ಸೆ.28 ಗಂಗಾವತಿ ಭತ್ತದ ನಾಡಿಗೆ ರವಿ ಡಿ. ಚನ್ನಣ್ಣನವರ್

GBNEWS KANNADA
ಗಂಗಾವತಿ.ಸೆ.26: ಕರ್ನಾಟಕ ರಾಜ್ಯ ಅಗ್ನಿ ಶಾಮಕ ದಳದ ಡಿಐಜಿಪಿ, ಕರ್ನಾಟಕದ ಪೊಲೀಸ್ ಇಲಾಖೆಯ ಸಿಂಗಂ ಎಂದೇ ಹೆಸರಾಗಿರುವ ರವಿ ಡಿ. ಚನ್ನಣ್ಣನವರ್ ಅವರು ಇದೇ ಸೆ. 28ಕ್ಕೆ ಗಂಗಾವತಿಗೆ ಆಗಮಿಸಲಿದ್ದಾರೆ ಎಂದು ಕಿಷ್ಕಿಂಧ ಯುವ ಚಾರಣ ಬಳಗದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಂಗಾವತಿ ನಗರದ ಲೀವ್ ವಿತ್ ಹ್ಯೂಮಾನಿಟಿ ಹಾಗೂ ಕಿಷ್ಕಿಂಧ ಯುವ ಜಾರಣ ಬಳಗ ಸಮಿತಿಯವರು ಸಹಯೋಗದಲ್ಲಿ ಏರ್ಪಡಿಸಿರುವ ವಿದ್ಯಾರ್ಥಿ ಪ್ರೇರಣಾ ಶಿಬಿರದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಲಿದ್ದಾರೆ. ಇದರೊಂದಿಗೆ ವಿದ್ಯಾರ್ಥಿಗಳ ವಿಕಸನ ಬಗ್ಗೆಯೂ ವಿಶೇಷ ಉಪನ್ಯಾಸ ನೀಡಲಿರುವ ರವಿ ಡಿ. ಚನ್ನಣ್ಣನವರ್ ಅವರ ಆಗಮನಕ್ಕೆ ಗಂಗಾವತಿ ಪಟ್ಟಣದ ಜನತೆ ಮತ್ತು ಗ್ರಾಮೀಣ ವಿದ್ಯಾರ್ಥಿಗಳು ಬಹಳಷ್ಟು ಕಾತುರತೆಯಿಂದ ಕಾಯುತ್ತಿದ್ದಾರೆ.
ಅಮರ್ ಆಸ್ಪತ್ರೆ ಆವರಣ ಉದ್ದವಲಕ್ಷ್ಮೀ ದೇವಸ್ಥಾನದ ಹತ್ತಿರ ಭಾನುವಾರ ಸೆ.28ರ ಸಂಜೆ 4.00 ಗಂಟೆಗೆ ನಿಗದಿಯಾಗಿರುವ ಈ ಕಾರ್ಯಕ್ರಮದ ಅಧ್ಯಕ್ಷತೆ ಹಿರಿಯ ವೈದ್ಯರಾದ ಡಾ.ಜಿ.ಚಂದ್ರಪ್ಪ ವಹಿಸಲಿದ್ದಾರೆ. ಹಾಗೂ ಡಾ.ಅಮರೇಶ ಪಾಟೀಲ್,ಅಭಿಷೇಕ ಡಿ.ಎಂ. ಲೀವ್ ವಿತ್ ಹ್ಯೂಮಾನಿಟಿ,ಮತ್ತು ಕಿಷ್ಕಿಂಧ ಯುವ ಜಾರಣ ಬಳಗದವರು ಉಪಸ್ಥಿತರಿರಲಿದ್ದು, ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.