ಪಂಚಮಸಾಲಿ ಮೀಸಲಾತಿಯ ಹೋರಾಟಕ್ಕೆ ರಸ್ತಾ ರೋಕ್ ಕುರಿತು.

ಗಂಗಾವತಿ.11
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಪಂಚಮಸಾಲಿ 2-ಎ ಮೀಸಲಾತಿ ಹೋರಾಟದಲ್ಲಿ ಭಾಗವಹಿಸಿದ ಸಮಾಜ ಬಾಂಧವರ ಮೇಲೆ ಸರ್ಕಾರ ಆದೇಶದ ಮೇರೆಗೆ ಪೊಲೀಸ್‌ರು ಲಾಠಿಚಾರ್ಜ ಮಾಡಿ ಸುಮಾರು 40 ಜನರು ಗಂಭೀರವಾಗಿ ಗಾಯಗೊಂಡಿರುವುದು ಖಂಡನೀಯ.
ಇದನ್ನು ವಿರೊಧಿಸಿ ನಾಳೆ ದಿನಾಂಕ:12-12-2024 ರಂದು ರಾಜ್ಯಾಧ್ಯಂತ ತಾಲೂಕು ಮತ್ತು ಗ್ರಾಮೀಣ ಮಟ್ಟದಲ್ಲಿ ರಸ್ತಾ ರೋಕ್ ಮಾಡುವುದಾಗಿ ಪೂಜ್ಯ ಗುರುಗಳು ಹಾಗೂ ಸಮಾಜದ ಮುಖಂಡರು ನಿರ್ಣಹಿಸಿರುತ್ತಾರೆ. ಅವರ ನಿರ್ಣಯದಂತೆ ನಾಳೆ ಪಂಚಮಸಾಲಿ ಸಮಾಜದ ಬಾಂಧವರು ಮತ್ತು ಮುಖಂಡರು ಗಂಗಾವತಿಯ ಸಿ.ಬಿ.ಎಸ್. ವೃತ್ತದಲ್ಲಿ ಬೆಳಗ್ಗೆ 11:00 ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ ರಸ್ತಾ ರೋಕ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ ಸುಮಾರು 500- 600 ಜನರು ಸೇರುವ ನಿರೀಕ್ಷೆ ಇರುತ್ತದೆ.ಆದ ಕಾರಣ ಈ ವಿಷಯವನ್ನು ತಮ್ಮ ಗಮನಕ್ಕೆ ತರುತ್ತಾ ಸೂಕ್ತ ಬಂದೋಬಸ್ ನೀಡಲು ಈ ಮೂಲಕ ತಮ್ಮಲ್ಲಿ ವಿನಂತಿಸಲಾಗಿದೆ.ಈ ಸಂದರ್ಭದಲ್ಲಿ ಗಂಗಾವತಿ ತಾಲೂಕಿನ ಪಂಚಮ ಸಮಾಜದ ಗುರು ಹಿರಿಯರು ಹಾಗೂ ಯುವಕರು ಸೇರಿದಂತೆ ಇತರರು ಇದ್ದರು