ಕೊಪ್ಪಳಜಿಲ್ಲಾ ಸುದ್ದಿಗಳು

ಬೃಹತ್ ಉಕ್ಕು ಕಾರ್ಖಾನೆ ಸ್ಥಾಪನೆಗೆ ಕರ್ನಾಟಕ ನವ ನಿರ್ಮಾಣ ಸೇನೆಯಿಂದ ವಿರೋಧ

ಜಿಲ್ಲಾಧಿಕಾರಿಗಳಿಗೆ ಮನವಿ

ಕೊಪ್ಪಳ ಜಿಲ್ಲಾ ಕೇಂದ್ರದ ಅನತಿ ದೂರದಲ್ಲಿಯೇ ಬಿಎಸ್ಪಿಎಲ್ ಕಂಪನಿ ಬೃಹತ್ ಉಕ್ಕು ಕಾರ್ಖಾನೆ ಸ್ಥಾಪನೆ ಮಾಡುತ್ತಿರುವುದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿರುವುದು ದುರದೃಷ್ಟಕರ ಹಾಗೂ ಆತಂಕಕಾರಿ ಸಂಗತಿ ಈಗಾಗಲೇ ಕೊಪ್ಪಳ ತಾಲೂಕಿನಲ್ಲಿ ಬಹಳ ಕಾರ್ಖಾನೆಗಳು ಸ್ಥಾಪನೆಯಾಗಿದ್ದು ಅದರಿಂದ ತಾಲೂಕಿನ ಸಾಕಷ್ಟು ಹಳ್ಳಿಗಳು ಬಹಳ ದುಷ್ಪರಿಣಾಮಗಳನ್ನು ಎದುರಿಸುತ್ತಿವೆ ಈ ಕಾರ್ಖಾನೆಗಳಿಂದ ಗ್ರಾಮೀಣ ಭಾಗದ ಜನರ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದ್ದು ಬೆಳೆಗಳ ಹಾನಿಯಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲಾ ಕೇಂದ್ರಕ್ಕೆ  ಹೊಂದಿಕೊಂಡೆ ಸ್ಥಾಪನೆ ಹಾಗೂ ವಿಸ್ತರಣೆ ಮಾಡುತ್ತಿರುವುದು ಕೊಪ್ಪಳ ಜನರ ನಿದ್ದೆಗೆಡಿಸಿದೆ. ಯಾಕಂದ್ರೆ ಹಿಂದೆ ಈ ಕಾರ್ಖಾನೆ ಸ್ಥಾಪನೆ ವಿರೋಧಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು. ಈಗಾಗಲೇ ಈ ಕಾರ್ಖಾನೆಯಿಂದ ಜನರ ಆರೋಗ್ಯ ಹದಗೆಡುತ್ತಿದ್ದು ನಿರಂತರ ಕೆಮ್ಮು ಕಾಡುತ್ತಿದೆ ಮಕ್ಕಳ ಹಾಗೂ ಆರೋಗ್ಯದ ಮೇಲೆ ವಯೋವೃದ್ಧರು ಕೂಡ ಉಸಿರಾಟದ ತೊಂದರೆ ಸೇರಿದಂತೆ ವಿವಿದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಹಾಗೂ ಮನೆ ಮೇಲೆ ಮನೆಯ ಕಾಂಪೌಂಡ್ ನಲ್ಲಿ ಕರಿಬೂದಿ ಹಾರಾಡುತ್ತಿದ್ದು ಇದು ಜನರ ಆತಂಕಕ್ಕೆ ಕಾರಣವಾಗಿದೆ ಹೀಗೆ ಬೃಹತ್ ಕಾರ್ಖಾನೆ ವಿಸ್ತರಣೆಗೆ ಅವಕಾಶ ಕೊಟ್ಟರೆ ಕೊಪ್ಪಳ ನಗರ ಇನ್ನೊಂದು ತೋರಣಗಲ್ ಆಗುವುದರಲ್ಲಿ ಸಂಶಯವೇ ಇಲ್ಲ. ನಮ್ಮ ನೆಲ. ಜಲ ಬಳಸಿಕೊಂಡು ಕನ್ನಡಿಗರಿಗೆ ಉದ್ಯೋಗ ಕೊಡದೆ ವಂಚನೆ ಮಾಡುತ್ತಿರುವುದು ಹೊಸದೇನಲ್ಲ ನಮ್ಮ ನೆಮ್ಮದಿ ಜೊತೆ ಆಟ ಆಡುತ್ತಿರುವುದನ್ನು ಮೊದಲು ನಿಲ್ಲಿಸಿ. ಪರಿಸರ ಮತ್ತು ಮಾಲಿನ್ಯ ನಿಯಂತ್ರಣಾಧಿಕಾರಿಗಳು ಇದರಲ್ಲಿ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಹಾಗೂ ಆರೋಗ್ಯ ಇಲಾಖೆ ಕೂಡ ಸರ್ಕಾರಕ್ಕೆ ಮನದಟ್ಟು ಮಾಡಬೇಕೆಂದು ನಾನು ವಿನಂತಿಸಿಕೊಳ್ಳುತ್ತೇವೆ.
ನಾವು ಈ ವಿಷಯವಾಗಿ ವಕೀಲರ ಜೊತೆ ಚರ್ಚೆ ಮಾಡಿದ್ದು ಕಾನೂನು ಹೋರಾಟಕ್ಕೂ ಕೂಡ ನಮ್ಮ ಸಂಘಟನೆ ಸಿದ್ಧವಿದೆ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸುತ್ತೇವೆ. ಈ ಉಕ್ಕು ಕಾರ್ಖಾನೆ ವಿಸ್ತರಣೆಯನ್ನು ಈ ಕೂಡಲೇ ಸರ್ಕಾರ ಕೈ ಬಿಡಬೇಕು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು ಇಲ್ಲದಿದ್ದರೆ ಕರ್ನಾಟಕ ನವ ನಿರ್ಮಾಣ ಸೇನೆಯಿಂದ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದೆಂದು ಸಂಘಟನೆಯು ಎಚ್ಚರಿಸುತ್ತದೆ. ಈ ಸಂದರ್ಭದಲ್ಲಿ ವಿಜಯಕುಮಾರ ಕವಲೂರು ರಾಜ್ಯ ಸಂಚಾಲಕರು, ಜಿ.ಎಸ್ ಗೋನಾಳ ಗೌರವಾಧ್ಯಕ್ಷರು, ಮುದ್ದಪ್ಪ ಗೊಂದಿ ಹೊಸಳ್ಳಿ ತಾಲೂಕಾಧ್ಯಕ್ಷರು, ಗವಿಸಿದ್ದಪ್ಪ ಮಂಗಳಾಪುರ, ಯುನುಸ್ ಅಲಿ ನಮಾಜಿ, ರಫೀ ಲೋಹಾರ, ಶಂಕರ ಮೇಟಿ, ಜಾಫರ್ ಸಾಧಿಕ, ದೇವೆಂದ್ರಪ್ಪ ತೊಂಡಿಹಾಳ, ಗವಿಸಿದ್ದಪ್ಪ ಹಲಗೇರಿ, ಮಂಜುನಾಥ ಪಾಟೀಲ್, ಮಾರುತಿ ಅಲ್ಲಾನಗರ, ಮಾರುತಿ ಕುಟಗನಹಳ್ಳಿ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!