ಈ ಬಾರಿ ಎರಡು ವಾರಗಳ ಕಾಲ, ಅಂದರೆ ಮೇ 31, 2020ರ ತನಕ ಲಾಕ್ ಡೌನ್ ಇರಲಿದೆ. ಕೇಂದ್ರ ಸರ್ಕಾರವು ಮೇ 17ನೇ ತಾರೀಕಿನ ಭಾನುವಾರದಂದು ಮತ್ತೊಮ್ಮೆ ದೇಶದಾದ್ಯಂತ ಲಾಕ್ ಡೌನ್ ಅನ್ನು ಮುಂದುವರಿಸಿದೆ. ಕೊರೊನಾ ವ್ಯಾಪಿಸುವುದನ್ನು ತಡೆಯುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕೇಂದ್ರ ಗೃಹ ಸಚಿವಾಲಯವು ಶೀಘ್ರದಲ್ಲೇ ಹೊಸ ಮಾರ್ಗದರ್ಶಿ ಸೂತ್ರವನ್ನು ವಿತರಿಸುವ ಸಾಧ್ಯತೆ ಇದೆ. ಭಾರತದಲ್ಲಿ ಮಾರ್ಚ್ 24ನೇ ತಾರೀಕಿನಿಂದ ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಆಯಿತು. ಆ ನಂತರ ಎರಡು ಬಾರಿ ವಿಸ್ತರಣೆ ಆಯಿತು. ಇದೀಗ ಮೂರನೇ ಬಾರಿಗೆ ವಿಸ್ತರಣೆ ಆಗಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಭಾರತದಲ್ಲಿ ಸದ್ಯಕ್ಕೆ 91 ಸಾವಿರ ಕೊರೊನಾ ಸೋಂಕು ಪ್ರಕರಣಗಳು ಇವೆ. ಇನ್ನು ಕೊರೊನಾದಿಂದ ಮೃತಪಟ್ಟಿರುವವರ ಸಂಖ್ಯೆ 2800 ದಾಟಿದೆ. ಕಳೆದ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ್ದರು. ಲಾಕ್ ಡೌನ್ ವಿಚಾರವಾಗಿ ಮೇ 15ನೇ ತಾರೀಕಿನೊಳಗೆ ಸಲಹೆ ನೀಡುವಂತೆ ತಿಳಿಸಿದ್ದರು.
follow me