ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೀಲ್ ಚೇರ್ ವಿತರಣೆ..!

ಕೊಪ್ಪಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿ ಕೊಪ್ಪಳ ನಗರ ವಲಯದ ಸರ್ದಾರಗಲ್ಲಿ ಕಾರ್ಯಕ್ಷೇತ್ರದ ಹುಲಿಗೆಮ್ಮ ದೇವಿ ತಂಡದ ಸದಸ್ಯರಾದ ರಾಧಾಬಾಯಿ ಅವರಿಗೆ ಔಟ್ ಸೈಡ್ ವಿಲ್ ಚೇರ್ ವಿತರಣೆ ಮಾಡಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ನಗರಸಭೆ ಮಾಜಿ ಸದಸ್ಯರಾದ ಅಕ್ಟರ್ ಪಾಷಾ,ಮಾನ್ವಿ ಪಾಷಾ ಜಂಟಿಯಾಗಿ ಮಾತನಾಡಿ
ಶ್ರೀ ಕ್ಷೇತ್ರ ಧರಮಸ್ಥಳದ ಧರ್ಮಾಧಿಕಾರಿಗಳಾದ ಡಾ:ವಿರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಅನೇಕ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳನ್ನು ಕ್ಷೇತ್ರದಲ್ಲಿ ನಿರಂತರವಾಗಿ ನಡೆಸಲಾಗುತ್ತಿದೆ.
ಪ್ರತಿ ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಮಹಿಳೆಯರಿಗೆ ಊರಿನ ಗ್ರಾಮಸ್ಥರಿಗೆ ಜ್ಞಾನ ವಿಕಾಸದ ಅರಿವು ಮೂಡಿಸುವನಿಟ್ಟಿನಲ್ಲಿ ಬಿದಿನಾಟಕ, ಶೌಚಾಲಯದ ಬಳಕೆ, ನೀರಿನ ಸಂರಕ್ಷಣೆ, ಬಾಲ್ಯ ವಿವಾಹ ತಡೆಗಟ್ಟುವಿಕೆ, ಲಿಂಗ ತಾರತಮ್ಯ ಮಾಡುತಿರುವ ಬಗ್ಗೆ ತಾಯಿದಿರ ಪಾತ್ರದ ಕುರಿತು ನಾಟಕ ಪ್ರದರ್ಶನ ಮಾಡುವ ಮುಕಾಂತರ ಸರ್ವರಲ್ಲಿ ಅರಿವು ಮತ್ತು ಜಾಗ್ರತಿ ಕಾರ್ಯಕ್ರಮ ಇನ್ನು ಇಂತಹ ಅನೇಕ ಜನಪರ ಕಾರ್ಯಗಳು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ ಸಂಘದ ಪದಾಧಿಕಾರಿಗಳಿಗೆ ಸಲ್ಲುತ್ತದೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ವಲಯದ ಮೇಲ್ವಿಚಾರಕ ನಾಗರಾಜ ಮತ್ತು ಒಕ್ಕೂಟ ಪದಾಧಿಕಾರಿಗಳು ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.