶಾಮಕ ದಳ

ಮಿನಿ ಲಾರಿಯಲ್ಲಿ ಹೊತ್ತಿಹೊರಿದ ಭತ್ತದ ಹುಲ್ಲು ದೌಡಾಯಿಸಿ ನಂದಿಸಿದ ಅಗ್ನಿಶಾಮಕ ದಳ
ಕಾರಟಗಿ : ತಾಲೂಕಿನ ಸೋಮನಾಳ ಗ್ರಾಮದ ಸಮೀಪದ ಮುಖ್ಯ ರಸ್ತೆಯಲ್ಲಿ ಎಮ್ ಏಚ್ 09 ಸಿಯು, 1768 ಸಂಖ್ಯೆಯ ಮಿನಿ ಲಾರಿ ಯಲ್ಲಿ ಸಾಗಿಸುತ್ತಿರುವ ಭತ್ತದ ಹುಲ್ಲು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹತ್ತಿಕೊಂಡು ಉರಿದ ಘಟನೆ ಮೇ 11 ಭಾನುವಾರ ನಡೆದಿದೆ.
ಸೋಮನಾಳ ಗ್ರಾಮದ ಸಂಗಪ್ಪ ತಂದೆ ಅಯ್ಯಪ್ಪ ಎನ್ನುವವರ ಸುಮಾರು 03 ಎಕರೆಯ 08 ಸಾವಿರ ಮೌಲ್ಯದ ಭತ್ತದ ಹುಲ್ಲನ್ನು ಕುಷ್ಟಗಿ ತಾಲೂಕ ಮಲ್ಲಾಪುರ, ಬುನ್ನಟ್ಟಿ,ಗ್ರಾಮಕ್ಕೆ ಸಾಗಿಸುತ್ತಿದ್ದರು ಈ ವೇಳೆ ರಸ್ತೆಯ ಮೇಲ್ಭಾಗದಲ್ಲಿ ವಿದ್ಯುತ್ ತಂತಿಗಳಿಗೆ ಮಿನಿ ಲಾರಿಯಲ್ಲಿರುವ ಹುಲ್ಲು ತಾಗಿರುವುದರಿಂದ ವಿದ್ಯುತ್ ತಂತಿಗಳು ಒಂದಕ್ಕೊಂದು ಸ್ಪರ್ಶಿಸಿ ಬೆಂಕಿ ಕಿಡಿ ಲಾರಿಯಲ್ಲಿರುವ ಹುಲ್ಲಿನ ಮೇಲೆ ಬಿದ್ದು ಹುಲ್ಲು ಬೆಂಕಿಗೆ ಹೊತ್ತಿ ಉರಿದಿದೆ ವೇಳೆ ಅಲ್ಲಿಯೇ ಇದ್ದ
ಸ್ಥಳೀಯರಾದ ದಲಿತ ವಿಮೋಚನಾ ಸೇನೆಯ ಪ್ರಧಾನ ಕಾರ್ಯದರ್ಶಿಶರಣಪ್ಪ ವಣಗೇರಿ ಹಾಗೂ ಗ್ರಾಮಸ್ಥರು ಅಗ್ನಿಶಾಮಕ ಠಾಣೆಗೆ ದೂರವಾಣಿ ಮುಖಾಂತರ ಕರೆ ಮಾಡಿದ್ದಾರೆ, ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಂತರ ಮಾತನಾಡಿದ ಅಗ್ನಿ,ಶಾಮಕ ಅಧಿಕಾರಿ ಮಾತನಾಡಿ ಸುಮಾರು 2 ಸಾವಿರ ಮೌಲ್ಯದ ಹುಲ್ಲು ನಷ್ಟವಾಗಿದೆ, ನಾವು ಶೀಘ್ರ ಆಗಮಿಸಿದ ಕಾರಣ ಶೇಕಡ 80% ಹುಲ್ಲನ್ನು ಬೆಂಕಿಯಿಂದ ಉಳಿಸಲು ಕಾರಣ ವಾಯಿತು ಎಂದಿದ್ದಾರೆ ಅಗ್ನಿಶಾಮಕ ದಳ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ ಸ್ಥಳೀಯ ದಲಿತ ವಿಮೋಚನಾ ಸೇನೆಯ ಪ್ರದಾನ ಕಾರ್ಯದರ್ಶಿ ಶರಣಪ್ಪ ವಣಗೇರಿ ಮಾತನಾಡಿ ಅಗ್ನಿ ಅವಘಡಗಳು ನಡೆದಾಗ ತುರ್ತಾಗಿ ಸ್ಪಂದಿಸುತ್ತಿರುವ ಅಗ್ನಿಶಾಮಕ ಕಾರ್ಯ ವೈಖರಿ ನಿಜಾವಾಗಿಯೂ ಶ್ಲಾಘನೀಯ ಎಂದರು ಜೀವದ ಹಂಗು ತೊರೆದು ಸಾರ್ವಜನಿಕರ ಆಸ್ತಿ ಮತ್ತು ಸಾರ್ವಜನಿಕರಿಗೆ ತೊಂದರೆ ಆಗದಂತೆ ಕರ್ತವ್ಯ ನಿರ್ವಹಿಸುತ್ತಿರುವ ಅಗ್ನಿಶಾಮಕದಳ ಸಿಬ್ಬಂದಿಗೆ ಧನ್ಯವಾದಗಳು ತಿಳಿಸಿದ್ದಾರೆ.
ಅಗ್ನಿಶಾಮಕ ಪ್ರಭಾರತನಾಧಿಕಾರಿ ರಾಘವೇಂದ್ರ ಈಳಿಗೆರ. ಅಕ್ಬರ್ ಸಾಬ್ ಸೇರಿ ಸಿಬ್ಬಂದಿ ವರ್ಗ ಇದ್ದರು.