ಪ್ರಜಾಸೌಧ ಪ್ರಜೆಗಳಿಗೆ ಕೈಗೆಟುಕುವಂತೆ ಇರಬೇಕು ದೂರದಲ್ಲಿ ನಿರ್ಮಾಣ ಮಾಡಲು ಬಿಡುವುದಿಲ್ಲ ಮಾಜಿ ಶಾಸಕ ಬಸವರಾಜ್ ದಢೇಸೂಗೂರ್
ವರದಿ ಸುಂದರರಾಜ್ BA ಕಾರಟಗಿ

ಡಿಕೆ ಶಿವಕುಮಾರ್ ಹೇಳ್ತಾರೆ ಟೀಕೆಗಳು ಅಳಿಯುತ್ತವೆ ಕೆಲಸಗಳು ಉಳಿಯುತ್ತವೆ ಎಂದು ಆದರೆ ಕ್ಷೇತ್ರದಲ್ಲಿ ಕೆಲಸಗಳು ಆಗ್ತಾ ಇಲ್ಲ ಟೀಕೆಗಳ ಮಾತ್ರಗಳು ಉಳಿಯುತ್ತಿವೆ.. ಬಿಲ್ಗರ್ ನಾಗರಾಜ್
ಪ್ರಜಾಸೌಧ ಪ್ರಜೆಗಳಿಗೆ ಕೈಗೆಟುಕುವಂತೆ ಇರಬೇಕು ದೂರದಲ್ಲಿ ನಿರ್ಮಾಣ ಮಾಡಲು ಬಿಡುವುದಿಲ್ಲ… ಮಾಜಿ ಶಾಸಕ ಬಸವರಾಜ್ ದಢೇಸೂಗೂರ್
ಕಾರಟಗಿ : ಪ್ರಜಾಸೌಧ ಇಲ್ಲಿ ಮಾಡಪ್ಪ ಅಂದ್ರೆ ಅಲ್ಲಿ ಮಾಡಾಕ ಹೊರಟಾರ ತಂಗಡಗಿ ಸಾಹೇಬರು
ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರ ಜಮೀನು ಆಸ್ತಿಗೆ ಡಿಮ್ಯಾಂಡ್ ಜಾಸ್ತಿ ಆಗುತ್ತೆ ಎನ್ನುವ ಕಾರಣಕ್ಕೆ ಪ್ರಜಾಸೌಧವನ್ನು ಅಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂದು ಮಾಜಿ ಶಾಸಕ ಬಸವರಾಜ್ ಗಂಭೀರ ಆರೋಪದ ಜೊತೆ ಆಕ್ರೋಶ ವ್ಯಕ್ತಪಡಿಸಿದರು ಶನಿವಾರ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿರುವ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ನನ್ನ ಅಧಿಕಾರ ಅವಧಿಯಲ್ಲಿ ಇಡೀ ಕಾರಟಗಿ ಪಟ್ಟಣದ ಜನತೆಯ ಆಶೋತ್ತರಗಳಿಗೆ ಪೂರಕವಾಗಿ ಮತ್ತು ಸಾರ್ವಜನಿಕ ಹಿತಾಸಕ್ತಿಗಾಗಿ ಮಿನಿ ವಿಧಾನ ಸೌಧವನ್ನು (ಪ್ರಜಾ ಸೌಧ) ನಗರ ಮಧ್ಯ ಭಾಗದಲ್ಲಿರುವ ಸರ್ವೇ ನಂಬರ್ 416 ರಲ್ಲಿ ನಿರ್ಮಾಣ ಮಾಡಲು ಸ್ಥಳವನ್ನು ಕಾಯ್ದಿರಿಸಲಾಗಿತ್ತು, ಆದರೆ ಚುನಾವಣೆಯಲ್ಲಿ ನಾನು ಸೋತಿರುವುದರಿಂದ ಅಧಿಕಾರ ಕೈ ತಪ್ಪಿದೆ ಆದರೆ ಗೆದ್ದಿರುವ ಶಿವರಾಜ್ ಎಸ್ ತಂಗಡಗಿ ಅಧಿಕಾರ ಪಡೆದುಕೊಂಡು ಕೂಡ ಪಟ್ಟಣದ ಮಧ್ಯಭಾಗದಲ್ಲಿ ನಿರ್ಮಾಣ ಮಾಡಬೇಕಾದ ಪ್ರಜಾ ಸೌಧವನ್ನು ನಗರದಿಂದ ಸುಮಾರು 03.5 ಕಿ. ಮೀ ದೂರದ ಸರ್ವೇ ನಂಬರ್ 265 ರಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ,
ಇದು ಜನ ವಿರೋಧಿ ಆಡಳಿತವಾಗಿದೆ ಈಗಾಗಲೇ ನಿರ್ಮಾಣ ಮಾಡಲು ಮುಂದಾಗಿರುವ ಪ್ರಜಾಸೌಧದ ಪಕ್ಕದಲ್ಲಿ ಸಚಿವ ಶಿವರಾಜ್ ತಂಗಡಗಿ ಅವರ ಜಮೀನು ಮತ್ತು ಆಸ್ತಿಗಳಿದ್ದು ಅವರ ಆಸ್ತಿ ಮತ್ತು ಜಮೀನುಗಳಿಗೆ ಡಿಮ್ಯಾಂಡ್ ಬರುವ ಸಲುವಾಗಿ ಅಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಮುಂದಾಗಿದ್ದಾರೆ ಅಷ್ಟೇ ಹೊರತು ಮತ್ಯಾವ ಉದ್ದೇಶವು ಅಲ್ಲ ಪಟ್ಟಣದಿಂದ ಸುಮಾರು 03.5 ಕಿ.ಮೀ ದೂರದಲ್ಲಿ ಪ್ರಜಾಸೌಧ ನಿರ್ಮಾಣವಾದರೆ ವಯಸ್ಸಾದವರಿಗೆ ವಿದ್ಯಾರ್ಥಿಗಳಿಗೆ ಮತ್ತು ಅಂಗವಿಕಲರಿಗೆ ಹಾಗೂ ವಿಶೇಷ ಚೇತನವುಳ್ಳ ವ್ಯಕ್ತಿಗಳಿಗೆ ಪ್ರತಿನಿತ್ಯ ಕೆಲಸ ಕಾರ್ಯಗಳಿಗೆ ಅಲೆದಾಡಲು ತೊಂದರೆಯಾಗುತ್ತದೆ ಆದ್ದರಿಂದ ದೂರದಲ್ಲಿ ಪ್ರಜಾಸೌಧ ನಿರ್ಮಾಣ ಮಾಡುವುದನ್ನು ನಿಲ್ಲಿಸಬೇಕು ಈಗಾಗಲೇ ಪ್ರಜಾಸೌಧವನ್ನು ಅಲ್ಲಿ ನಿರ್ಮಾಣ ಮಾಡದಂತೆ ಬಿಜೆಪಿ
ಪಕ್ಷದಿಂದ ಕಾರಟಗಿ ತಹಸಿಲ್ದಾರರಿಗೆ ಮನವಿಯನ್ನು ಸಲ್ಲಿಸಲಾಗಿದೆ ಆದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಾರ್ವಜನಿಕರ ಹಿತಾಸಕ್ತಿಯನ್ನು ಬದಿಗೊತ್ತಿ ಪ್ರಜಾಸೌಧವನ್ನು ದೂರದಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರನ್ನು ಸಲ್ಲಿಸುತ್ತೇವೆ, ಪ್ರಜಾಸೌಧ ನಿರ್ಮಾಣಕ್ಕೆ ನಮ್ಮ ತಕರಾರು ಇಲ್ಲ ಆದರೆ ಜನರಿಗೆ ಕಚೇರಿಗಳು ಮತ್ತು ಅಧಿಕಾರಿಗಳು ಕೈಗೆಟುಕುವಂತೆ ಇರಬೇಕು, ಕಾಯ್ದಿರಿಸಿದ ಜಾಗದಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣ ಮಾಡಬೇಕು ಹೊರತು ದೂರದಲ್ಲಿ ನಿರ್ಮಾಣ ಮಾಡಿ ಜನರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದರು
ಬಿಜೆಪಿ ಮುಖಂಡ ಬಿಲ್ಗರ್ ನಾಗರಾಜು ಅವರು ಈ ಸಂದರ್ಭದಲ್ಲಿ ಮಾತನಾಡಿ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಒಂದು ಮಾತು ಹೇಳ್ತಾರೆ ಟೀಕೆಗಳು ಸಾಯುತ್ತವೆ ನಾವು ಮಾಡಿದ ಕೆಲಸಗಳು ಉಳಿಯುತ್ತವೆ ಟೀಕೆಗಳಿಗೆ ತಲೆ ಕೊಡದೆ ಜನಪ್ರತಿನಿಧಿಗಳು ಜನಸೇವ ಕಾರ್ಯಗಳನ್ನು ಮಾಡಬೇಕು ಜನರು ಕೊಟ್ಟಿರುವ ಅಧಿಕಾರವನ್ನು ಸದುಪಯೋಗಪಡಿಸಿಕೊಳ್ಳಬೇಕು, ಎಂದು ಡಿಕೆ ಶಿವಕುಮಾರ್ ಅವರ ಮಾತನ್ನು ಸ್ಮರಿಸಿಕೊಂಡರು ಆದರೆ ಕನಕಗಿರಿ ಕ್ಷೇತ್ರದಲ್ಲಿ ಟೀಕೆಗಳು ನಿಲ್ತಾ ಇವೆ ಕೆಲಸಗಳು ನಡಿತಾ ಇಲ್ಲ ಇದು ನಮ್ಮ ದುರ್ದೈವ, ಚುನಾವಣೆಯಲ್ಲಿ ಸೋಲುವುದು ಗೆಲ್ಲುವುದು ಸಹಜ ಎಂದು ಗೆದ್ದವರು ನಾಳೆ ಮಾಜಿ ಆಗಲೇಬೇಕು ಮಾಜಿ ಆದವರು ಮುಂದೆ ಒಂದು ದಿನ ಗೆಲ್ಲಲೇ ಬೇಕು ಸೋತವರು ಮಾಡದೆ ಉಳಿದ ಕಾರ್ಯಗಳನ್ನು ಗೆದ್ದವರು ಮಾಡಿಕೊಂಡು ಹೋದಾಗ ಮಾತ್ರ ಪ್ರಜಾ ಪ್ರಭುತ್ವಕ್ಕೆ ನಿಜವಾದ ಅರ್ಥ ಬರುತ್ತದೆ ಜನಪ್ರತಿನಿಧಿಗಳಾದವರು ಪ್ರಜೆಗಳ ಕೊಟ್ಟಿರುವ ಅಧಿಕಾರವನ್ನು ಸದುಪಯೋಗಪಡಿಸಿಕೊಳ್ಳಬೇಕುಎಂದರು