ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು : ಜಿಎಸ್ ಗೋನಾಳ್
ಕೊಪ್ಪಳ,: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಸದೃಢ, ಸಶಕ್ತ, ಸಮೃದ್ಧ ಭಾರತಕ್ಕಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನಮ್ಮೆಲ್ಲರ ಮಹತ್ತರವಾದ ಜವಾಬ್ದಾರಿವಿದೆ ಎಂದು ಹಿರಿಯ ಪತ್ರಕರ್ತರು ಹಾಗೂ ಸಿರಿಗ್ನನಡ ವೇದಿಕೆಯ ರಾಜ್ಯಾಧ್ಯಕ್ಷರಾದ ಜಿಎಸ್ ಗೋನಾಳ್
ಹೇಳಿದರು. ಗುರುವಾರ ನಗರದ ಬಹಾರಪೇಟಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಕಿರಿಯ ಉರ್ದು ಶಾಲೆಯಲ್ಲಿ ಭಾರತದ ಪ್ರಥಮ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ರವರ ಜಯಂತಿಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉರ್ದು ಸಿಆರ್ ಪಿ ಮೈನುದ್ದೀನ್ ಮಾತನಾಡಿ, ಇಂದು ಶಿಕ್ಷಕರ ಕರ್ತವ್ಯಗಳು ಬಹುಮುಖವಾಗಿ ಹರಡಿಕೊಂಡಿವೆ. ಮಕ್ಕಳಲ್ಲಿ ಶಿಸ್ತು ಶಾಂತಿ ಸಹನೆ ಪರೋಪಕಾರ ಮೊದಲಾದ ಗುಣಗಳನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದದ್ದು ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಶಿವಕುಮಾರ್ ಹಿರೇಮಠ, ಚಿನ್ನಪ್ಪ ಗುಳಗುಳಿ, ಮಾಜಿ ವಕ್ಫ್ ಬೋರ್ಡ್ ಉಪಾಧ್ಯಕ್ಷರಾದ ಯೂಸುಫ್ ಖಾನ್, ಶಾಲೆಯ ಮುಖ್ಯ ಶಿಕ್ಷಕರಾದ ರೇಣುಕಾ ಸುರ್ವೆ, ತಬಸುಮ್ ಬಾನು, ಸಹ ಶಿಕ್ಷಕರಾದ ಉಷಾ ಚಿಮ್ಮಲಗಿ, ಅನುರಾಧ ಕುಲಕರಣಿ, ಗಂಗಮ್ಮ, ಶಶಿಕಲಾ ಗುಡದಣ್ಣವರ್, ಅತಿಥಿ ಶಿಕ್ಷಕಿಯರಾದ ಹನುಮಂತಮ್ಮ ಇದ್ದರು. ಇದೇ ವೇಳೆ ಶಿಕ್ಷಕರಾದ ಶ್ರೀನಿವಾಸ್ ಚಿತ್ರಗಾರ ರವರು ಮಕ್ಕಳಿಗೆ ಪೆನ್ನುಗಳನ್ನು ನೀಡಿದರು.
ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಅಂಕಲಿಪಿಗಳನ್ನು ಸಹ ಬಹುಮಾನವಾಗಿ ನೀಡಲಾಯಿತು
ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕಿ ತಬಸುಮ್ ಭಾನು ಸ್ವಾಗತಿಸಿ, ಶಿಕ್ಷಕರಾದ ಶ್ರೀನಿವಾಸ್ ಚಿತ್ರಗಾರ ನಿರೂಪಿಸಿ,
ಶಿಕ್ಷಕಿ ಉಷಾ ಚಿಮ್ಮಲಗಿ ವಂದಿಸಿದರು.