ಮಹಿಳಾ ಆರೋಗ್ಯ ತಪಾಸಣೆ ಶಿಬಿರ”

ಸ್ನೇಹ ಸಿದ್ಧಿ ಸೇವಾ ಟ್ರಸ್ಟ್ (ರಿ) ಹಾಗೂ ಎನ್. ಆರ್. ಆಸ್ಪತ್ರೆ, ಇವರ ಸಹಯೋಗದಲ್ಲಿ…!
ದಿನಾಂಕ 28-05-2025 ಬುಧವಾರ ರಂದು ಬೆಳಿಗ್ಗೆ 9 ರಿಂದ ಸಂಜೆ 5 ವರೆಗೆ ಶಾದಿಮಹಲ್ ಮೆಹಬೂಬನಗರ, 1ನೇ ವಾರ್ಡ್, ಬಸಾಪಟ್ಟಣ ಗ್ರಾಮದಲ್ಲಿ ಸ್ನೇಹ ಸಿದ್ಧಿ ಸೇವಾ ಟ್ರಸ್ಟ್ (ರಿ) ಬಸಾಪಟ್ಟಣ ಹಾಗೂ ಎನ್. ಆರ್. ಆಸ್ಪತ್ರೆ, ವಡ್ಡರಹಟ್ಟಿ ಇವರ ಸಹಯೋಗದಲ್ಲಿ
“ಮಹಿಳಾ ಆರೋಗ್ಯ ತಪಾಸಣೆ ಶಿಬಿರವನ್ನು ಉಚಿತವಾಗಿ” ನಡೆಸಲಾಗುತ್ತದೆ ಎಂದು ಮಹ್ಮದ್ ಸಾಬ್ ದಳಪತಿ ಅಧ್ಯಕ್ಷರು, ಸ್ನೇಹಸಿದ್ದಿ ಚಾರಿಟೆಬಲ್ ಟ್ರಸ್ಟ್ ರಿ., ಬಸಾಪಟ್ಟಣ ಇವರು ಮಾಧ್ಯಮದೊಂದಿಗೆ ಮಾತನಾಡಿ ತಿಳಿಸಿದ್ದಾರೆ.
ಗ್ರಾಮೀಣ ಭಾಗದ ಬಡತನದಲ್ಲಿ ಇರುವ ನೂರಾರು ರೋಗಿಗಳಿಗೆ ನಮ್ಮ ಟ್ರಸ್ಟ್ ವತಿಯಿಂದ ಸಹಾಯವಾಗಲಿ ಎಂದು ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಈ
ಶಿಬಿರದಲ್ಲಿ ಡಾ: ಶ್ರೀಮತಿ ಅಂಜುಮ್ ತಾಜ್
ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ, ವೆಂಕಟಗಿರಿ.
ಡಾ: ಕುಮಾರಿ ಗೌರಿ
ಡಾ: ಶ್ರೀಮತಿ ಮೊಷ್ಕದಿ ನಾಹಿದ್ ಹೆರಿಗೆ ಮತ್ತು ಸ್ತ್ರೀರೋಗ ತಜ್ಞರು ಡಾ: ಆಬಿದ್ ಹುಸೇನ್
ಪಂಚಕರ್ಮ ತಜ್ಞರು ಭಾಗವಹಿಸಲಿದ್ದಾರೆಂದು ಮಾಹಿತಿ ನೀಡಿದರು ಜೊತೆಗೆ ಈ ಶಿಬಿರದ ಮುಖ್ಯ ಮುಖ್ಯಸ್ಥರು ಎನ್.ಆರ್. ಆಸ್ಪತ್ರೆ ವತಿಯಿಂದ ಔಷಧಿ ಫ್ರೀ ವಿತರಿಸಲಾಗುತ್ತಿದೆ. ಮಹಿಳೆಯರ ವಿವಿಧ ಪ್ರಕಾರದ ಆರೋಗ್ಯ ಸಮಸ್ಯೆಗಳ ಬಗ್ಗೆ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವುದು ಇದರ ಸದುಪಯೋಗವನ್ನು ಸುತ್ತ ಮುತ್ತ ಗ್ರಾಮದ ನೂರಾರು ಸಾರ್ವಜನಿಕರು ಉಚಿತ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಎಂಬಂತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು
ಮಹ್ಮದ್ ಸಾಬ್ ದಳಪತಿ
ಅಧ್ಯಕ್ಷರು, ಸ್ನೇಹಸಿದ್ದಿ ಚಾರಿಟೆಬಲ್ ಟ್ರಸ್ಟ್ (ರಿ) ಬಸಾಪಟ್ಟಣ ಇವರ ವಿನಂತಿಸಿದ್ದಾರೆ.