ಕೊಪ್ಪಳ,: ತಾಲೂಕಿನ ಹೊಸಲಿಂಗಾಪುರ ಗ್ತಾಮದಲ್ಲಿ ಒಂದೇ ಕುಟುಂಬದ ಮೂವರು ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು ಪ್ರಕರಣ ಕೊಲೆ ಎಂದು ದೃಢಪಟ್ಟಿದ್ದು ಆರೋಪಿ ಹೊಸಪೇಟೆಯ ಆಸೀಪ್ ನನ್ನು ಬಂಧಿಸಿದ್ದೇವೆ ಎಂದು ಕೊಪ್ಪಳ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ ಹೇಳಿದರು.
ಬುಧವಾರ ಸಂಜೆ ನಗರದ ಜಿಲ್ಲಾ ಪೋಲಿಸ್ ಕಾರ್ಯಲಯದಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು.
ಮಂಗಳವಾರ ದಂದು ಬೆಳಗ್ಗೆ ಹೊಸಲಿಂಗಾಪುರ ಗ್ರಾಮದ ರಾಜೇಶ್ವರಿ (50), ಅವರ ಮಗಳು ವಸಂತಾ ಕುಮಾರಿ (32), ಮೊಮ್ಮಗ ಸಾಯಿತೇಜ (5) ಶವವಾಗಿ ಕಂಡುಬಂದಿದ್ದರು. ಈ ಮುಂಚೆ ವಸಂತ ಕುಮಾರಿಗೆ ಆಂಧ್ರದ ನಂದ್ಯಾಲನ ವ್ಯಕ್ತಿಯೊಂದಿಗೆ ವಿವಾಹವಾಗಿತ್ತು. ಆದರೆ, ಎರಡು ವರ್ಷದ ಹಿಂದೆ ಪತಿಯಿಂದ ದೂರವಾಗಿದ್ದ ವಸಂತ ಕುಮಾರಿ ಹೊಸಲಿಂಗಾಪುರ ಗ್ರಾಮಕ್ಕೆ ಆಗಮಿಸಿ ಬಾಡಿಗೆ ಮನೆಯಲ್ಲಿದ್ದರು. ಅಲ್ಲಿಯೇ ಹತ್ತಿರದ ಗೊಂಬೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿ ಪರಿಚಯವಾದ ಆರೀಫ್ ನನ್ನು ವಿವಾಹ ಆಗಿದ್ದರು. ಆರೋಪಿ ಆಸೀಪ್ ಕೂಡ ಅದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಆರೋಪಿ ಆಸೀಪ್ ತಾನು ಇಷ್ಟ ಪಟ್ಟಿದ್ದ ವಸಂತ ಕುಮಾರಿಯನ್ನು ತನ್ನ ವಿವಾಹಿತ ತಮ್ಮನಿಗೆ ಮದುವೆ ಮಾಡಿಕೊಟ್ಟ ಸಿಟ್ಟು ಮತ್ತು ವಸಂತಕುಮಾರಿ ಜೊತೆ ಆರೀಫ್ ವಿವಾಹದ ನಂತರ ನಮ್ಮ ಕುಟುಂಬದ ನೆಮ್ಮದಿ ಹಾಳಾಗಿದೆ ಎಂಬ ಸಿಟ್ಟಿನಿಂದ ರಾಜೇಶ್ವರಿ ಮನೆಗೆ ಆಗಾಗ ಬಂದು ಜಗಳ ಆಡುತ್ತಿದ್ದ.
ಮೇ. 27 ರಂದು ಸಂಜೆ ಜಗಳ ಆಡಿದ ಆಸೀಪ್ ಮೂವರನ್ನು ಗೋಡೆಗೆ ನೂಕಿ ಕುತ್ತಿಗೆ ಹಿಸುಕಿ ಮೂವರನ್ನು ಕೊಲೆ ಮಾಡಿದ್ದಾನೆ. ಆಸೀಪ್ ನನ್ನು ಬುಧವಾರ ಬೆಳಗ್ಗೆ ಹೊಸಪೇಟೆಯ ಜೆ.ಪಿ ನಗರದ ಆತನ ಮನೆಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಆರೋಪಿ ತಪೋಪ್ಪಿಕೊಂಡ ಎಂದು ತಿಳಿಸಿದರು.
ತನಿಖಾ ತಂಡದಲ್ಲಿ ಸಿಪಿಐ ಡಿ.ಸುರೇಶ, ಮುನಿರಾಬಾದ್ ಪಿಎಸ್‌ಐ ಸುನೀಲ್, ಮೀನಾಕ್ಷಮ್ಮ, ಎಎಸ್‌ಐ ಕೃಷ್ಣ, ಹೆಚ್.ಸಿ. ಶಿವಕುಮಾರ, ಮಹೇಶ ಸಜ್ಜನ, ರಂಗನಾಥ, ಶಿವಪುತ್ರಪ್ಪ, ಕೋಟೇಶ್, ಚಂದಾಲಿಂಗ, ಮಹ್ಮದ ರಫಿ, ಈರೇಶ, ಲೋಕೇಶ, ಶರಣಪ್ಪ, ಮಂಜುನಾಥ, ಪ್ರಸಾದ್ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.