
ಸರಕಾರಿ ನೌಕರರ ಕ್ರೀಡಾಕೂಟ – ಜೆರ್ಸಿ ಬಿಡುಗಡೆ
ಕಾರಟಗಿ; ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಕಾರಟಗಿಯ ಸರಕಾರಿ ನೌಕರರ ಖೋ ಖೋ ತಂಡದ ಆಟಗಾರರಿಗೆ ನೂತನ ಜೆರ್ಸಿ ವಿತರಿಸಲಾಯಿತು.
ಪಟ್ಟಣದ ಎಪಿಎಂಸಿ ಕಛೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ದಾನಿ ಹೊಸ ಜೂರಟಗಿಯ ಯಮನೂರಪ್ಪ ಬೆನ್ನೂರು ಅವರು ಕ್ರೀಡಾ ಪಟುಗಳಿಗೆ ನೀಡಿದ ಜೆರ್ಸಿಗಳನ್ನು ವಿತರಿಸಲಾಯಿತು.
ಬಳಿಕ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಹನುಮಂತಪ್ಪ ನಾಯಕ ತೊಂಡಿಹಾಳ ಆಟಗಾರರಿಗೆ ಅಭಿನಂದಿಸಿ ಮಾತನಾಡಿ ತಾಲೂಕಿನ ನೌಕರರ ಸಂಘದಲ್ಲಿನ ಪ್ರತಿಭಾವಂತ ಕ್ರೀಡಾಪಟುಗಳು ಜಿಲ್ಲಾ ಮಟ್ಟದಲ್ಲಿ ಖೋಖೋ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಜಯ ಸಾಧಿಸಿ, ಇದೇ ಮೇ 18, 19 ಮತ್ತು 20ರಂದು ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಕ್ರೀಡಾ ಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ಸಂತಸದ ವಿಚಾರ. ರಾಜ್ಯ ಮಟ್ಟದಲ್ಲೂ ಕೂಡಾ ಗೆದ್ದು ಕಾರಟಗಿ ತಾಲೂಕಿನ ಕೀರ್ತಿ ಹೆಚ್ಚಿಸಬೇಕು ಎಂದು ಕ್ರೀಡಾಪಟುಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಕಾರ್ಯದರ್ಶಿ ಹರೀಶ್ ಪತ್ತಾರ್, ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಸರ್ದಾರ್ ಅಲಿ, ಗೌರವಾಧ್ಯಕ್ಷ ಬಸವರಾಜ್ ರ್ಯವಳಾದ್, ಕಾರ್ಯದರ್ಶಿ ವೆಂಕೋಬ ಚಲುವಾದಿ, ಉಪಾಧ್ಯಕ್ಷ ಗುರುಪ್ರಸಾದ, ಖಜಾಂಚಿ ಶ್ರೀಕಾಂತ, ಜಂಟಿ ಕಾರ್ಯದರ್ಶಿಗಳಾದ ಶರಣಪ್ಪ ಮತ್ತು ಬಸವರಾಜ್ ಪುಲದಿನ್ನಿ, ಸಂಘಟನಾ ಕಾರ್ಯದರ್ಶಿ ಮಲ್ಲೇಶ್ ನಾಯಕ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಶಿವರಾಜಕುಮಾರ್ ಮತ್ತು ಗಾಯತ್ರಿ, ಕ್ರೀಡಾ ಕಾರ್ಯದರ್ಶಿ ಶರಣೆಗೌಡ ಆಂತರಿಕ ಲೆಕ್ಕ ಪರಿಶೋದಕ ಶಂಕ್ರಪ್ಪ, ನಿರ್ದೇಶಕರಾದ ಮಂಜುನಾಥ್ ರಾಠೋಡ್ ಮತ್ತು ಬಸವರಾಜ್, GPT ಶಿಕ್ಷಕರ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಮೈಲಾಪುರ, ಖೋ ಖೋ ತಂಡದ ನಾಯಕ ಸಂಗಪ್ಪ ಉಳೇನೂರು ಇನ್ನಿತರರು ಇದ್ದರು.