ಗಾಂಜಾ ಮಾರಾಟ ಮಹಿಳೆ ಸೇರಿ ಇಬ್ಬರ ಬಂಧನ

ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಕೊಪ್ಪಳ ನಗರದ ಸಜ್ಜಿವಾಲಾ ಓಣಿಯಲ್ಲಿ ಮಹಿಳೆ ಸೇರಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
ರುಕ್ಮಿಣಿ ಅಲಿಯಾಸ್ ಫಾತಿಮಾ ಹಾಗೂ ಸುಭಾಷ್ ಬಂಧಿತರು. ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದರು ಎಂಬ ಆರೋಪವಿದ್ದು, ಹಲವು ವರ್ಷಗಳಿಂದ ನಗರದ ಸಜ್ಜಿವಾಲಾ ವಾಸವಾಗಿದ್ದಾರೆ ಎನ್ನಲಾಗಿದೆ.
ಇತ್ತಿಚೆಗೆ ಗವಿಸಿದ್ದಪ್ಪನನ್ನು ಕೊಚ್ಚಿ ಕೊಲೆ ಮಾಡಿದ ಅರೋಪಿ ಸಾದಿಕ್ ಗಾಂಜಾ ವ್ಯಸನಿಯಾಗಿದ್ದ ಹಾಗೂ ಅವನು ಗಾಂಜಾ ಸೇವಿಸಿಯೇ ಕೊಲೆ ಮಾಡಿದ್ದು ಎಂಬ ಮಾತುಗಳು ಕೇಳಿ ಬಂದಿತು. ಘಟನೆ ಮಾಸುವ ಮುನ್ನವೇ ಟೌನ್ ಪೊಲೀಸರು ಎಚ್ಚೆತುಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯುವಕರು ಬಲಿಯಾಗುತ್ತಿರುವ ಗಾಂಜಾ ಬಗ್ಗೆ ಮತ್ತು ಅದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಲ್ಲಿ ಕೊಪ್ಪಳದ ಪೊಲೀಸ್ ವರಿಷ್ಠ ಅಧಿಕಾರಿಗಳು ದಿಟ್ಟ ಹೆಜ್ಜೆಯನ್ನ ಇಟ್ಟಿದ್ದಾರೆ. ಗಾಂಜಾ ಮಾರಾಟಗಾರರನ್ನು ಮತ್ತು ಸೇವಿಸುವವರನ್ನು ಪತ್ತೆ ಹಚ್ಚಲು ಸಮರ್ಪಕ ಜಾಲವನ್ನು ಹೆಣೆದಿದ್ದಾರೆ ಕೊಪ್ಪಳದ ಪೊಲೀಸರು.