
*ಕಾಮಗಾರಿ ಸ್ಥಳದಲ್ಲೇ ರಾಷ್ಟ್ರಧ್ವಜಾರೋಹಣ; ಕಾರ್ಮಿಕರು, ಗ್ರಾಮಸ್ಥರ ಸಂಭ್ರಮ*

ಯಲಬುರ್ಗಾ: ತಾಲೂಕಿನ ಸಂಕನೂರು ಗ್ರಾಮದಲ್ಲಿ VBGR AMG ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಸ್ಥಳದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಮಗಾರಿ ಸ್ಥಳದಲ್ಲಿಯೇ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲಾಯಿತು. ಬಳಿಕ ರಾಷ್ಟ್ರಗೀತೆ ಹಾಡಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ದೇಶಕ್ಕಾಗಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ ಕೂಲಿ ಕಾರ್ಮಿಕರು, ಸಿಬ್ಬಂದಿ ಹಾಗೂ ಗ್ರಾಮಸ್ಥರು ಉತ್ಸಾಹದಿಂದ ಕೇಕ್ ಕತ್ತರಿಸುವ ಮೂಲಕ ಸಿಹಿ ಹಂಚಿ ಎಲ್ಲರೂ ಪಾಲ್ಗೊಂಡಿದ್ದರು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಎಲ್ಲರೂ ದೇಶದ ಏಕತೆ, ಅಖಂಡತೆ ಹಾಗೂ ಪ್ರಗತಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುವ ಸಂಕಲ್ಪ ವ್ಯಕ್ತಪಡಿಸಿದರು.
ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿಯೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿರುವುದು ವಿಶೇಷವಾಗಿದ್ದು, ಕಾರ್ಮಿಕರಲ್ಲಿ ಹಾಗೂ ಗ್ರಾಮಸ್ಥರಲ್ಲಿ ದೇಶಭಕ್ತಿ ಮತ್ತು ರಾಷ್ಟ್ರಾಭಿಮಾನದ ಭಾವನೆ ಮೂಡಿಸಿತು.
ಈ ಸಂದರ್ಭದಲ್ಲಿ
ಗ್ರಾಮ ಪಂಚಾಯತಿ ಸಿಬ್ಬಂದಿ ಜೈ ಶ್ರೀ, ಸಮೀರ್ ಇಟಿಗಿ, ಖಾಜಸಾಬ ಕವಡಲಿ, ಖಾಜಸಾಬ ಅಮರಾವತಿ, ಮೊಹಮ್ಮದ್ ಹನೀಫ್ ಕವಡಲಿ, ಹುಸೇನ್ ಸಾಬ ಇಟಗಿ, ರಂಜಾನ್ ಸಾಬ್ ಅಮರಾವತಿ, ಶಾಬುದ್ದೀನ್ ಆದಾಪುರ್, ಹನುಮಂತಪ್ಪ ಗೋಡಿನಾಳ, ಕುಮಾರಯ್ಯ ಶಿಶುಮಠ, ಚನ್ನಬಸಯ್ಯ ವಸ್ತ್ರದ, ಇಮಾಮ್ ಸಾಬ್ ಆದಾಪುರ್, ಸುಭಾನ್ ಸಾಬ್ ಅಮರಾವತಿ, ಫಾತಿಮಾ ಖಾಜಾಸಾಬ್ ಅಮರಾವತಿ, ಖಾಜಾಬಿ ಕವಡೆಲಿ, ಪಕ್ಕವ್ವ ಮೂಗನೂರ್,ರೈಮನ್ ಸಾಬ್ ಮ್ಯಾಗೇರಿ, ಪೀರ್ ಸಾಬ್ ಮ್ಯಾಗೇರಿ, ಹಸನ್ ಸಾಬ್ ಮ್ಯಾಗೇರಿ, ನೀಲಪ್ಪ,ಹಸನ್ ಸಾಬ್ ಅಮರಾವತಿ
ಚನ್ನಯ್ಯ ಹಿರೇಮಠ. ಕುಕನೂರು.




