ಜಿಲ್ಲಾ ಸುದ್ದಿಗಳು

ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡ್ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ..

 

ಹೊಸಪೇಟೆ : ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡ್ ವತಿಯಿಂದ ವಿಜಯನಗರ (ಹೊಸಪೇಟೆಯ) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ. ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿ ಅವರಿಗೆ ವಕ್ಫ್ ಕಾಯಿದೆ 1995 ರ ಇತ್ತಿಚೆಗೆ ಅಂಗಿಕರಿಸಲಾದ ತಿದ್ದುಪಡಿಗಳನ್ನು ಹಿಂಪಡೆಯಲು ಮನವಿ ಸಲ್ಲಿಸಿದ ನಂತರ ಮೊಹಮ್ಮದ್ ಅಜೀಜ್ ಮುಲ್ಲಾ, ಜಮಾಅತ್ ಇಸ್ಲಾಮಿ ಹಿಂದ್ ಅಧ್ಯಕ್ಷ ಮಾತನಾಡಿ, ಇತ್ತೀಚೆಗೆ 1995ರ ಕಾಯ್ದೆಗೆ ಅಂಗೀಕರಿಸಲಾದ ತಿದ್ದುಪಡಿಗಳು ತಾರತಮ್ಯದಿಂದ ಕೂಡಿದ್ದು ಭಾರತದ ಸಂವಿಧಾನದಲ್ಲಿ ಖಾತರಿ ಪಡಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಈ ತಿದ್ದುಪಡಿಗಳು ಸಂವಿಧಾನದ 14, 25 ,26 ,ಮತ್ತು 29ನೆಯ ವಿಧಿಯಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ. ಆದ್ದರಿಂದ ಹೊಸಪೇಟೆಯ ನಾವೆಲ್ಲಾ ಸೇರಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕರಿಸಿದ ಈ ಎಲ್ಲಾ ವಿವಾದಾತ್ಮಕ ತಿದ್ದುಪಡಿಗಳನ್ನು ರದ್ದುಗೊಳಿಸುವಂತೆ ಗೌರವದೊಂದಿಗೆ ರಾಷ್ಟ್ರಪತಿಯವರಲ್ಲಿ ವಿನಂತಿಸುತ್ತಾ ಜಿಲ್ಲಾಧಿಕಾರಿಗಳ ಮುಕಾಂತರ ರಾಷ್ಟ್ರಪತಿಗಳಿಗೆ ವಿನಂತಿ ಪೂರ್ವಕ ಮನವಿ ಸಲ್ಲಿಸಿದ್ದೇವೇ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಎಚ್ಎನ್‌ಎಫ್ ಇಮಾಮ್ ನೀಯಾಜಿ ಅಧ್ಯಕ್ಷರು ಹೊಸಪೇಟೆ ಅಂಜುಮನ್ ಕಮಿಟಿ, ಸೈಯದ್ ನಾಜಿಮುದ್ದೀನ್ ಅಧ್ಯಕ್ಷರು ಜಮಿಯತೆ ಉಲೇಮಾ ಎ ಹಿಂದ ವಿಜಯನಗರ ಜಿಲ್ಲೆ, ಕಲೀಮುಲ್ಲಾ ಖಾನ್ ಮಂಸೂರಿ ಜಮಾಅತ್ ಇಸ್ಲಾಮಿ ಹಿಂದ್ ವಿಜಯನಗರ ಜಿಲ್ಲೆಯ ಪದಾಧಿಕಾರಿಗಳು, ಹಾಗೂ ಇನ್ನು ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!