ಹಿರೇ ಸಿಂದೋಗಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ..!

ಕೊಪ್ಪಳ: ತಾಲೂಕಿನ ಹಿರೇ ಸಿಂದೋಗಿ ಕಾರ್ಯಕ್ಷೇತ್ರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ.ಕೊಪ್ಪಳ ಜಿಲ್ಲಾ ನಿರ್ದೇಶಕರಾದ ಪ್ರಕಾಶ್ ರಾವ್ ರವರು ಕಾರ್ಯಕ್ರಮದ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಇವರು ಇತ್ತೀಚಿನ ದಿನಗಳಲ್ಲಿ ಮಕ್ಕಳು ಅನೇಕ ದುಶ್ಚಟಾಗಳಿಗೆ ಬಲಿಯಾಗುತ್ತಿದ್ದು ಈ ಬಗ್ಗೆ ಪೋಷಕರು ಮಕ್ಕಳ ಮೇಲೆ ನಿಗಾವಹಿಸುವ ಕೆಲಸ ಮಾಡಬೇಕು ಶಾಲೆಗಳಲ್ಲಿ ಶಿಕ್ಷಕರು ದುಶ್ಚಟಕ್ಕೆ ಬಲಿಯಾದ ಮಕ್ಕಳನ್ನ ಗುರುತಿಸಿ ವಿಶೇಷ ಬೋಧನೆ ಮಾಡುವ ಮೂಲಕ ಮನ ಪರಿವರ್ತನೆ ಮಾಡಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ಜಗದೀಶ್ ಕೆ ಹೆಚ್ ರವರು ಎಲ್ಲಾ ಮಕ್ಕಳಿಗೆ ದುಶ್ಚಟಗಳನ್ನು ತ್ಯಜಿವುವ ಬಗ್ಗೆ ಪ್ರಮಾಣ ವಚನ ಮಾಡಿಸಿದರು ಈ ಸಂಧರ್ಭದಲ್ಲಿ ಈಶ್ವರ್ ಪೂಜಾರ್,ಶಾಲೆಯ ಮುಖ್ಯ್ಯೋ ಪಾಧ್ಯಾಯರಾದ S B ಕುರಿ,ಹಾಗೂ ಸಹ ಶಿಕ್ಷಕರಾದ ಶೋಭಾ,ಬಸವರಾಜ್ ಮರಿಸ್ವಾಮಿ, ವಲಯದ ಮೇಲ್ವಿಚಾರಕಿ ರುಕ್ಮಿಣಿ, ಶರಣಮ್ಮ, ಕವಿತಾ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತಿತರಿದ್ದರು.