Uncategorized

*ಕುಕನೂರು ಪಟ್ಟಣದ ಗವಿಶ್ರೀ ನಗರದ ಸಾಯಿಬಾಬಾ ಮಂದಿರ,,* *ಶ್ರೀ ಸಾಯಿ ಮಂದಿರದ 8ನೇ ವಾರ್ಷಿಕೋತ್ಸವ ಹಾಗೂ ಗುರು ಪೂರ್ಣಿಮಾ,,*

*ಕುಕನೂರು ಪಟ್ಟಣದ ಗವಿಶ್ರೀ ನಗರದ ಸಾಯಿಬಾಬಾ ಮಂದಿರ,,*

*ಶ್ರೀ ಸಾಯಿ ಮಂದಿರದ 8ನೇ ವಾರ್ಷಿಕೋತ್ಸವ ಹಾಗೂ ಗುರು ಪೂರ್ಣಿಮಾ,,*

ಕುಕನೂರು : ಪಟ್ಟಣದ ಗವಿಶ್ರೀ ನಗರದಲ್ಲಿರುವ ಸಾಯಿಬಾಬಾ ದೇವಸ್ಥಾನದಲ್ಲಿ ಜುಲೈ 29ರಂದು ಗುರು ಪೌರ್ಣಿಮಾ ಹಾಗೂ ಶ್ರೀ ಸಾಯಿ ಮಂದಿರದ 8ನೇ ವಾರ್ಷೀಕೋತ್ಸವ ಹಾಗೂ ವಿಷೇಶ ಪೂಜೆ ಮತ್ತು ಪ್ರಸಾದ ಸೇವೆಯನ್ನು ಆಯೋಜಿಸಲಾಗಿದೆ.

ಜುಲೈ 29ರ ಬುಧವಾರದಂದು
ಬೆಳಿಗ್ಗೆ 5.15ಕ್ಕೆ ಶ್ರೀ ಶಿರಿಡಿ ಸಾಯಿಬಾಬಾರವರಿಗೆ ಕಾಕಡಾರತಿ, 6 ಗಂಟೆಗೆ ಸುಪ್ರಭಾತ, 7 ಗಂಟೆಗೆ ಶ್ರೀ ಶಿರಿಡಿ ಸಾಯಿಬಾಬ ಅವರ ಮೂರ್ತಿಗೆ ಅಭಿಷೇಕ, 8 ಗಂಟೆಗೆ ಬಾಬಾ ಅವರ ವಿರಾಟಸಾಯಿ ಸ್ತೋತ್ರ ಪಠಣ ಮತ್ತು ದೈನಂದಿನ ಪ್ರಾರ್ಥನೆ, 10 ಗಂಟೆಗೆ ಭಕ್ತರಿಂದ ಗುರುಪೂರ್ಣಿಮೆಯ ವಿಶೇಷ, ಬಾಬಾ ಅವರ ಭಜನೆಯ ಹಾಡುಗಳು ಹಾಗೂ ಪೂಜ್ಯ ಗುರುದೇವರು ಶ್ರೀ ಅಮ್ಮುಲ ಸಾಂಬಶಿವರಾವ್ ರವರು ರಚಿಸಿದ ಅಮ್ಮುಲ ಶಿರಿಡಿ ಸಾಯಿ ತತ್ವಬೋಧಾಮೃತಂ ಪುಸ್ತಕಗಳಿಂದ ಸತ್ಸಂಗ ಪ್ರಸಂಗಗಳು ನಡೆಯುವುದು.

ಮಧ್ಯಾಹ್ನ 12 ಗಂಟೆಗೆ ಮಧ್ಯಾಹ್ನದ ಆರತಿ, 12.30ಕ್ಕೆ ಸಾಯಿ ಚರಿತೆ, ಮಧ್ಯಾಹ್ನ 1 ಗಂಟೆಯಿಂದ ಪ್ರಸಾದ ವಿತರಣೆ, ಸಂಜೆ 6.15ಕ್ಕೆ ಆರತಿ ಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳುವವು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ.
ವ್ಯವಸ್ಥಾಪಕರು : ಶ್ರೀ ಅಮ್ಮುಲ ಸಾಂಬಶಿವರಾವ್ ಗುರುಗಳು.
9060360391, 9481305151 ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

 

ವರದಿ ಚನ್ನಯ್ಯ ಹಿರೇಮಠ ಕುಕನೂರು

Related Articles

Leave a Reply

Your email address will not be published. Required fields are marked *

Back to top button
error: Content is protected !!