ಕಾರಟಗಿ

ಕಳಪೆ ಗುಣಮಟ್ಟದ ಹಮ್ಸ್ ಗಳ ಅಳವಡಿಕೆ.08 ಲಕ್ಷ ಪುರಸಭೆ ಅನುದಾನ ವ್ಯರ್ಥ. ಹಮ್ಸ್ ಗಳ ಪುನರ್ ನಿರ್ಮಾಣಕ್ಕೆ ಆಗ್ರಹ

ವಿಶೇಷ ವರದಿ ಸುಂದರರಾಜ್ BA ಕಾರಟಗಿ 

ಕಾರಟಗಿ : ಕಾರಟಗಿ ಪಟ್ಟಣದ ಮುಖ್ಯ ರಸ್ತೆಗಳ ಮೇಲೆ ಸಾರ್ವಜನಿಕರ ಹಿತಾಸಕ್ತಿಗಾಗಿ ಅಳವಡಿಸಿದ ಹಮ್ಸ್ ಗಳು ಹಾಕಿದ 20 ದಿನಗಳಲ್ಲಿಯೇ ಕಿತ್ತು ಹೋಗಿವೆ. ಇದು ಹಮ್ಸ್ ಅಳವಡಿಸಿದ ಪುರಸಭೆ ಅಧಿಕಾರಿಗಳ ಅಧ್ಯಕ್ಷರ ಕಾರ್ಯಪಾಲನೆಯನ್ನು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ. ಪುರಸಭೆಯ ಅನುದಾನದಲ್ಲಿ ಸುಮಾರು 08 ಲಕ್ಷ್ಯ ವೆಚ್ಚದಲ್ಲಿ ಅಧಿಕಾರಿಗಳು ಹಮ್ಸ್ ಗಳ ಅಳವಡಿಕೆ ಕಾರ್ಯ ಕೈಗೊಂಡಿದ್ದರು, ಆದರೆ ಹಮ್ಸ್ ಗಳ ಅಳವಡಿಕೆಯಲ್ಲಿ ಅಧಿಕಾರಿಗಳು ಗುಣಮಟ್ಟ ಕಾಯ್ದುಕೊಂಡಿಲ್ಲ ಎಂದು ಸಾಮಾಜಿಕ ಹೋರಾಟಗಾರ ಸುಂದರರಾಜ್ ಆರೋಪಿಸಿದ್ದಾರೆ. ಈ ಕುರಿತು ಹಮ್ಸ್ ಗಳ ಖುದ್ದು ಪರಿಶೀಲಿಸಿ ಮಾತನಾಡಿದ ಅವರು ಎರಡು ವರ್ಷಗಳ ಹಿಂದೆ ಹಳೆಯ ಬಸ್ ನಿಲ್ದಾಣದ ಹತ್ತಿರದಲ್ಲಿ ಬಾಲಕ, ಬಾಲಕಿಯರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ಸ್ಪೀಡ್ ಬ್ರೇಕರ್ ಅಳವಡಿಕೆ ಮಾಡಲಾಗಿದೆ ಎರಡು ವರ್ಷಗಳಾದರೂ ಹಮ್ಸ್ ಗಳು ಶಿಥಿಲಗೊಂಡಿಲ್ಲ ಗುಣಮಟ್ಟದ ಹಮ್ಸ್ ಗಳ ಅಳವಡಿಕೆ ಮಾಡಲಾಗಿದೆ, ಆದರೆ ಈಗಷ್ಟೇ 20 ದಿನಗಳ ಹಿಂದೆ ಪುರಸಭೆ ಅಧಿಕಾರಿಗಳು ಅಳವಡಿಸಿದ ಹಮ್ಸ್ ಗಳು ಶಿಥಿಲಗೊಂಡಿವೆ ಸೀಳಿವೆ ಹಾಗೂ ಕಿತ್ತುಹೋಗಿವೆ ಇದು ಅಧಿಕಾರಿಗಳ ಕರ್ತವ್ಯಲೋಪಕ್ಕೆ ಹಿಡಿದ ಕನ್ನಡಿಯಾಗಿದೆ,

ಕಳಪೆ ಗುಣಮಟ್ಟದ ಹಮ್ಸ್ ಗಳು ಅಳವಡಿಯಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದರಿಂದಾಗಿ ಹಮ್ಸ್ ಗಳ ಅಳವಡಿಕೆ ಮಾಡಿದರೂ ಪುರಸಭೆಯ 08 ಲಕ್ಷ ರೂಪಾಯಿಗಳು ವ್ಯರ್ಥವಾಗಿವೆ. ಪುರಸಭೆ ಅಧಿಕಾರಿಗಳು ಹಮ್ಸ್ ಗಳ ಅಳವಡಿಕೆಗೆ ಆಸಕ್ತಿ ತೋರಿದ್ದಾರೆ ಆದರೆ ಅವುಗಳ ಗುಣಮಟ್ಟದ ಬಗ್ಗೆ ನಿರ್ಲಕ್ಷ್ಯವಹಿಸಿದ್ದು ಯಾಕೆ ಎನ್ನುವಂತಾಗಿದೆ. ಕೂಡಲೇ ರಸ್ತೆಯ ಮೇಲೆ ಅಳವಡಿಸಿರುವ ಹಮ್ಸ್ ಗಳ ತೆರವುಗೊಳಿಸಿ ಪುನಃ ಗುಣಮಟ್ಟದ ಹಮ್ಸ್ ಗಳನ್ನು ಅಳವಡಿಸಿ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಬೇಕಾಗಿದೆ ಎಂದು ಒತ್ತಾಯಿಸಿದರು.

ಪುರಸಭೆಯ ಸದಸ್ಯರಾದ ಸಂಗನಗೌಡ ಇವರು ಹಮ್ಸ್ ಗಳ ಅಳವಡಿಕೆಯಲ್ಲಿ ನಿರ್ಲಕ್ಷ್ಯ ವಹಿಸಿದ ಪುರಸಭೆ ಅಧಿಕಾರಿಗಳ ಹಾಗೂ ಅಧ್ಯಕ್ಷಕಾರ್ಯ ವೈಖರಿ ಬಗ್ಗೆ ಬೇಸರ ವ್ಯಕ್ತ ಪಡಿಸಿದರು. ಹಮ್ಸ್ ಗಳ ಅಳವಡಿಕೆಯಲ್ಲಿ ಜವಾಬ್ದಾರಿ ಮೆರೆಯಬೇಕಾದ ಇವರು ಬೇಜವಾಬ್ದಾರಿ ತೋರಿರುವುದರಿಂದ ಗುಣಮಟ್ಟದ ಹಮ್ಸ್ ಗಳ ಬದಲು ಕಳಪೆ ಹಮ್ಸ್ ಗಳ ಅಳವಡಿಸಿ ಸಾರ್ವಜನಿಕ ತೆರಿಗೆ ಹಣ ದುರುಪಯೋಗ ಪಡಿಸಲಾಗಿದೆ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು

Related Articles

Leave a Reply

Your email address will not be published. Required fields are marked *

Back to top button
error: Content is protected !!