ಕೊಪ್ಪಳ ತಾಲೂಕಿನ ಕೆರೆಹಳ್ಳಿ ಬಳಿ ಹುಲಿಗೆಮ್ಮ ದೇವಿ ಪಾದಯಾತ್ರಿಗಳ ಮೇಲೆ ಹರಿದ ಲಾರಿ ಒಬ್ಬರ ಸಾವು
ಪಾದಯಾತ್ರಿಗಳ ಸಾಲಿನಲ್ಲಿ ಇದು ಎರಡನೇ ಅಪಘಾತ
ಕೊಪ್ಪಳ,: ತಾಲೂಕಿನ ಹುಲಿಗೆಮ್ಮ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಪಾದಯಾತ್ರೆ ಹೊರಟಿದ್ದವರ ಮೇಲೆ ಶುಕ್ರವಾರ ಬೆಳಗ್ಗೆ ಲಾರಿ ಹರಿದಿದೆ. ಪಾದಯಾತ್ರೆಯ ಭಕ್ತರೊಬ್ಬರು ಮೃತಪಟ್ಟಿದ್ದು, ಮತ್ತೊಬ್ಬನಿಗೆ ಗಂಭೀರ ಗಾಯವಾಗಿದೆ. ಕೊಪ್ಪಳ ತಾಲೂಕಿನ ಕೆರಹಳ್ಳಿ ಪ್ರೈಓವರ್ ಬಳಿ ಘಟನೆ ನಡೆದಿದೆ.
ಇಂದು ಶುಕ್ರವಾರ ಸಂಜೆ ಹುಲಗಿಯ ಹುಲಿಗೆಮ್ಮ ದೇವಿ ರಥೋತ್ಸವ ಜರುಗಲಿದ್ದು, ಕೊಪ್ಪಳ ಜಿಲ್ಲಾ ಹಾಗೂ ಅಕ್ಕ ಪಕ್ಕದ ಜಿಲ್ಲೆಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಮೂಲಕ ಹುಲಗಿ ತಲುಪುತ್ತಿದ್ದಾರೆ. ಕೆರಹಳ್ಳಿ ಪ್ರೈಓವರ್ ಬಳಿ ಘಟನೆ ನಡೆದಿದ್ದು, ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮದ ನಿವಾಸಿ ಯಮನೂರಪ್ಪ ಸಣ್ಣಮನಿ (34) ಮೃತ ಮೃತಪಟ್ಟಿದ್ದಾನೆ. ಇನ್ನೊಬ್ಬ ಮಹಾಂತೇಶ ಎನ್ನುವವರನ್ನು ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಹುಲಿಗೆಮ್ಮ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಪಾದಯಾತ್ರೆ ಮೂಲಕ
ಭಕ್ತಾಧಿಗಳು ದೇವಸ್ಥಾನಕ್ಕೆ ಬರ್ತಿದ್ದರು. ಹಿಂದಿನಿಂದ ಬಂದ ಲಾರಿ ಭಕ್ತಾಧಿಗಳ ಮೇಲೆ ಹರಿದಿದೆ.
ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.