ಕೊಪ್ಪಳದಲ್ಲಿ ಬೆಲೆ ಏರಿಕೆ ವಿರುದ್ಧ ತೆಂಗಿನ ಚಿಪ್ಪು ಹಿಡಿದ ಬಿಜೆಪಿ ಮುಖಂಡರು
ಕಾಂಗ್ರೆಸ್ ಜನತೆಗೆ ಚಿಪ್ಪು ಕೊಟ್ಟಿದೆ ಎಂದು ಪ್ರತಿಭಟನೆ
ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಖಂಡಿಸಿ
ಬಿಜೆಪಿಯಿಂದ ಬೃಹತ್ ಪ್ರತಿಭಟನೆ
ಕೊಪ್ಪಳ,: ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡಿರುವುದನ್ನು ಖಂಡಿಸಿ ಕೊಪ್ಪಳದಲ್ಲಿ ಭಾರತೀಯ ಜನತಾ ಪಕ್ಷದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಮಂಗಳವಾರ ನಗರದ ಶ್ರೀಬಸವೇಶ್ವರ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಬಿಜೆಪಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕುಾಗಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ ಮಾತನಾಡಿ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಹೆಚ್ಚಿಸಿದ್ದು ಇದರಿಂದ ಮಧ್ಯಮ ವರ್ಗದ ಜನಗಳ ಮೇಲೆ ಬರೆ ಹಾಕಿದಂತಾಗಿದೆ ಇದರಿಂದಾಗಿ ಎಲ್ಲ ದಿನಸಿವಸ್ತುಗಳ ಸೇರಿದಂತೆ ಜನಜೀವನದ ಮೇಲೆ ದುಬಾರಿ ಹೊರೆ ಎಂದು ದುಾರಿದರು.
ರಾಜ್ಯ ಸರ್ಕಾರ ಈ ಜನ ವಿರೋಧಿ ನೀತಿಯನ್ನು ತಕ್ಷನ ಹಿಂದೆ ಪಡಿಯಬೇಕು, ಗ್ಯಾರಂಟಿ ಗುಂಗಿನಲ್ಲಿ ಇರುವ ಕಾಂಗ್ರೆಸ್ ಪಕ್ಷ ಜನರನ್ನು ಸಂಕಷ್ಟಕ್ಕೆ ಸಿಲಉಕಿಸುತ್ತಿದೆ, ಬೆಲೆ ಏರಿಕೆ ಇಳಿಸುವವ ವರೆಗೂ ಜನರ ಪರವಾಗಿ ಬಿಜೆಪಿ ಪಕ್ಷ ಉಗ್ರಹೋರಾಟ ಮಾಡಲಿದೆ ಎಂದರು.
ಪ್ರತಿಭಟನೆ ನೇತೃತ್ವವನ್ನು ಕುಷ್ಟಗಿಯ ಶಾಸಕರು ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಎಚ್. ಪಾಟೀಲ್, ಗಂಗಾವತಿ ಶಾಸಕ ಹಾಗೂ ಮಾಜಿ ಸಚಿವ ಜಿ ಜನಾರ್ಧನ ರೆಡ್ಡಿ, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ್ ದಡೆಸುಗೂರ, ಬಿಜೆಪಿ ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಗಣೇಶ್ ಹೊರತಟ್ನಾಳ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಕೆ ಬಸವರಾಜ್, ರಾಜ್ಯ ಕಾರ್ಯದರ್ಶಿ ಶರಣು ಬಿ. ತಳ್ಳಿಕೇರಿ, ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್ ಮೈನಹಳ್ಳಿ, , ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಮೌನೇಶ್ ದಡೆಸುಾಗುರು, ಕೊಪ್ಪಳ ಜಿಲ್ಲಾ ಮಾಧ್ಯಮ ಸಂಚಾಲಕ ಮಹೇಶ್ ಹಾದಿಮನಿ, ದೇವರಾಜ ಹಾಲಸಮುದ್ರ,
ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಇದ್ದರು.