ತಿಪ್ಪೇನಳ್ಳಿಯಲ್ಲಿ ಕಾಲಭೈರವೇಶ್ವರ ಸ್ವಾಮಿ 9ನೇ ವರ್ಷದ ವಾರ್ಷಿಕೋತ್ಸವ ಆಚರಣೆ
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ
ಸ್ವಾಭಿಮಾನದಿಂದ ಎಲ್ಲರೂ ಜೀವನ ಸಾಗಿಸುವಂಥ ಅವಕಾಶ ಕಲ್ಪಿಸಿ ಕೊಡುವ ರೀತಿಯಲ್ಲಿ ನಾವು ಸಮಾಜವನ್ನು ನಿರ್ಮಾಣ ಮಾಡಬೇಕಾಗಿದೆ ಇದರ ಜೊತೆಗೆ ನಾವು ನಮ್ಮ ಪರಂಪರೆ ಗೌರವವನ್ನು ಉಳಿಸಿಕೊಂಡು ಇತರ ಸಮಾಜಗಳಿಗೂ ಧ್ವನಿ ಆಗುವ ರೀತಿಯಲ್ಲಿ ಎಲ್ಲರೂ ಮುನ್ನಡೆಯಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದ ಸ್ವಾಮೀಜಿ ಹೇಳಿದರು
ಅವರು ತಿಪ್ಪೇನಳ್ಳಿಯ ಬಿ ಜಿ ಎಸ್ ಸರ್ಕಲ್ ನ ಕಾಲಭೈರವೇಶ್ವರ ದೇವಾಲಯ ಅಭಿವೃದ್ಧಿ ಟ್ರಸ್ಟ್ ವತಿಯಿಂದ ನಡೆದ ಕಾಲಭೈರವೇಶ್ವರ ಸ್ವಾಮಿ ಮಹಾಗಣಪತಿ ಸುಬ್ರಹ್ಮಣ್ಯ ಸ್ವಾಮಿ ನವಗ್ರಹ ದೇವತೆಗಳ 9ನೇ ವರ್ಷದ ವಾರ್ಷಿಕೋತ್ಸವ ಮತ್ತು ಹೋಮ ಹವನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು
ಈ ಸಮಾರಂಭವನ್ನು ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಾಗಲಗುಂಟೆಯ ಬಿ ಕೃಷ್ಣಮೂರ್ತಿ ರವರ ಕುಟುಂಬ ವರ್ಗದವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಯಶವಂತಪುರ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಎಸ್ ಟಿ ಸೋಮಶೇಖರ್, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ ಮುನಿರಾಜು, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಅಂಧಾನಪ್ಪ ,ಉದ್ಯಮಿ ಹಾಗೂ ಬಾಗಲಗುಂಟೆಯ ಬಿಜೆಪಿ ಮುಖಂಡ ಲಕ್ಷ್ಮಣ್ ಗೌಡ, ನಿಸರ್ಗ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಕೆಂಪು ರಾಜು, ಚೊಕ್ಕಸಂದ್ರ ವಾರ್ಡಿನ ಬಿಜೆಪಿ ಅಧ್ಯಕ್ಷ ಲಾರಿ ಮುನಿರಾಜು ಗೌಡ, ಮುಖಂಡರಾದ ಗ್ಯಾಸ್ ಶಂಕರ್, ಇನ್ನು ಹಲವಾರು ಮುಖಂಡರು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ಕಾಲಭೈರವೇಶ್ವರ ಸ್ವಾಮಿ ಕೃಪೆಗೆ ಪಾತ್ರರಾದರು
ಈ ವೇಳೆ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೂ ಪ್ರಸಾದ ವಿನಿಯೋಗ ಮಾಡಲಾಯಿತು.