ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿಗೆ ಗೋನಾಳ ಸೇರಿ ಐದು ಸದಸ್ಯರ ನೇಮಕ

ಕೊಪ್ಪಳ ಸೆಪ್ಟೆಂಬರ್ 13, ಕರ್ನಾಟಕ ಸರ್ಕಾರದ ಅಂಗ ಸಂಸ್ಥೆ ಯಾಗಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕೊಪ್ಪಳ ಜಿಲ್ಲಾ ಜಾಗೃತಿ ಸಮಿತಿಗೆ ಕೊಪ್ಪಳದ ಹಿರಿಯ ಪತ್ರಕರ್ತ ಸಾಹಿತಿ ಹಾಗೂ ಬರಹಗಾರ ಜಿ.ಎಸ್. ಗೋನಾಳ ರವರು ಸೇರಿದಂತೆ ಐದು ಜನ ಸದಸ್ಯರು ನೇಮಕಗೊಂಡಿದ್ದಾರೆ,
ಕೊಪ್ಪಳ ನಗರದ ಶ್ರೀ ಗವಿಸಿದ್ದೇಶ್ವರ ಪದವಿ ವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ನಾಗರಾಜ್ ದಂಡೋತಿ, ಹಿರಿಯ ಪತ್ರಕರ್ತ ಸಾಹಿತಿ ಹಾಗೂ ಬರಹಗಾರ ಜಿ.ಎಸ್. ಗೋನಾಳ, ಕೊಪ್ಪಳ ನಗರದ ಮಹೇಶ್ ಬಳ್ಳಾರಿ, ಹಿರಿಯ ಶ್ರೇಣಿ ಕನ್ನಡ ಉಪನ್ಯಾಸಕ ಡಾ, ಸಿದ್ದಲಿಂಗಪ್ಪ ಕೊಟ್ನೆಕಲ್, ಮತ್ತು ಕೊಪ್ಪಳದ ಸಹಾಯಕ ಪ್ರಾಧ್ಯಾಪಕ ಡಾ, ನಿಂಗಪ್ಪ ಕಂಬಳಿ ರವರು ಜಿಲ್ಲಾ ಜಾಗೃತಿ ಸಮಿತಿಗೆ ಸದಸ್ಯರನ್ನಾಗಿ ನೇಮಕಗೊಂಡಿದ್ದಾರೆ,
ಸರಕಾರದ ಶಿಫಾರಸ್ಸಿನ ಮೇರೆಗೆ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಆರ್. ರಮೇಶ್ ರವರು ಈ ಐದು ಜನ ಸದಸ್ಯರನ್ನು ಕೊಪ್ಪಳ ಜಿಲ್ಲಾ ಜಾಗೃತಿ ಸಮಿತಿಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ,
ಈ ಎಲ್ಲಾ ಸದಸ್ಯರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕೊಪ್ಪಳ ಜಿಲ್ಲೆಯ ಸದಸ್ಯರಾದ ವಿರುಪ್ಪಣ್ಣ ಕಲ್ಲೂರ್ ರವರ ನೇತೃತ್ವದ ಸಮಿತಿಯಲ್ಲಿ ಸದಸ್ಯರಾಗಿ ಜಿಲ್ಲೆಯಲ್ಲಿ ಕನ್ನಡ ಕಟ್ಟುವ , ಕನ್ನಡ ಬೆಳೆಸುವ ಕೆಲಸ, ಸಾರ್ವಜನಿಕರಲ್ಲಿ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ,
ಕನ್ನಡ ಜಿಲ್ಲಾ ಜಾಗೃತಿ ಸಮಿತಿಗೆ ನೇಮಕಗೊಂಡಿರುವ ಈ ಎಲ್ಲಾ ಐದು ಜನ ಸದಸ್ಯರಿಗೆ ಜಿಲ್ಲೆಯ ವಿವಿಧ ಕನ್ನಡ ಪರ ಸಂಘಟನೆಗಳು ಹರ್ಷ ವ್ಯಕ್ತಪಡಿಸಿದರು.