ಕರಡಿ ದಾಳಿ ಒರ್ವ ವ್ಯಕ್ತಿಗೆ ಗಂಭೀರ ಗಾಯ,,!

ಜೀಬಿ ನ್ಯೂಸ್ ಕನ್ನಡ ಸುದ್ದಿ ಕೊಪ್ಪಳ
.ಕುಕನೂರು :ತಾಲೂಕಿನ ರ್ಯಾವಣಕಿ ಗ್ರಾಮದ ಮೊರಾರ್ಜಿ ಶಾಲೆಯ ಹಿಂಭಾಗದಲ್ಲಿ ರೈತರು ಹೋಲದಲ್ಲಿ ಕಾರ್ಯ ನಿರತರಾದಾಗ ಹಿಂದಿನಿಂದ ಬಂದ ಕರಡಿಯೊಂದು ವೃದ್ದನ ಮೇಲೆ ದಾಳಿನಡೆಸಿದೆ
ರ್ಯಾವಣಕಿ ಗ್ರಾಮದ ನಾಗಪ್ಪ ಬೆಂಚಳ್ಳಿ ಹಾಗೂ ಆತನ ಪುತ್ರ ಶುಕ್ರವಾರದಂದು ಹೊಲಕ್ಕೆ ತೆರಳಿದ್ದರು.ಈಗ ಹೊಲದಲ್ಲಿ ಕಳೆ ಕೀಳುವುದು, ಬೆಳೆಗಳಿಗೆ ಕ್ರೀಮಿ ನಾಶಕ ಸಿಂಪಡಿಸುವುದು, ಗೊಬ್ಬರ ಹಾಕುವುದು ಮಾಡುವ ಸಮಯವಾದ್ದರಿಂದ ಹೋಲಕ್ಕೆ ತೆರಳಿದ ಸಂದರ್ಭದಲ್ಲಿ ಮಗ ಹೊಲದ ಒಂದು ಬದುವಿನಲ್ಲಿ, ತಂದೆ ಒಂದು ಬದುವಿನಲ್ಲಿ ಕೆಲಸ ಮಾಡುವಾಗ ಕರಡಿ ಏಕಾ ಏಕಿ ದಾಳಿ ನಡೆಸಿದ್ದು, ವೃದ್ದ ನಾಗಪ್ಪ ಕೂಗುವದಕ್ಕೂ ಬಿಡದಂತೆ ದಾಳಿ ಮಾಡಿದೆ.
ಆದರೂ ಮೇಲೆದ್ದು ಮಗನನ್ನು ಕೂಗಿದಾಗ ಕರಡಿ ಸಿಕ್ಕ ಸಿಕ್ಕಲ್ಲಿ ತೆರಚಿ ಗಂಭೀರವಾಗಿ ಗಾಯಗೊಳಿಸಿದ್ದು, ಕೂಡಲೇ ಮಗ ಜೋರಾದ ದ್ವನಿಯಲ್ಲಿ ಓಡಿಸುತ್ತಾ ಬಂದಿದ್ದನ್ನು ಗಮನಿಸಿದ ಪಕ್ಕದ ಜಮೀನಿನವರು ಓಡಿ ರಕ್ಷಣೆಗೆ ಬರುವಷ್ಟರಲ್ಲಿ ರಕ್ತ, ಸಿಕ್ತವಾಗಿ ನಾಗಪ್ಪ ಗಾಯಗೊಂಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಪತ್ರಿಕೆಗೆ ಮಾಹಿತಿಯೊದಗಿಸಿದ್ದಾರೆ.
ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕಿನ ಮಂಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಾಗಪ್ಪನವರನನ್ನು ಕರೆದುಕೊಂಡು ಹೋಗಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಎರಡು ದಿನಗಳ ಹಿಂದೆ ಮೂರು ಕರಡಿಗಳು ಆಹಾರ ಅರಸಿ ಈ ಭಾಗದ ಕಡೆಗೆ ಓಡಾಟ ನಡೆಸಿದ್ದು, ಅವುಗಳ ರಕ್ಷಣೆಗೆ ಗುಡ್ಡಗಾಡು ಇಲ್ಲದಿರುವುದರಿಂದ ಹಿಗೇ ಏಕಾ ಏಕಿ ದಾಳಿಗೆ ಮುಂದಾಗುತ್ತಿದ್ದು, ಅರಣ್ಯ ಇಲಾಖೆಯವರು ಕರಡಿಗಳನ್ನು ಬಂಧಿಸಲು ಓಡಾಟ ನಡೆಸಿದ್ದಾರೆ. ಇನ್ನೂ ಪ್ರತಿಯೊಬ್ಬರೂ ಜಮೀನುಗಳಿಗೆ ತೆರಳುವ ಮುನ್ನ ತಮ್ಮ ರಕ್ಷಣೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.