ಇಂದ್ರೇಶ್ವರ ಶಾಲೆಯಲ್ಲಿ ಕಲಿತ ಮಕ್ಕಳು ಉನ್ನತ ಸ್ಥಾನದಲ್ಲಿದ್ದರೆ; ಕೆ ಮಧುಸೂದನ್ ಡೊಳ್ಳಿನ್

ಕೊಪ್ಪಳ ತಾಲೂಕಿನ ಶ್ರೀ ಇಂದ್ರೇಶ್ವರ ಹಿರಿಯ ಪ್ರಾಥಮಿಕ ಶಾಲೆ ಇಂದರಗಿ ಶಾಲೆಯಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆ ಮತ್ತು 2025-26ನೇ ಸಾಲಿನಲ್ಲಿ ದಾಖಲಾದ ಮಕ್ಕಳಿಗೆ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವನ್ನು ಸಸಿಯನ್ನು ಹಚ್ಚುವುದರ ಮೂಲಕ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ನಾಗರಾಜ್ ಕಂಬಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಕಾರ್ಯಕ್ರಮ ಉದ್ದೇಶಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯರಾದ ಕೆ ಮಧುಸೂದನ್ ಡೊಳ್ಳಿನ ಇಂದ್ರೇಶ್ವರ ಶಾಲೆ ಮಕ್ಕಳಿಗೆ ಉನ್ನತವಾದ ಶೈಕ್ಷಣಿಕ ಜ್ಞಾನ ಮತ್ತು ಮಾನವೀಯ ಮೌಲ್ಯಗಳನ್ನು ನೀಡಲು ಹಲವಾರು ವರ್ಷಗಳಿಂದ ಶ್ರಮ ಪಡುತ್ತಾ ಬರುತ್ತಿದೆ,

ಈ ಶಾಲೆಯು ಹಲವಾರು ಮಕ್ಕಳಿಗೆ ದಾರಿದೀಪವಾಗಿದ್ದು ಈ ಶಾಲೆಯಲ್ಲಿ ಕಲಿತ ಮಕ್ಕಳು ಉನ್ನತ ಹುದ್ದೆಯಲ್ಲಿ ಜೀವನವನ್ನು ಸಾಗಿಸುತ್ತಿದ್ದಾರೆ ಈ ಸಂಸ್ಥೆಯ ಜೊತೆಯಲ್ಲಿ ಊರಿನ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸರ್ವ ಸದಸ್ಯರು ಊರಿನ ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು ಸದಸ್ಯರು ಬೆನ್ನೆಲುಬಾಗಿ ನಿಂತಿದ್ದು ಮುಂದಿನ ದಿನಮಾನಗಳಲ್ಲಿ ಇನ್ನು ದೊಡ್ಡ ಮಟ್ಟಕ್ಕೆ ಬೆಳೆಯಲಿ ಎಂದು ಎಲ್ಲರೂ ಶುಭ ಆಶಿಸುತ್ತಿದ್ದಾರೆ ಎಂದು ಹೇಳಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವನಗೌಡ್ರು, ಇಂದ್ರೇಶ್ವರ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಇಂದ್ರೇಶ್ ಕೊಳ್ಳಿ, ಊರಿನ ಯುವಕರಾದ ಚೇತನ್ ಹಿರೇಮಠ್ ಶಿಕ್ಷಕಿಯರಾದ ಈಶ್ವರಿ, ಗೀತಾ, ವೆಂಕಟೇಶ, ಭಾಗ್ಯ, ಲಷ್ಮಿ, ನೇತ್ರಾವತಿ, ಪುಷ್ಪ, ಭೂಮಿಕಾ, ಶೋಭಾ, ಸರಸ್ವತಿ, ಗೀತಾ ಕೆಂಗೇರಿ, ರೇಖಾ, ಜ್ಯೋತಿ, ಬುದೇಶ್ವರ್ ದೇವಾಲಯದ ಅರ್ಚಕರಾದ ಶ್ರೀ ಪ್ರಸನ್ ದೇಸಾಯಿ ಹಾಗೂ ಇತರರು ಇದ್ದರು