ಕಾರಟಗಿ

ಕೆರೆ ಜಾಗದಲ್ಲಿ ಪುರಸಭೆ ಮಳಿಗೆಗಳನ್ನು ನಿರ್ಮಾಣ ಮಾಡಿದ ಸಚಿವರು ಪ್ರಜಾಸೌಧ ಕಟ್ಟಲು ಆಗಲ್ಲವೇ ? ನಾಗರಾಜ್ ಬಿಲ್ಗಾರ್ ಪ್ರಶ್ನೆ

ವರದಿ ಸುಂದರರಾಜ್ BA ಕಾರಟಗಿ

ಕೆರೆ ಜಾಗದಲ್ಲಿ ಪುರಸಭೆ ಮಳಿಗೆಗಳನ್ನು ನಿರ್ಮಾಣ ಮಾಡಿದ ಸಚಿವರು ಪ್ರಜಾಸೌಧ ಕಟ್ಟಲು ಆಗಲ್ಲವೇ ? ನಾಗರಾಜ್ ಬಿಲ್ಗಾರ್ ಪ್ರಶ್ನೆ

ಕಾರಟಗಿ ; ನಾವು ಯಾರು ಸಚಿವರ ವಿರೋಧಿಗಳಲ್ಲ ಪದೇಪದೇ ನಮ್ಮನ್ನು ವಿರೋಧಿಗಳಂತ ಸಂಬೋಧಿಸುತ್ತಿದ್ದಾರೆ ! ಇದು ಸರಿಯಲ್ಲ ! ಅಭಿವೃದ್ಧಿ ವಿಚಾರದಲ್ಲಿ ನಾವು ರಾಜಕಾರಣ ಮಾಡುವುದಿಲ್ಲ ! ಅಭಿವೃದ್ಧಿ ವಿಚಾರದಲ್ಲಿ ನಾವು ಆಡಳಿತಾತ್ಮಕವಾಗಿ ಅಡ್ಡಗಾಲು ಹಾಕುವುದಿಲ್ಲ ! ಆದರೆ ಸಚಿವರು ಯಾವುದೇ ಸಾರ್ವಜನಿಕ ಅಭಿವೃದ್ಧಿ ಕಾರ್ಯಗಳನ್ನು ಮಾಡುವಾಗ ಸಾರ್ವಜನಿಕ ಒಮ್ಮತ ಅಭಿಪ್ರಾಯವನ್ನು ಸಂಗ್ರಹಿಸಬೇಕು, ಅಷ್ಟೇ ಹೊರತು ತಮಗೆ ಇಷ್ಟ ಬಂದ ಹಾಗೆ ಅಭಿವೃದ್ಧಿ ಕಾರ್ಯಗಳ ಹೆಸರಲ್ಲಿ ನಿರಂಕುಶತ್ವ ಅಧಿಕಾರವನ್ನು ಚಲಾಯಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ನಾಗರಾಜ್ ಬಿಲ್ಗಾರ್ ಅವರು ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಅವರ ಗೃಹ ಕಚೇರಿಯಲ್ಲಿ  ಪ್ರಜಾಸೌಧ ನಿರ್ಮಾಣ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ಬಿಜೆಪಿ ಆಡಳಿತ ಅವಧಿಯಲ್ಲಿ ಮಾಜಿ ಶಾಸಕ ಬಸವರಾಜ್ ದಡೇಸುಗೂರು ಅವರು ಕಾರಟಗಿ ಸರ್ವೇ ನಂಬರ್ 416 ರಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ನೀಲಿ ನಕ್ಷೆ ತಯಾರು ಮಾಡಿದ್ದರು, ಕೆರೆ ಜಾಗವನ್ನು ಪ್ರಜಾಸೌಧ ಕಟ್ಟಡದ ನಿಯೋಜಿತ ಸ್ಥಳವೆಂದೆ ಗುರುತಿಸಲ್ಪಟ್ಟಿತ್ತು, ಪಟ್ಟಣ ಜನತೆ ಸೇರಿದಂತೆ ತಾಲೂಕಿನ ಜನತೆಗೆ ಅನುಕೂಲವಾಗಲು ಪ್ರಜಾಸೌಧ ಕಟ್ಟಡವನ್ನು ಸಂತೆ ಮಾರುಕಟ್ಟೆ ಪಕ್ಕದಲ್ಲಿ ನಿರ್ಮಾಣವಾದರೆ ಪಟ್ಟಣ ಜನತೆಗೆ ಸೇರಿದಂತೆ ತಾಲೂಕಿನ ಜನತೆಗೆ ಅನುಕೂಲವಾಗುತ್ತದೆ ಎಂದು ಸಾರ್ವಜನಿಕರ ನಿರೀಕ್ಷೆಯನ್ನು ಕೂಡ ಇಟ್ಟುಕೊಂಡಿದ್ದರು,

ಆದರೆ ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರು ಜನರಿಗೆ ಹತ್ತಿರದ ಸ್ಥಳವನ್ನು ಬಿಟ್ಟು ಸುಮಾರು 5 km ದೂರದಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿರುವುದು ಏಕ ಪಕ್ಷಿಯವಾಗಿ ನಿರ್ಧಾರವಾಗಿದೆ, ತಾಲೂಕಿನ ಜನರ ಸಂಘ-ಸಂಸ್ಥೆಗಳ ಸಭೆ ಕರೆದು ಪ್ರಜಾಸೌಧ ಕಟ್ಟಡ ನಿರ್ಮಾಣದ ಸಾಧಕ ಬಾದಕಗಳನ್ನು ಅವಲೋಕನೆ ಮಾಡಿಕೊಂಡು ತಾಲೂಕಿನ ಜನತೆಯ ಒಮ್ಮತದ ಅಭಿಪ್ರಾಯದ ಮೇರೆಗೆ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು, ಅಷ್ಟೇ ಹೊರತು ಸಾರ್ವಜನಿಕರ ಹಿತಾಶಕ್ತಿಯನ್ನು ಬದುಗೊತ್ತಬಾರದು  ಕೆರೆ ಜಾಗದಲ್ಲಿ ಪ್ರಜಾಸೌಧ ಕಟ್ಟಲು ಬರುವುದಿಲ್ಲಸುಪ್ರೀಂಕೋರ್ಟ್ ಆದೇಶ ಇದೆ ಎನ್ನುವ ಸಚಿವರು

ಆದರೆ ಅದೇ ಕೆರೆಯ ಜಾಗದಲ್ಲಿ ಪುರಸಭೆ ಮಳಿಗೆಗಳು ನಿರ್ಮಾಣ ಮಾಡುವಾಗ ಸುಪ್ರೀಂ ಕೋರ್ಟ್ ಆದೇಶ ಅಡ್ಡ ಬರಲಿಲ್ಲವೇ ? ನೀವು ನಿಮ್ಮ ನಿರ್ಧಾರದಂತೆ ಪ್ರಜಾ ಸೌಧಕಟ್ಟಡ ನಿರ್ಮಾಣ ಮಾಡುವುದನ್ನು ಬಿಡಿ ಮೊದಲು ಸಾರ್ವಜನಿಕರ ಹಿತಾಸಕ್ತಿಗಾಗಿ ಪ್ರಜಾಸೌಧವನ್ನು ಜನತೆಗೆ ಅನುಕೂಲವಾಗಲು ಕಾರಟಗಿಯಲ್ಲಿ ನಿರ್ಮಾಣ ಮಾಡಲು ಅತೀ ಜರೂರಾಗಿ ಸಾರ್ವಜನಿಕರ ಸಭೆ ಕರೆಯಬೇಕು ಎಂದರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಮರೇಶ್ ಕುಳಗಿ ಮತ್ತು ಮಾಜಿ ಬಿಜೆಪಿ ಪಕ್ಷದ ಬ್ಲಾಕ್ ಅಧ್ಯಕ್ಷ ಚಂದ್ರಶೇಖರ್ ಮುಸಾಲಿ ಇದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!