ನಗರ ಸ್ವಚ್ಛ ಕಾಣಲು ಪೌರಕಾರ್ಮಿಕರ ಶ್ರಮ ಪ್ರಶಂಶನೀಯ; ಅಮ್ಜದ್ ಪಟೇಲ್

GBNEWS KANNADA
ಕೊಪ್ಪಳ :ಸೆಪ್ಟೆಂಬರ್ 25, ಜಿಲ್ಲಾ ಕೇಂದ್ರವಾದ ಕೊಪ್ಪಳ ನಗರವನ್ನು ಸುಂದರ ನಗರ ವನ್ನಾಗಿಸಲು ಇಲ್ಲಿನ ಪೌರ ಕಾರ್ಮಿಕರ ಪರಿಶ್ರಮ ಹೆಚ್ಚಾಗಿದೆ, ನಗರದಲ್ಲಿ ಸ್ವಚ್ಛತೆ ಕಂಡುಬರುತ್ತವೆ ಎಂದರೆ ಅದಕ್ಕೆ ಪೌರಕಾರ್ಮಿಕರ ಪರಿಶ್ರಮ ಅವರ ನಿಸ್ವಾರ್ಥ ಸೇವೆ ಕಾರಣವಾಗಿದೆ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು, ಅವರು ನಗರದಲ್ಲಿ ನಗರಸಭೆ ವತಿಯಿಂದ ಏರ್ಪಡಿಸಿದ ಪೌರ ಕಾರ್ಮಿಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಮುಂದುವರೆದು ಮಾತನಾಡಿ ನಗರದಲ್ಲಿ ವಾಸಿಸುವ ಜನರಿಗೆ ಕುಡಿಯುವ ನೀರು, ಬೀದಿ ದೀಪ ಜೊತೆಗೆ ಸ್ವಚ್ಛತೆ ಬಯಸುತ್ತಾರೆ, ಇದನ್ನೆಲ್ಲ ಅವರಿಗೆ ನೀಡ ಬೇಕೆಂದರೆ ಪೌರ ಕಾರ್ಮಿಕರ ಪರಿಶ್ರಮ ಬಹಳವಿದೆ, ಬೆಳಗಿನ ಜಾವ ದಿಂದಲೇ ತನ್ನ ಸೇವೆ ಪ್ರಾರಂಭಿಸುವ ಕಾರ್ಮಿಕರಿಗೆ ನಗರಸಭೆ ವತಿಯಿಂದ ಸಿಗಬಹುದಾದ ಸೌಕರ್ಯ ಮತ್ತು ಅವರ ಬೇಡಿಕೆ ಗಳನ್ನು ಈಡೇರಿಸುವುದು ನಮ್ಮ ಜವಾಬ್ದಾರಿಯಾಗಿದೆ ಈಗಾಗಲೇ ಶಾಸಕರ ಮುತುವರ್ಜಿಯಿಂದ 55 ಜನ ಪೌರ ಕಾರ್ಮಿಕರಿಗೆ ನಿವೇಶನ ಹಂಚಲಾಗಿದೆ ಇನ್ನು 10 ರಿಂದ 15 ಜನರ ಬೇಡಿಕೆ ಇದೆ ಅದು ಕೂಡ ಈಡೇರಿಸಲು ಶಾಸಕರಲ್ಲಿ ಮನವರಿಕೆ ಮಾಡಿ ಕೊಳ್ಳಲಾಗಿದೆ ಪೌರ ಕಾರ್ಮಿಕರ ಕಾಲೋನಿ ನಿರ್ಮಿಸಲಾಗುವುದು ಎಂದರು, ಕಳೆದ ವರ್ಷದ ಗವಿಮಠ ಜಾತ್ರೆ ಸಂದರ್ಭದಲ್ಲಿ ನಮ್ಮ ಪೌರಕಾರ್ಮಿಕರು ಉತ್ತಮ ರೀತಿಯಲ್ಲಿ ಶ್ರಮಿಸಿ ಸ್ವಚ್ಛ ನಗರವನ್ನಾಗಿ ಮಾಡುವಲ್ಲಿ ಪರಿಶ್ರಮ ಪಟ್ಟಿದ್ದು ಸ್ವತಃ ಗವಿಮಠದ ಶ್ರೀಗಳು ದೂರವಾಣಿ ಮೂಲಕ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವಾದ ಮಾಡಿದ್ದರು ಎಂದು ಹೇಳಿ ಮುಂಬರುವ ಈ ಸಾಲಿನ ಶ್ರೀ ಗವಿಮಠದ ಜಾತ್ರೆ ಸಂದರ್ಭದಲ್ಲಿ ನಾವೆಲ್ಲರೂ ಸೇರಿಕೊಂಡು ನಗರದಲ್ಲಿ ಸ್ವಚ್ಛತೆ ಕಾಪಾಡುವುದರ ಜೊತೆಗೆ ನಗರದ ಸುಂದರಿ ಕರಣಕ್ಕಾಗಿ ಶ್ರಮಿಸೋಣ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ಹೇಳಿದರು, ಸಮಾರಂಭದಲ್ಲಿ ಶಾಸಕ ಕೆ ರಾಘವೇಂದ್ರ ಹಿಟ್ನಾಳ, ಸಂಸದ ಕೆ ರಾಜಶೇಖರ ಹೆಡ್ನಾಳ್, ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್ ಅರಸಿದ್ದಿ, ನಗರಸಭೆಯ ಉಪಾಧ್ಯಕ್ಷರಾದ ಅಶ್ವಿನಿ ಗದಗಿನಮಠ, ಪೌರಾಯುಕ್ತರಾದ ವೆಂಕಟೇಶ್ ನಾಗನೂರ್, ಸ್ಥಾಯಿ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ್ ಸೇರಿದಂತೆ ನಗರಸಭೆಯ ಸದಸ್ಯರು ಅಧಿಕಾರಿ ವರ್ಗದವರು ಮತ್ತು ಸಿಬ್ಬಂದಿ ವರ್ಗದವರು ಸೇರಿದಂತೆ ಪೌರ ಕಾರ್ಮಿಕರು ಪೌರಕಾರ್ಮಿಕರ ಸಂಘಟನೆ ಪದಾಧಿಕಾರಿಗಳು ಕಾರ್ಯಕ್ರದಲ್ಲಿ ಉಪಸ್ಥಿತರಿದ್ದರು.