

ಕುಕನೂರು: ಭಾರತಿ ಜನತಾ ಪಕ್ಷದ ಕೂಪ್ಪಳ ಜಿಲ್ಲಾಧ್ಯಕ್ಷರಾದ ನವೀನಕುಮಾರ .ಈ. ಗುಳಗಣ್ಣವರ ಭಾರತಿ ಜನತ ಪಕ್ಷದ ಕಾರ್ಯಕರ್ತರಾದ ಮಧುಸುದನ್ ಬಾರಿಗಿಡದ ಅವರನ್ನು ಕೂಪ್ಪಳ ಜಿಲ್ಲಾ ಎಸ್.ಸಿ ಮೋರ್ಚಾ ಉಪಾಧ್ಯಕ್ಷರನ್ನಾಗಿ ೨೨.೦೭.೨೦೨೬ರಂದು ಬುಧವಾರ ಕೊಪ್ಪಳ ಜಿಲ್ಲಾ ಭಾರತಿಯ ಜನತಾ ಪಾರ್ಟಿ ಕಾರ್ಯಲಯದಲ್ಲಿ ನೇಮಕ ಆದೇಶ ಪ್ರತಿ ವಿತರಿಸಿ ಮಾತನಾಡಿದ ಅವರು.
ತಮಗೆ ನೀಡಿರುವ ಈ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ಪಕ್ಷದ ಸಂಘಟನೆಗೆ ಕ್ರಿಯಾಶೀಲ ಕೊಡುಗೆ ನೀಡುವಿರೆಂಬ ನಿರೀಕ್ಷೆಯೊಂದಿಗೆ ಶುಭ ಹಾರೈಸುತ್ತೇನೆ ಎಂದು ಅವರು ಹೇಳಿದರು.
ಮಧುಸುದನ್ ಬಾರಿಗಿಡದ ಮಾತನಾಡಿ, ನನ್ನಗೆ ಈ ಜವಾಬ್ದಾರಿ ನೀಡಿದ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ನವೀನಕುಮಾರ ಗುಳಗಣ್ಣವರಿಗೆ, ಜಿಲ್ಲಾ ಕೊರ ಕಮಿಟಿಗೆ ಹಾಗೂ ಗುರು ಹಿರಿಯಗೆ ಅಭಿನಂದನೆಗಳು ತಿಳಿಸು ತ್ತನೆ ಎಂದರು. ಈ ಸಂದರ್ಭದಲ್ಲಿ ವಿಧಾನ ಪರಿಷತ ನಾಯಕಿ ಹೇಮಲತ ನಾಯಕ , ಜಿಲ್ಲಾ ಎಸ್.ಸಿ ಮೋರ್ಚಾ ಅಧ್ಯಕ್ಷರಾದ ಗಣೇಶ ಹೊರತಟ್ನಾಳ,ಇದ್ದರು.
ವರದಿ ಚನ್ನಯ್ಯ ಹಿರೇಮಠ ಕುಕನೂರು



