Uncategorized

*ಕೆಪಿಎಸ್ ಮಂಗಳೂರಿನಲ್ಲಿ ಮಾಜಿ ಯೋಧನಿಂದ 80ನೇ ತಿರಂಗಾ ಧ್ವಜಾರೋಹಣ*

  • *ಕೆಪಿಎಸ್ ಮಂಗಳೂರಿನಲ್ಲಿ ಮಾಜಿ ಯೋಧನಿಂದ 80ನೇ ತಿರಂಗಾ ಧ್ವಜಾರೋಹಣ*

    ಕುಕನೂರು: ತಾಲೂಕಿನ ಮಂಗಳೂರು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿನೂತನ ಹಾಗೂ ವಿಶಿಷ್ಟವಾಗಿ ಆಚರಿಸಲಾಯಿತು.

    ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಮಾಜಿ ಯೋಧ ಈರಪ್ಪ ಡಿ. ನೋಟಗಾರ ಅವರು ಧ್ವಜಾರೋಹಣ ನೆರವೇರಿಸಿದರು.
    ಧ್ವಜಾರೋಹಣ ಕಾರ್ಯಕ್ರಮಕ್ಕೂ ಮುನ್ನ ಎಸ್‌ಡಿಎಂಸಿ ಸಭೆಯಲ್ಲಿ ಠರಾವು ಅಂಗೀಕರಿಸಿ, ಕೆಪಿಎಸ್ ಆಡಳಿತ ಮಂಡಳಿಯ ಒಪ್ಪಿಗೆ ಪಡೆಯಲಾಗಿತ್ತು.

    ಶನಿವಾರ ಬೆಳಿಗ್ಗೆ 7.45ಕ್ಕೆ ಪ್ರೌಢಶಾಲಾ ವಿಭಾಗದ ಆವರಣದಲ್ಲಿ ಮಾಜಿ ಯೋಧರಿಂದ ತಿರಂಗಾ ಧ್ವಜಾರೋಹಣ ನೆರವೇರಿಸುವ ಮೂಲಕ ಶಾಲೆ ವಿಶೇಷ ಗೌರವಕ್ಕೆ ಪಾತ್ರವಾಯಿತು. ವಿದ್ಯಾರ್ಥಿಗಳು ಧ್ವಜಕ್ಕೆ ವಂದನೆ ಸಲ್ಲಿಸಿದರು.
    ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಈರಪ್ಪ ಡಿ. ನೋಟಗಾರ, “ತಿರಂಗಾ ಧ್ವಜ ಹಾರಿಸಲು ನನಗೆ ಹೆಮ್ಮೆ ಆಗುತ್ತಿದೆ. ನಾನು ಇದೇ ಶಾಲೆಯ ಹಳೆಯ ವಿದ್ಯಾರ್ಥಿ. ಈ ಅವಕಾಶ ನೀಡಿದ ಎಸ್‌ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಕೆಪಿಎಸ್ ಆಡಳಿತ ಮಂಡಳಿಗೆ ಚಿರಋಣಿ” ಎಂದರು.
    ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅಹಿಂಸಾ ಮಾರ್ಗದ ಮೂಲಕವೂ ಹಲವು ಚಳವಳಿಗಳು ನಡೆದವು. 1857ರಲ್ಲಿ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಅಲ್ಲಿಂದ 1947ರವರೆಗೆ ಅನೇಕ ಹೋರಾಟಗಳು ಹಾಗೂ ಕ್ರಾಂತಿಗಳು ನಡೆದ ಪರಿಣಾಮ, 1947ರ ಆಗಸ್ಟ್ 15ರಂದು ಬ್ರಿಟಿಷರಿಂದ ಭಾರತ ಸ್ವಾತಂತ್ರ್ಯ ಪಡೆಯಿತು ಎಂದು ಅವರು ತಿಳಿಸಿದರು.

    ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷ ಅನಿಲ್ ಕುಮಾರ್ ಕಲ್ಭಾವಿ, ಪ್ರಾಂಶುಪಾಲ ಗೋಪಾಲಯ್ಯ ಟಿ., ಉಪ ಪ್ರಾಂಶುಪಾಲ ಹನಮಂತಪ್ಪ ಆವಾರದಮನಿ, ಮುಖ್ಯೋಪಾಧ್ಯಾಯರಾದ ಶಕುಂತಲಾ ಪಾಟೀಲ್, ಎಸ್‌ಡಿಎಂಸಿ ಸದಸ್ಯರಾದ ಚಂದ್ರನಾಥ ಅಷ್ಟಗಿ, ಮೈಲಾರಪ್ಪ ಕಂದಗಲ್, ಸಿದ್ದಪ್ಪ ಬಳಿಗಾರ್, ಮಾಬುಸಾಬ ಗೋಡೆಕಾರ್, ಯಮನೂರಪ್ಪ ತಳವಾರ, ಮಾರುತಿ ಮದಕಟ್ಟಿ, ಫಕೀರಪ್ಪ ಮೂಲಿಮನಿ, ನಿಂಗನಗೌಡ ಪಾಟೀಲ್, ಪಾಲಾಕ್ಷಗೌಡ ಕೀರ್ತಗೌಡ್ರ, ನೀಲಮ್ಮ ನಿಂಗಾಪೂರ, ಅಂಬ್ರಮ್ಮ ವಿರೇಶ್ ಚಿನ್ನೂರ್, ಶ್ರೀದೇವಿ ನಿಂಗಾಪೂರ, ದೈಹಿಕ ಶಿಕ್ಷಕಿ ಲಕ್ಷ್ಮೀದೇವಿ, ಶಿಕ್ಷಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಗ್ರಾಮಸ್ಥರು, ಮುಖಂಡರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ವರದಿ: ಚನ್ನಯ್ಯ ಹಿರೇಮಠ. ಕುಕನೂರು.

Related Articles

Leave a Reply

Your email address will not be published. Required fields are marked *

Back to top button
error: Content is protected !!