ಕರ್ನಾಟಕ ಪಬ್ಲಿಕ್ ಶಾಲೆಯ ಅಭಿವೃದ್ಧಿಗ ಕಾಮಗಾರಿಗೆ ಭೂಮಿ ಪೂಜೆ ಮೋದ

ಗಂಗಾವತಿ ವಿಧಾನಸಭಾ ಕ್ಷೇತ್ರದ ಇರಕಲಗಡ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ ಮಂಜೂರಾದ ಅಂದಾಜು ಮೊತ್ತ 3.24 ಕೋಟಿ ರೂಪಾಯಿ ವೆಚ್ಚದ ಶಾಲಾ ಕೊಠಡಿ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳ ಕಾಮಗಾರಿಗೆ ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ ಅವರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರಾದ ಕರಿಯಣ್ಣ ಸಂಗಟಿ,ಗ್ರಾಪಂ ಅಧ್ಯಕ್ಷರಾದ ಶಿವಮ್ಮ ಅವರ ಪುತ್ರ ಶಂಕರ್ ನಾಯಕ್, ಮಾಜಿ ಜಿ.ಪಂ ಸದಸ್ಯರಾದ ಅಮರೇಶ ಹೊಸಮನಿ ಹಾಗೂ ಮುಖಂಡರಾದ ಡಿ.ಕೆ ಅಗೋಲಿ, ಮನೋಹರ್ ಗೌಡ ಹೇರೂರು, ಸಂಗಮೇಶ ಬಾದವಾಡಗಿ, ಚನ್ನವೀರನ ಗೌಡ್ರು, ಚಂದ್ರು ಹಿರೂರು ರಮೇಶ ಹೊಸಮಲಿ, ಗಂಗಾಧರ ಸ್ವಾಮಿ, ವೀರಬಸಪ್ಪ ಪಟ್ಟಣಶೆಟ್ಟಿ, ವೀರಬಸಪ್ಪ ಶೆಟ್ಟರ್, ದ್ಯಾಮಣ್ಣ ಪೂಜಾರ್, ಮಂಜುನಾಥ ಗೊಂದಿ, ಮಹಾಂತೇಶ್ ಸಂಗಟಿ, ಬಸವರಾಜು ಪಿನ್ನಿ, ರಮೇಶ್ ನಾಯಕ್, ಮಲ್ಲಣ್ಣ ಕಾಮನೂರು, ಕೆ.ರಾಘಣ್ಣ, ಗವಿಚಳ್ಳರಿ, ವೀರೇಶ್ ಬಲಕುಂದಿ, ಶ್ರೀಧರ್, ಕೆಸರಹಟ್ಟಿ ವಿಶ್ವನಾಥ, ಅನಿಲ್ ನಾಯ್ಕ್, ರೇವಣಸಿದ್ದಯ್ಯ, ಸೇರಿದಂತೆ ಗ್ರಾಪಂ ಸದಸ್ಯರು ಹಾಗೂ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.