ಕೊಪ್ಪಳಜಿಲ್ಲಾ ಸುದ್ದಿಗಳು

ವಿದೇಶಿಗರ ಅತ್ಯಾಚಾರ ಮತ್ತು ಹತ್ಯೆ ಮತ್ತೊಬ್ಬ ಆರೋಪಿಯ ಬಂಧನ

ವಿದೇಶಿಗರ ಅತ್ಯಾಚಾರ ಮತ್ತು ಅತ್ಯ ಪ್ರಕರಣ ಮತ್ತೊಬ್ಬ ಆರೋಪಿಯ ಬಂಧನ

ಕೊಪ್ಪಳ: ಹಂಪಿ ಸಮೀಪ ಇತ್ತೀಚೆಗೆ ನಡೆದಿದ್ದ ವಿದೇಶಿ ಮಹಿಳೆ ಸೇರಿದಂತೆ ಇಬ್ಬರ ಮೇಲಿನ ಅತ್ಯಾಚಾರ ಪ್ರಕ ರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭಾನುವಾರ ತಿಳಿಸಿದ್ದಾರೆ.

 

ಮಾರ್ಚ್ 6 ರಂದು ತುಂಗಭದ್ರ ಎಡದಂಡೆ ಕಾಲುವೆ ಬಳಿ ತಡರಾತ್ರಿ ಯವರೆಗೆ ಸಂಗೀತ ಕೇಳುತ್ತಾ ಕುಳಿತು ಕೊಂಡಿದ್ದ ಇಸ್ರೇಲಿ ಮಹಿಳೆ ಮತ್ತು ಹೋಮ್ ಸ್ಟೇ ಮಾಲಕಿ ಮೇಲೆ 3 ಜನರು ಹಲ್ಲೆ ನಡೆಸಿ ಇಬ್ಬರು ಮಹಿ ಳೆಯರ ಮೇಲೆ ಸಾಮೂಹಿಕ ಅತ್ಯಾ ಚಾರ ನಡೆಸಿದ್ದರು.

 

ಅಲ್ಲದೆ ಈ ವೇಳೆ ಸ್ಥಳದಲ್ಲಿದ್ದ ಇತರೆ ಮೂರು ಪುರುಷರ ಮೇಲೂ ಹಲ್ಲೆ ಮಾಡಿ ಕಾಲುವೆಗೆ ತಳ್ಳಿದ್ದರು. ಈ ಪೈಕಿ ನಾಪತ್ತೆಯಾಗಿದ್ದ ಯ ಶವ ಶನಿವಾರ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ಪತ್ತೆಯಾಗಿದೆ. ಮೃತನನ್ನು ಒರಿಸ್ಸಾ ಮೂಲದ ಬೀಬಾಷಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಶನಿವಾರ ಹೇಳಿದ್ದರು.

ಈ ಪೈಶಾಚಿಕ ಕೃತ್ಯದಲ್ಲಿ ಮೂವರು ವ್ಯಕ್ತಿಗಳು ಭಾಗಿಯಾಗಿದ್ದು, ಮಾರ್ಚ್ 8 ರಂದು ಇಬ್ಬರನ್ನು ಬಂ ಧಿಸಿದರೆ, ಮೂರನೇ ಆರೋಯನ್ನು ಭಾನುವಾರ ಬಂಧಿಸಲಾಗಿದೆ. ಭವಿಷ್ಯ ದಲ್ಲಿ ಇಂತಹ ಘಟನೆಗಳು ನಡೆಯ ದಂತೆ ಪ್ರವಾಸಿಗರಿಗೆ ಭದ್ರತೆ ಹೆಚ್ಚಿಸು ವಂತೆ ಪೊಲೀಸರಿಗೆ ಸೂಚನೆ ನೀಡಿ ರುವುದಾಗಿ ಶಿವರಾಜ ತಂಗಡಗಿ ತಿಳಿಸಿದರು. ಅಪರಾಧದ ನಂತರ ತಲೆಮರೆಸಿಕೊಂಡಿದ್ದ ಮೂರನೇ ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!