ಕಾರಟಗಿಜಿಲ್ಲಾ ಸುದ್ದಿಗಳು

ಕಾರಟಗಿ ಕನಕಗಿರಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಪತ್ರಕರ್ತರ ಹೆಸರಲ್ಲಿ ನಿತ್ಯವೂ ಕಿರುಕುಳ 

ಕನ್ನಡ ಸಂಘ ಹೆಸರಲ್ಲಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ* 

ಕನಕಗಿರಿ: ಕನಕಗಿರಿ ಐಸಿಡಿಎಸ್ ಯೋಜನೆಯಡಿಯಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ರಕ್ಷಣೆ ಕೋರಿ ಕನಕಗಿರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳವರ ಕಚೇರಿಯ ಮುಂದೆ ಅಂಗನವಾಡಿ ನೌಕರರ ಸಂಘದ ರಾಜ್ಯ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಅಂಗನವಾಡಿ ಕಾರ್ಯಕರ್ತೆಯರ ಮೇಲೆ ನಿತ್ಯವೂ ನಡೆಯುತ್ತಿರುವ ಕಿರುಕುಳ ಆಧಾರ ರಹಿತ ಆರೋಪಗಳಿಗೆ ಬೇಸತ್ತು ಕನಕಗಿರಿ ಮತ್ತು ಕಾರಟಗಿಯ ಸುಮಾರು ಎರಡು ನೂರಕ್ಕೂ ಅಧಿಕ ಅಂಗನವಾಡಿ ಕಾರ್ಯಕರ್ತರು ಜಮಾಯಿಸಿ ಭದ್ರತೆಗಾಗಿ ವಿವಿಧ ಹಕ್ಕೋತಾಯಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ಲಿಖಿತಪೂರ್ವಕವಾಗಿ ನೀಡಿದರು.

 

ಅಂಗನವಾಡಿ ನೌಕರರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಸಮಿತಿಯ ರಾಜ್ಯಧ್ಯಕ್ಷರಾದ ಎಸ್ ವರಲಕ್ಷ್ಮಿ ಇವರು ಮಾತನಾಡಿ. ಕನಕಗಿರಿ ಹಾಗೂ ಕಾರಟಗಿ ಜಂಟಿ ತಾಲೂಕಿನ ಐಸಿಡಿಎಸ್ ಯೋಜನೆ ಅಡಿಯಲ್ಲಿರುವ ಸುಮಾರು 371 ಅಂಗನವಾಡಿ ಕೇಂದ್ರಗಳಲ್ಲಿ, 740 ರಷ್ಟು ಮಹಿಳೆಯರು ಅಂಗನವಾಡಿ ಕಾರ್ಯಕರ್ತೆಯರಾಗಿ ಮತ್ತು ಸಹಾಯಕರಾಗಿ ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದಿರುವ ಅಂಗನವಾಡಿ ನೌಕರರು ಹಲವು ವರ್ಷಗಳಿಂದ ಯಾವುದೇ ರೀತಿಯ ಕಾನೂನಿನ ಸೌಲಭ್ಯಗಳು ಇಲ್ಲದೆ ಕೇವಲ ಅಲ್ಪ ಗೌರವ ಧನಕ್ಕೆ ದುಡಿಯುತ್ತಿದ್ದಾರೆ.

ಮಹಿಳಾ ಮತ್ತು ಮಕ್ಕಳ ಸಬಲೀಕರಣದಲ್ಲಿ ಅಂಗನವಾಡಿ ಕೇಂದ್ರಗಳ ಪಾತ್ರ ಬಹು ಮುಖ್ಯವಾಗಿದೆ. ಅಂಗನವಾಡಿ ಕೇಂದ್ರಗಳಿಗೆ ಕೆಲವು ಪತ್ರಕರ್ತರು ಮತ್ತು ಕನ್ನಡ ಸಂಘದವರು ಎಂದು ಹೇಳಿಕೊಂಡು ಕೆಲಸದ ವೇಳೆಯಲ್ಲಿ ಅಂಗನವಾಡಿ ಕೇಂದ್ರದಲ್ಲಿ ನಡೆಯುವ ಚಟುವಟಿಕೆಗಳನ್ನು ರೆಕಾರ್ಡ್ ಮಾಡಿ ಖಾಸಗಿ ವ್ಯಕ್ತಿಗಳಿಗೆ ವಿಡಿಯೋವನ್ನು ತೋರಿಸಿ ಅವರಿಂದ ಹೇಳಿಕೆಯನ್ನು ಪಡೆದುಕೊಂಡು. ಅಂಗನವಾಡಿ ಕಾರ್ಯಕರ್ತೆಯರನ್ನು ಹೆದರಿಸುವ ಕೆಲಸ ನಡೆಯುತ್ತಿದೆ ಹಣಕ್ಕಾಗಿ ಬೇಡಿಕೆ ಇಟ್ಟು ಕೊಡದಿದ್ದರೆ ವಿಡಿಯೋ ಹೊರಗಡೆ ಬಿಡುತ್ತೇವೆ ಎಂದು ಹೆದರಿಸಿ ನಿತ್ಯ ಕಿರುಕುಳ ನೀಡುತ್ತಿದ್ದಾರೆ. ಇಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂಗನವಾಡಿ ಕಾರ್ಯಕರ್ತೆಯರಿಗೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಕಲಾವತಿ, ಖಜಾಂಚಿ ಲಲಿತ, ಕಾರ್ಯದರ್ಶಿ ಗಿರಿಜಾ, ಹಾಗೂ ಅಂಗನವಾಡಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಅಮರಮ್ಮ, ಖಜಾಂಚಿ ಅನುಸೂಯ,ತಾಲೂಕ ಕಾರ್ಯದರ್ಶಿ ಲಕ್ಷ್ಮಿ ಸಜ್ಜನ್ ಸೇರಿದಂತೆ ಕಾರಟಗಿ ಕನಕಗಿರಿಯ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *

Back to top button