ಕೊಪ್ಪಳಜಿಲ್ಲಾ ಸುದ್ದಿಗಳುರಾಜಕೀಯ

ಕೊಪ್ಪಳ ಡಾಕ್ಟರ್ ಸೋಲು; ರೆಡ್ಡಿ ವರ್ಚಸ್ಸು, ಬಿಜೆಪಿ ನಾಯಕರ ಹೊಟ್ಟೆಕಿಚ್ಚು, ಪ್ರಾಮಾಣಿಕರ ಕಡೆಗಣನೆ

ಕೆಲಸಕ್ಕೆ ಬಾರದವರು ಲೀಡರ್ ಪ್ರಾಮಾಣಿಕರು ಮೂಲೆಗುಂಪು

ಕೊಪ್ಪಳದ ಡಾಕ್ಟರ್ ಸೋಲು: ಎಡವಿದ್ದೆಲ್ಲಿ? ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದಲೇ..ಚೂರಿ

ಕೊಪ್ಪಳ 2024ರ ಲೋಕಸಭಾ ಚುನಾವಣೆ ಬಿರುಸಿನಿಂದ ನಡೆಯಿತು.
ಬಿಜೆಪಿಯ ಭದ್ರಕೋಟೆಯಾಗಿದ್ದ ಕೊಪ್ಪಳ ಲೋಕಸಭೆ ಈ ಬಾರಿ ಹೀನಾಯವಾಗಿ ಕೈಕೊಟ್ಟಿತು ಬಿಜೆಪಿಗೆ, ಇನ್ನೇನು ಇದು ಕೊನೆಯ ಎಲೆಕ್ಷನ್ ಅಂತ ಹೇಳಿ ರಾಜಣ್ಣ ಇಟ್ನಾಳ್ ಅವರು ತುಂಬಾ ಹಚ್ಚಿಕೊಂಡು ಎಲೆಕ್ಷನ್ ಮಾಡಿದ ಪರಿಣಾಮ, ಮತ್ತು ಡಾಕ್ಟರ್ ನಡೆದುಕೊಂಡ ರೀತಿ ಹಾಗೂ ಕೆಲವು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಬೆನ್ನಿಗೆ ಚೂರಿ ಹಾಕುವ ಕೆಲಸ ರಾಜಶೇಖರ್ ಹಿಟ್ನಾಳ್ ಅವರನ್ನು ಗೆಲ್ಲಿಸುವಂತೆ ಮಾಡಿತು ಅನ್ನುವುದರಲ್ಲಿ ಎರಡು ಮಾತಿಲ್ಲ.

ಜನಾರ್ದನ ರೆಡ್ಡಿ ಅವರ ವರ್ಚಸ್ಸು ಕಡಿಮೆ ಮಾಡುವ ಉನ್ನಾರ; ಬಿಜೆಪಿ ಮುಖಂಡರಿಂದಲೇ ಕಾರ್ಯಕರ್ತರಿಗೆ ಸುಪಾರಿ:

ಜನಾರ್ದನ ರೆಡ್ಡಿ ಅವರು ಮರಳಿ ಬಿಜೆಪಿ ಸೇರ್ಪಡೆಯಾಗಿದ್ದು ಗಂಗಾವತಿ ಕ್ಷೇತ್ರದ ಬಿಜೆಪಿ ನಾಯಕರಲ್ಲಿ ಅಸಮಾಧಾನ ಉಂಟು ಮಾಡಿತ್ತು. ಯಾಕೆಂದರೆ ಜನಾರ್ಧನ ರೆಡ್ಡಿ ಅವರು ಕ್ಷೇತ್ರ ಬಿಟ್ಟು ಹೋಗುವುದಿಲ್ಲ ಅನ್ನುವುದು ಅರಿತಿರುವ ಮಾಜಿಗಳು ಮತ್ತು ಕೆಲವು ಬಿಜೆಪಿ ಮುಖಂಡರು ಹೇಗಾದರೂ ಮಾಡಿ ಜನಾರ್ಧನ ರೆಡ್ಡಿ ಅವರ ವರ್ಚಸ್ಸು, ಬಿಜೆಪಿ ರಾಜ್ಯಮಟ್ಟದಲ್ಲಿ ಕಡಿಮೆ ಮಾಡಬೇಕು ಒಂದು ವೇಳೆ ಗಂಗಾವತಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅತಿ ಹೆಚ್ಚು ಮತಗಳು ಬಂದರೆ ಅದು ಜನಾರ್ಧನ ರೆಡ್ಡಿ ಅವರ ಯಶಸ್ಸಿಗೆ ಕಾರಣ ಆಗುತ್ತೆ ಆದ್ದರಿಂದ ಕ್ಷೇತ್ರದಲ್ಲಿ ಯಾವುದೇ ರೀತಿಯಿಂದ ಕೂಡ ಬಿಜೆಪಿಗೆ ವೋಟ್ ಲೀಡ್ ಕೊಡಬಾರದು ಅನ್ನುವ ಉನ್ನಾರ ನಡೆಸಿದರು.
ಆ ನಿಟ್ಟಿನಲ್ಲಿ ಜನಾರ್ಧನ ರೆಡ್ಡಿ ಅವರ ಮೂಲ ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳನ್ನು ಅವಮಾನಿಸುವ ಮುಖಾಂತರ ಚುನಾವಣೆಯಿಂದ ದೂರ ಸರಿಯುವಂತೆ ಯಶಸ್ವಿ ಕೆಲಸ ಮಾಡಿದರು ವ್ಯಕ್ತಿ ಪ್ರೇರಿತ ಬಿಜೆಪಿ ಕಾರ್ಯಕರ್ತರು.
ಇದರ ಬಗ್ಗೆ ಹಲವಾರು ಬಾರಿ ಜನಾರ್ದನ ರೆಡ್ಡಿ ಅವರಿಗೆ ದೂರು ನೀಡಿದರು ಕೂಡ ಅವರು ಏನೇ ಆಗಲಿ ಚುನಾವಣೆ ಮಾಡಿ ಮುಂದೆ ನೋಡೋಣ ಅಂತ ಕಾರ್ಯಕರ್ತರಿಗೆ ಉರಿದುಂಬಿಸಿ ಚುನಾವಣೆ ಮಾಡಲು ಪ್ರೇರಣೆ ನೀಡುತ್ತಿದ್ದರೇ… ಇತ್ತ ಚುನಾವಣಾ ಕಣದಲ್ಲಿ ಜನಾರ್ಧನ ರೆಡ್ಡಿ ಅವರ ಕಾರ್ಯಕರ್ತರಿಗೆ ಮರ್ಯಾದೆ ಇಲ್ಲದಂತೆ ಅವಮಾನ ಮಾಡಿ ಬಿಜೆಪಿ ಕಾರ್ಯಕರ್ತರು ತಮಗೆ ಇಷ್ಟ ಬಂದಂತೆ ವರ್ತನೆ ಮಾಡಿದರು,

ಕೆಲಸಕ್ಕೆ ಬಾರದ ಮತ್ತು ಬೂತ್ ಗಳಲ್ಲಿ ಹತ್ತು ವೋಟು ಹಾಕಿಸಲು ತಾಕತ್ತಿಲ್ಲದವರು ಚುನಾವಣೆ ಮಾಡಿದರು

ಮೂಲ ಬಿಜೆಪಿ ಮುಖಂಡರ ದುಂಡಾವರ್ತನೆಯಿಂದ ಬೇಸತ್ತ ಕೆಲವು ಕೆ ಆರ್ ಪಿ ಪಿ ಮೂಲದ ಕಾರ್ಯಕರ್ತರು ಚುನಾವಣೆ ಮಾಡದೆ ತಟಸ್ಥವಾದರು,

ಬೂತ್ ನಲ್ಲಿ 10 ವೋಟು ಹಾಕಿಸಲು ತಾಕತ್ತು ಇಲ್ಲದಂತಹ ವ್ಯಕ್ತಿಗಳಿಗೆ ಬೂತ್ಗಳ ಜವಾಬ್ದಾರಿ ನೀಡಲಾಯಿತು. ಇದರಿಂದ ಕಾಂಗ್ರೆಸ್ ಗೆ ಅನುಕೂಲವಾದಂತಾಯ್ತು.
ಜನರಿಗೆ ಮುಟ್ಟಿಸಬೇಕಾಗಿದ್ದ ಸಂಪನ್ಮೂಲಗಳನ್ನು ಸ್ವತಹ ಕಾರ್ಯಕರ್ತರೇ ಹಂಚಿಕೊಂಡು ಗೆದ್ದರೆ ಗೆಲ್ಲಲಿ ಸೋತರೆ ಸೋಲಲಿ ಅನ್ನುತ್ತ ಮನೆಗೆ ನಡೆದರು ಚುನಾವಣೆ ಮಾಡಲು ಯಾರು ಇಲ್ಲದೆ ಗಂಗಾವತಿ ಭಾಗದಲ್ಲಿ ಬಿಜೆಪಿ ಮುಖಾಡೆ ಮಲಗಿತು

ತಮ್ಮನ್ನು ತಾವು ಪರಿಚಯಿಸಿಕೊಳ್ಳುವುದರಲ್ಲಿ ಎಡವಿದ ಡಾ. ಬಸವರಾಜ್
ಸ್ಥಳಿಯ ಮಾಧ್ಯಮಗಳನ್ನು ಬಳಸಿಕೊಳ್ಳುವುದರಲ್ಲಿ ವಿಫಲ:

ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಬಸವರಾಜ್ ಕ್ಯಾವಟರ್ ಅವರು ಕ್ಷೇತ್ರದಲ್ಲಿ ಯಾರಿಗೂ ಪರಿಚಯ ಇಲ್ಲದಂತಹ ವ್ಯಕ್ತಿ ಅಂತಲೇ ಹೇಳಬಹುದು.

ಆದರೂ ಕೂಡ ಕೊಪ್ಪಳ ಚುನಾವಣೆಯನ್ನು ಬಸವರಾಜ್ ಕ್ಯಾವಟರ್ ಅವರು ಗೆಲ್ಲಬಹುದಾಗಿತ್ತು,

ಆದರೆ ಪ್ರಾಥಮಿಕ ಹಂತವಾಗಿ ತಮ್ಮನ್ನು ತಾವು ಹೇಗೆ ಪರಿಚಯಿಸಿಕೊಳ್ಳಬೇಕು? ಜನರಲ್ಲಿ ಹೇಗೆ ತಮ್ಮನ್ನು ಅರ್ಪಿಸಿಕೊಳ್ಳಬೇಕು? ಅನ್ನುವ ರಣತಂತ್ರವನ್ನು ಡಾಕ್ಟರ್ ಬಸವರಾಜ ಅವರು ರೂಪಿಸಲೇ ಇಲ್ಲ, ಸ್ಥಳೀಯ ಮಾಧ್ಯಮಗಳನ್ನು ಯಶಸ್ವಿಯಾಗಿ ತಮ್ಮನ್ನು ಪರಿಚಯಿಸಿಕೊಳ್ಳಲು ಬಳಕೆ ಮಾಡಿಕೊಳ್ಳಬೇಕಾಗಿತ್ತು.

ಆದರೆ ಡಾಕ್ಟರ್ ಅವರು ಕೇವಲ ರಾಜ್ಯ ಮಾಧ್ಯಮಗಳ ಮೊರೆ ಹೋದರು ಇದರಿಂದ ಸ್ಥಳೀಯ ಮಾಧ್ಯಮಗಳಲ್ಲಿ ಸಾಕಷ್ಟು ವೈರುಧ್ಯಗಳು ಉಂಟಾಗಿ ಬಸವರಾಜ್ ಅವರ ವಿರುದ್ಧ ಸುದ್ದಿ ಪ್ರಸಾರಗಳು ಆಗತೊಡಗಿದವು, ಪರಿಣಾಮವಾಗಿ ಮತದಾರರಲ್ಲಿ ಬಸವರಾಜ್ ಕ್ಯಾವೆಟರ್ ಅವರ ವಿಷಯವಾಗಿ ಗೊಂದಲದ ನಿಲುವುಗಳು ಮೂಡತೊಡಗಿದವು. ಇದು ಗೊತ್ತಿದ್ದು ಕೂಡ ಅಭ್ಯರ್ಥಿ ಯಾವುದೇ ರಣತಂತ್ರ ರೂಪಿಸದೆ ಚುನಾವಣ ಚಾಣಾಕ್ಷತೆ ಹರಿಯದೆ ತಟಸ್ಥವಾಗಿ ಬಿಟ್ಟರು.
ಮೊದಲ ದಿನದಿಂದಲೇ ಸ್ಥಳೀಯ ಮಾಧ್ಯಮಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮನ್ನು ಪರಿಚಯಿಸಿಕೊಳ್ಳುವ ಮುಖಾಂತರ ಹೆಜ್ಜೆ ಇಡಬೇಕಾಗಿದ್ದ ಬಿಜೆಪಿ ಅಭ್ಯರ್ಥಿ ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡಿದ ಕೆಲವು ಪ್ರಮುಖ ಸ್ಥಳೀಯ ಮಾಧ್ಯಮಗಳ ವಿರುದ್ಧವೇ ಪ್ರಕರಣ ದಾಖಲಿಸಲು ಹೊಂಚು ಹಾಕಿದರು, ಈ ರೀತಿ ವರ್ತನೆಯಿಂದ ಹೊರಗಡೆ ಬಂದು ಸ್ಥಳೀಯ ಮಾಧ್ಯಮಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಬಸವರಾಜ್ ಕ್ಯಾವೆಟರ್ ಗೆಲುವು ಸುಲಭವಾಗುತಿತ್ತು.

ಜಿಪುಣತನ ಪ್ರಮುಖ ಪದಾಧಿಕಾರಿಗಳ ಕಡೆಗಣನೆ ಉದ್ಧಟತನ ಸೋಲಿನ ಪ್ರಮುಖ ಕಾರಣಗಳಾದವು: ಬಸವರಾಜ ಕ್ಯಾವೆಟರ್ ಅವರು ಚುನಾವಣೆ ಅಂದರೆ ಕೈಮುಗಿಯುವುದು ಅಂತ ಮಾತ್ರ ತಿಳಿದುಕೊಂಡಿದ್ದರು ಆದರೆ ಇಲ್ಲಿ ನೀರಿನಂತೆ ದುಡ್ಡು ಖರ್ಚು ಆಗುತ್ತೆ ಅನ್ನುವದರ ಬಗ್ಗೆ ಅವರಿಗೆ ಗೊತ್ತಿರಲಿಲ್ಲ ಅನ್ನಿಸುತ್ತೆ, ಆ ರೀತಿ ಆಗುತ್ತಿರುವುದನ್ನು ನೋಡಿ ಅವರಲ್ಲಿದ್ದ ಜಿಪುಣತನ ಎಚ್ಚರವಾಗಿ ಪ್ರಮುಖ ಕಾರ್ಯಕರ್ತರಿಗೆ ಕ್ಷೇತ್ರದಲ್ಲಿ ಸಂಚಾರ ಮಾಡಲು ಪ್ರಚಾರ ಮಾಡಲು ದುಡ್ಡು ಕೊಡದಂತಾದರು, ಕೊಪ್ಪಳ ಭಾಗದ ಕಾರ್ಯಕರ್ತರು ಪ್ರಾಮಾಣಿಕವಾಗಿ ದುಡ್ಡು ಕೊಡದಿದ್ದರೂ ಸಾಕಷ್ಟು ಪಕ್ಷದ ಪರವಾಗಿ ಕೆಲಸ ಮಾಡಿದರು ಇದರಿಂದ ಕೊಪ್ಪಳವನ್ನೇ ಹಿಡಿತದಲ್ಲಿ ಇಟ್ಟುಕೊಂಡಿರುವ ಕಾಂಗ್ರೆಸ್ ಕೇವಲ ಐದು ಸಾವಿರ ಲೀಡ್ ಪಡೆಯುವಂತಾಯಿತು.

ಇಂತಹ ಕಾರ್ಯಕರ್ತರಿಗೆ ಪ್ರೇರೇಪಣೆ ನೀಡದೆ ತಮ್ಮ ಜಿಪುಣತನವನ್ನು ಪ್ರದರ್ಶನ ಮಾಡುತ್ತಾ ಯಾವುದೇ ಸಮಾರಂಭಗಳಿಗೆ ಕಾರ್ಯಕರ್ತರೇ ಖರ್ಚು ಮಾಡುವಂತ ಪ್ರಸಂಗಗಳು ಉಂಟಾದವು ಇದರಿಂದ ಕೊಪ್ಪಳ ಭಾಗದ ಕಾರ್ಯಕರ್ತರು ಎದೆಗುಂದದೆ ಬಿಜೆಪಿ ಪರವಾಗಿ ಕೆಲಸ ಮಾಡಿದರು ಒಂದುವೇಳೆ ಅಭ್ಯರ್ಥಿ ದುಡ್ಡು ಖರ್ಚಾಗುತ್ತೆ ಅಂತ ಕಾರ್ಯಕರ್ತರನ್ನು ಕಡೆಗಣನೆ ಮಾಡುವುದನ್ನು ಬಿಟ್ಟು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಮತ್ತು ಮೋದಿ ಅವರ ಅಲೆಯಲ್ಲಿ ಗೆಲ್ಲುತ್ತೇನೆ ಎಂಬ ಉದ್ದಟತನವನ್ನು ಬಿಟ್ಟಿದ್ದರೆ, ಕೊಪ್ಪಳದಲ್ಲಿ ಕಮಲ ಸುಲಭವಾಗಿ ಅರಳುತ್ತಿತ್ತು.

Related Articles

Leave a Reply

Your email address will not be published. Required fields are marked *

Back to top button