ಕೊಪ್ಪಳಜಿಲ್ಲಾ ಸುದ್ದಿಗಳು
ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಮಾಜದ ಅರಿವು ಅಗತ್ಯ -ಪ್ರಿಯದರ್ಶಿನಿ ಮುಂಡರಗಿಮಠ
ಕೊಪ್ಪಳ: ನಗರದ ಮನಸ್ ಪ್ರೀ ಸ್ಕೂಲ್ ಮತ್ತು ಡೇ ಕೇರ್ ಶಾಲೆಯಲ್ಲಿ ಹೈಬ್ರೀಡ್ ನ್ಯೂಸ್ ಹಾಗೂ ಮಹಿಳಾ ಧ್ವನಿ ಸಂಸ್ಥೆಯಿಂದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಹಮ್ಕಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಜವಾಹರಲಾಲ್ ನೆಹರು ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಕ್ಕಳಿಂದ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.
ಮಹಿಳಾ ಧ್ವನಿ ಸಂಸ್ಥೆಯ ಸಂಸ್ಥಾಪಕಿ ಪ್ರಿಯದರ್ಶಿನಿ ಮುಂಡರಗಿಮಠ ಮಾತನಾಡಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಮಾಜದ ಅರಿವು ಅಗತ್ಯ,ನಾಡಿನ ಸಾಧಕರ ಬಗ್ಗೆ ತಿಳಿದುಕೊಂಡು ಸನ್ಮಾರ್ಗದ ಬದುಕು ರೂಪಿಸಿಕೊಳ್ಳಬೇಕು.ಇಂದಿನ ಮಕ್ಕಳೆ ಭವಿಷ್ಯದ ನಾಯಕರು ಎಂದು ತಿಳಿಸಿದರು.
ಇದೇ ವೇಳೆ ಸಾಹಿತಿ-ಪತ್ರಕರ್ತ ಬಿ.ಎನ್.ಹೊರಪೇಟಿಯವರ ತಂದೆಯವರಾದ ದಿ.ನಿಂಗಪ್ಪ ಹೊರಪೇಟಿ ಅವರ ಸ್ಮರಣಾರ್ಥವಾಗಿ ಮಕ್ಕಳಿಗೆ ಪೆನ್ನು, ನೋಟಬುಕ್ ವಿತರಿಸಿ ಸಿಹಿ ಹಂಚಲಾಯಿತು.
ಕಾರ್ಯಕ್ರಮದಲ್ಲಿ ಬಿ.ಎನ್.ಹೊರಪೇಟಿ ಶಿಕ್ಷಕಿಯಾದ ಪ್ರತಿಮಾ ಯಲಿಗಾರ,ಈಶ್ವರಿ,ಶ್ರೀದೇವಿ ಹಾಗೂ ಮುದ್ದು ಮಕ್ಕಳು ಉಪಸ್ಥಿತಿ ಇದ್ದರು.