ಕೊಪ್ಪಳ ಗೌರಿ ಅಂಗಳದಲ್ಲಿ ಕುಡಿಯಲು ನೀರಿಲ್ಲ ಓಡಾಡಲು ದಾರಿ ಇಲ್ಲ
ನಗರ ಸಭೆ ವಿರುದ್ಧ ಜನರ ಆಕ್ರೋಶ
ರಾಘವೇಂದ್ರ ಅರಕೇರಿ:
ಕೊಪ್ಪಳ : ನಗರದ ಗೌರಿ ಅಂಗಳದಲ್ಲಿನ ಇದ್ದು ಇಲ್ಲದಂತಾದ ನಗರಸಭೆ ಸದಸ್ಯ ಎಂಬ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು ಆಕ್ರೋಶ ವ್ಯಕ್ತವಾಗಿದೆ.
ಸ್ಥಳೀಯ ಕುಡಿಯುವ ನೀರಿನ ವ್ಯವಸ್ಥೆ ತುಂಬಾ ಹದಗೆಟ್ಟಿದೆ. ಐದು ಆರು ದಿನಕ್ಕೆ ಒಂದು ಬಾರಿ ನೀರು ಸರಬರಾಜು ಆಗುತ್ತಿದೆ. ಸುಣಗಾರ ಬಾವಿಯಿಂದ ವಿನಾಯಕ ಶಾಲೆ ರಸ್ತೆವರೆಗೂ ಕಾಮಗಾರಿ ನಡೆದಿದ್ದು ಅಲ್ಲದೇ ಇಲ್ಲಿನ ರಸ್ತೆ ಕಾಮಗಾರಿ ಶುರುವಾಗಿರುವುದರಿಂದ ಕೆಲವು ಪೈಪುಗಳು ಹೊಡೆದು ಜನಗಳಿಗೆ ಇಂದು ನೀರು ಸಿಗದಿರುವುದು ಸಂಕಷ್ಟಕ್ಕಿಡು ಮಾಡಿದೆ.
ಇಂತಹ ಹತ್ತು ಹಲವಾರು ಸಮಸ್ಯೆಗಳನ್ನು ಹಂಚಿಕೊಳ್ಳಬೇಕೆಂದರೆ ನಗರ ಸಭೆ ಸದಸ್ಯರ ಸುಳಿವಿಲ್ಲದೇ ಸಮಸ್ಯೆ ಯಾರ ಬಳಿ ತೊಡಿಕೊಳ್ಳಬೇಕೆಂದು ಸ್ಥಳೀಯ ನಿವಾಸಿಗಳಿಗೆ ಬೇಸರದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಆಗೊಮ್ಮೆ ಈಗೊಮ್ಮೆ ನಗರಸಭೆ ಸದಸ್ಯರ ಮಗನ ಆಗಮನ ನೆಪತ್ಯಕ್ಕೆ ಎಂಬಂತಾಗಿದೆ. ನಗರಸಭೆ ಸದಸ್ಯರಾಗಿ ಸರಿ ಸುಮಾರು ಎರಡರಿಂದ ಮೂರು ವರ್ಷ ಕಳೆದರೂ ಸಹ ಇದುವರೆಗೂ ಸಾರ್ವಜನಿಕರ ಕುಂದು ಕೊರತೆ ಕೇಳದಿರುವುದು ವಿಪರ್ಯಾಸ. ವಾರ್ಡಿನ ಸಂಬಂಧಪಟ್ಟ ಯಾವುದೇ ಕಾಮಗಾರಿ ಶುರುವಾದರೂ ಸಹ ಅಲ್ಲಿ ನಗರಸಭೆ ಸದಸ್ಯರ ಮುಂದಾಳತ್ವದಲ್ಲಿ ಕಾಮಗಾರಿ ನಡೆಯಬೇಕಿದ್ದು, ಕಾಮಗಾರಿ ಸಮಯದಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಬೇಕಾದ ಸ್ಥಳೀಯ ಜನಪ್ರತಿನಿಧಿ ಇಲ್ಲದೇ ಕಾಮಗಾರಿಗಳು ನಡೆಸಲಾಗುತ್ತಿದೆ.
ಇಲ್ಲಿಯವರೆಗೂ ನಗರಸಭೆ ಸದಸ್ಯರ ನಿರ್ಲಕ್ಷ್ಯ ಧೋರಣೆ ಅಲ್ಲದೇ ಆಗೊಮ್ಮೆ ಈಗೊಮ್ಮೆ ಸದಸ್ಯ ಮಗನ ಆಗಮನ ಸಾರ್ವಜನಿರಲ್ಲಿ ಇರುಸು ಮುರುಸು ತಂದಿದೆ. ಸದಸ್ಯ ತಾಯಿಯೋ ಅಥವಾ ಮಗನೋ ಎಂಬ ಸಂಶಯ ವ್ಯಕ್ತವಾಗಿದೆ. ಇದರಿಂದ ಸ್ಥಳೀಯ ನಗರಸಭೆ ಸದಸ್ಯರು ಇದ್ದು ಇಲ್ಲದಂತಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.