ಗಂಗಾವತಿಜಿಲ್ಲಾ ಸುದ್ದಿಗಳು

ಗಂಗಾವತಿಯಲ್ಲಿ ವಾಲ್ಮೀಕಿ ಸಮುದಾಯ ಸಭೆ; ರಾಜ್ಯಾದ್ಯಂತ ಪ್ರತಿಭಟನೆಗೆ ನಿರ್ಧಾರ

ಗಂಗಾವತಿ. ನಗರಸಭೆ ವ್ಯಾಪ್ತಿಯ ಎರಡನೆಯ ವಾರ್ಡ್ ವಾಲ್ಮೀಕಿ ಸರ್ಕಲ್ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಾಯಕ ಸಮಾಜ ಬಾಂಧವರ ಪೂರ್ವಭಾವಿ ಸಭೆ ನಡೆಸಲಾಯಿತು ಸಭೆಯ ಉದ್ದೇಶಕ್ಕೆ ಸಂಬಂಧಿಸಿದಂತೆ ಜಾತಿ ಜನಗಣಿತದಲ್ಲಿ ಸಮಾಜ ಬಾಂಧವರು . ಶ್ರೀ ವಾಲ್ಮೀಕಿ ನಾಯಕ ಮಠದ ಸ್ವಾಮೀಜಿಗಳಸಭೆಯಲ್ಲಿ ತಿಳಿಸಿರುವಂತೆ ನಮೂದಿಸಲು ತೀರ್ಮಾನಿಸಲಾಯಿತು ಕರ್ನಾಟಕ ರಾಜ್ಯ ಸರ್ಕಾರ ಅಮ್ಮಿಕೊಂಡ ಜಾತಿಗಣತಿಯ ಸಮೀಕ್ಷೆಯಲ್ಲಿ ನಮ್ಮ ನಾಯಕ ವಾಲ್ಮೀಕಿ ಸಮಾಜ ಪರಿಶಿಷ್ಟ ಪಂಗಡಕ್ಕೆ ಅನ್ಯ ಬೇರೆ ಜಾತಿಯವರನ್ನು ಸೇರ್ಪಡೆಸುವುದನ್ನು ಖಂಡಿಸಿ ಇಂದು ವಾಲ್ಮೀಕಿ ಸರ್ಕಲ್ ಹತ್ತಿರವಿರುವ ಆಂಜನೇಯ ದೇವಸ್ಥಾನದ ಸಭಾಭವನದಲ್ಲಿ ಸಭೆಯನ್ನು ಉದ್ದೇಶಿಸಿ ತಾಲೂಕು ಅಧ್ಯಕ್ಷರಾದ ವಡ್ರಟ್ಟಿ ವೀರಭದ್ರಪ್ಪ ನಾಯಕ ಮಾತನಾಡಿದರು.

ಅವರು ಇಂದು ರಾಜ್ಯ ಸರ್ಕಾರ ಹಮ್ಮಿಕೊಂಡಿರುವಂತ ಜಾತಿ ಗಣತಿಯ ನೆಪದಲ್ಲಿ ಪರಿಶಿಷ್ಟ ಪಂಗಡಕ್ಕೆ ಸಂಬಂಧಪಟ್ಟಂತೆ ಅನ್ನ ಬೇರೆ ಜಾತಿವರಾದ ಕುರುಬರು ಉಪ್ಪಾರರು ಕಬ್ಬಲಿಗರು ಇನ್ನು ಅನೇಕ ಜಾತಿಯವರನ್ನು ಸೇರಿಸುವ ಹುನ್ನಾರು ನಡೆಸಿದ್ದಾರೆ ಎಂದು ಆಕ್ರೋಶವಾಗಿ ಮಾತನಾಡಿದರು ಈ ಸಂದರ್ಭದಲ್ಲಿ ಜೋಗದ ಹನುಮಂತಪ್ಪ ನಾಯಕ ಮಾತನಾಡುತ್ತಾ ಇಡೀ ಕರ್ನಾಟಕ ರಾಜ್ಯಾದ್ಯಂತ 224 ಕ್ಷೇತ್ರದಲ್ಲಿ ಒಂದೇ ಬಾರಿಗೆ ಇದೇ ದಿನಾಂಕ 25 ಸೆಪ್ಟೆಂಬರ್ 2025 ರಂದು ರಾಜ್ಯಾದ್ಯಂತ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ವತಿಯಿಂದ ನಾಯಕ ಸಮಾಜದಿಂದ ಅನ್ನ ಜಾತಿಯವರು ಎಸ್ ಟಿ ವರ್ಗಕ್ಕೆ ಸೇರ್ಪಡಿಸುವುದನ್ನು ವಿರೋಧಿಸಿ ಹಾಗೂ ಕರ್ನಾಟಕ ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ನೀಡುತ್ತಿರುವ ಅಧಿಕಾರಿಗಳನ್ನು ಸರ್ಕಾರಿ ಕೆಲಸದಿಂದ ವಜಗೊಳಿಸಿ ಅಂಥವರ ವಿರುದ್ಧ ಜಾತಿನಿಂದನೆ ಪ್ರಕರಣವನ್ನು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮತ್ತು ಯಾರು ನಕಲಿ ಜಾತಿ ಪ್ರಮಾಣ ತೆಗೆದುಕೊಂಡಿರುತ್ತಾರೆ ಅಂತವರು ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಾಲೂಕು ಅಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮುಖ್ಯಮಂತ್ರಿಗಳಿಗೆ ಉಪ ಮುಖ್ಯಮಂತ್ರಿಗಳು ಸಮಾಜ ಕಲ್ಯಾಣ ಸಚಿವರಿಗೆ ಸಂಬಂಧಪಟ್ಟಂತೆ ಇಲಾಖೆಗಳಿಗೆ ಮೂಲಕ ಪ್ರತಿಭಟನೆ ಮುಖಾಂತರ ಮನವಿ ಪತ್ರವನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಜೋಗದ ನಾರಾಯಣಪ್ಪ ನಾಯಕ ಕೃಷ್ಣಪ್ಪ ನಾಯಕ ಬಸಪ್ಪ ನಾಯಕ ಹೊಸ ಮಾಲೆ ಮಲ್ಲೇಶಪ್ಪ ಚೌಡಕಿ ಹನುಮಂತಪ್ಪ ಬ್ಯಾಂಕ್ ಅಂಜಿನಪ್ಪ ಅರ್ಜುನ್ ನಾಯಕ ಪಂಪಣ್ಣ ನಾಯಕ ವಿರುಪಾಕ್ಷ ಗೌಡ ನಾಯಕ ಶರಣಪ್ಪ ನಾಯಕ ಹನುಮೇಶ್ ಹಸೆಕಟಗಿ ವಕೀಲರು ದೇವಪ್ಪ ನಾಯಕ ಯಮನೂರಪ್ಪ ನಾಯಕ ಕೆಂಚಪ್ಪ ದುರ್ಗಪ್ಪ ದಳಪತಿ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ಎ ಜೆ ರಂಗನಾಥ್ ವಕೀಲರು ಹಾಗೂ ಇನ್ನಿತರರು ಸಮಾಜದ ಹಿರಿಯ ಮುಖಂಡರು ಹಾಗೂ ಯುವಕರು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!