ಪೊಲೀಸ್ ಇಲಾಖೆ ವತಿಯಿಂದ ಠಾಣೆಯಲ್ಲಿ “ತೆರೆದ ಮನೆ” ಕಾರ್ಯಕ್ರಮ:

ಗಂಗಾವತಿ: ನಗರದ ಸಂಚಾರಿ ಪೊಲೀಸ್ ಠಾಣೆವತಿಯಿಂದ ತೆರೆದ ಮನೆ ಎಂಬ ಕಾರ್ಯಕ್ರಮ ಠಾಣೆಯಲ್ಲಿ ನಡೆಯಿತು.ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲಾ ಮಕ್ಕಳು ತೆರೆದ ಮನೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಕಾನೂನಿನ ಬಗ್ಗೆ ಹಲವು ಮಾಹಿತಿಗಳನ್ನು ಪಡೆದುಕೊಂಡರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಠಾಣೆ ಪಿಎಸ್ಐ ಇಸ್ಲಾಯಿಲ್ ಸಾಬ ಮಾತನಾಡಿ, ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿ ದೇಶಭಕ್ತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ನಮ್ಮ ಪೊಲೀಸ್ ಠಾಣೆಯಲ್ಲಿ ಮಾಡಲಾಗುತ್ತದೆ. ಶಾಲಾ ಮಕ್ಕಳಲ್ಲಿರುವ ಆತಂಕವನ್ನು ದೂರ ಮಾಡುವ ಉದ್ದೇಶ ಇಟ್ಟುಕೊಂಡು ಸಿನಿಮಾ ಮತ್ತು ಟಿವಿಗಳಲ್ಲಿ ತೋರಿಸುವ ಪೊಲೀಸರಿಗೆ ಮತ್ತು ಹೊರಗಡೆ ನೆಡೆಯುವ ಬಗ್ಗೆ ಬಹಳ ವ್ಯತ್ಯಾಸವಿದೆ, ಈ ಕಾರ್ಯಕ್ರಮ ದಿಂದ ವಿದ್ಯಾರ್ಥಿ ಮತ್ತು ಜನರಲ್ಲಿ ದೇಶಭಕ್ತಿ ಮೂಡಿಸಲಾಗುತ್ತಿದೆ. ನಮ್ಮ ದೇಶದ ಯೋಧರು ಮತ್ತು ಸೇನೆಗಳು ನಮ್ಮ ಸಾರ್ವಜನಿಕರಿಗೆ ಎಷ್ಟು ಸೇವೆ ಮಾಡುತ್ತಿದೆ ಎಂದು ಮಕ್ಕಳಲ್ಲಿ ಅರಿವು ಮೂಡಿಸಲಾಗುತ್ತದೆ. ಶಾಲಾ ಮಕ್ಕಳಲ್ಲಿ ಪೊಲೀಸ್ ಎಂದರೆ ಒಂದು ಭಯವಿರುತ್ತದೆ ಅದನ್ನು ದೂರ ಮಾಡಿ ನಮ್ಮ ಪೊಲೀಸ್ ಠಾಣೆಯಲ್ಲಿ ಎಲ್ಲಾ ಕಚೇರಿಗಳಲ್ಲಿ ಹೇಗೆ ದಿನನಿತ್ಯ ಕೆಲಸ ನಡೆಯುತ್ತದೆ ಅದೇ ರೀತಿ ನಮ್ಮ ಠಾಣೆಯಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ ಎಂದು ಮಕ್ಕಳಿಗೆ ತೋರಿಸುವ ಸಲುವಾಗಿ ಪೊಲೀಸ್ ಠಾಣೆಯು ಕೂಡ ಒಂದು ಸರ್ಕಾರಿ ಕಚೇರಿ ಎಂದು ತೋರಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ವಿದ್ಯಾರ್ಥಿಗಳು ಸಹ ಕಾನೂನಿನ ಮಹತ್ವವನ್ನು ತಿಳಿದುಕೊಳ್ಳ ಬೇಕಾಗಿದೆ ಜೊತೆಯಲ್ಲಿ ಮನೆಯ ಪಾಲಕರು ತಮ್ಮ ವಾಹನಗಳನ್ನು ಸಂಚರಿಸುವಾಗ ಡ್ರೈವಿಂಗ್ ಲೈಸೆನ್ಸ್, ಹೆಲ್ಮೆಟ್, ವಾಹನಕ್ಕೆ ಇನ್ಸೂರೆನ್ಸ್ ಹೀಗೆ ಎಲ್ಲಾ ರೀತಿಯ ಕಾನೂನು ಬದ್ಧವಾಗಿ ರಸ್ತೆಯ ಮೇಲೆ ವಾಹನವನ್ನು ಸಂಚರಿಸಬೇಕೆಂದು ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ತಿಳಿಸಬೇಕಾಗಿದೆ ಎಂದು ಸಂಚಾರ ನಿಯಮಗಳ ಬಗ್ಗೆ ಮಾಹಿತಿಯನ್ನು ಸಹ ನೀಡಿದರು.
ಈ ಸಂದರ್ಭದಲ್ಲಿ ಠಾಣೆಯ ಸಿಬ್ಬಂದಿ ಚನ್ನಬಸವ, ನಿಂಗಪ್ಪ, ಮಲ್ಲಪ್ಪ, ಬಸವರಾಜ ಗುಳಗಣ್ಣ ನವರ, ದೇವರಾಜ ಶಾಲಾ ಶಿಕ್ಷಕಿ ಗೀತಾಂಜಲಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.