ಉಚಿತ ಕೃತಕ ಅಂಗಾಂಗ ಜೋಡಣೆ ಮಾಡಲು ವಿಕಲಚೇತನದವರ ಅಂಗಗಳ ಅಳತೆ ಪರಿಶೀಲನೆ ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಿಬಿರ
ಚಾಮರಾಜನಗರ : ಹನೂರು ಹಾರ್ಟ್ಸ್ ಇನ್ ಆಕ್ಷನ್ ಸಂಸ್ಥೆ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಬೆಂಗಳೂರು ಸಂಸ್ಥೆ ವತಿಯಿಂದ ಆಕ್ಸ ಕಂಪನಿ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಇರುವ ರೈಸ್ ಬೈಯೋನಿಕ್ ಸಹಾಯಕ ಸಾಧನೆಗಳ ತಯಾರಿಕ ಘಟಕದವರದೊಂದಿಗೆ ಜೊತೆಗೂಡಿ ತಾಲ್ಲೂಕಿನ ವಿವಿಧ ಗ್ರಾಮಗಳ ವಾಸಿಸುವ ವಿಕಲಚೇತನರ ಅಂಗಗಳ ಅಳತೆ ಮಾಪನ ಮಾಡಿಲಾಗಿತ್ತು,
ವಿವಿಧ ಸಮಸ್ಯೆಗಳಿಂದ ಕೈ ಕಾಲು ಕಳೆದು ಕೊಂಡಿರುವವರು ತಪಾಸಣೆಯಲ್ಲಿ ಪಾಲ್ಗೊಂಡು ಸುಮಾರು 30ಮಂದಿ ಕೃತಕ ಅಂಗಾಗಳ ಜೋಡಣೆಗೆ ಅಳತೆ ನೀಡಿದ್ದರು,
ಈ ಸಂಧರ್ಭದಲ್ಲಿ ಮಾತನಾಡಿದ ಇನ್ಸ್ಟಿಟ್ಯೂಟ್ ಒಫ್ ಪಬ್ಲಿಕ್ ಹೆಲ್ತ್ ಬೆಂಗಳೂರು ಸಂಸ್ಥೆಯ ಡಾ ಚಂದ್ರಶೇಖರ ಚಾಮರಾಜನಗರ ಜಿಲ್ಲೆಯ ಹನೂರು ಭಾಗದಲ್ಲಿ ಸಮಸ್ಯೆ ಇರುವವರು ಮಾಹಿತಿ ತಿಳಿದು ಆಯೋಜನೆ ಮಾಡಲಾಗಿದೆ, ಕಳೆದ ಎರಡು ಮೂರು ವರ್ಷಗಳಿಂದ ಈ ರೀತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದೂ ಇದ್ದರಿಂದ ಅಂಗವಿಕಲರಿಗೆ ಅನುಕೂಲವಾಗುತ್ತದೆ ಮೊದಲು ಮಕ್ಕಳಿಗೆ ಮಾತ್ರ ಈ ಕಾರ್ಯಕ್ರಮ ಮಾಡುತ್ತಿದ್ದು ಇತ್ತೀಚಿನ ದಿನಗಳಲ್ಲಿ ವಯಸ್ಕರಿಗೂ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ, ಈಗಾಗಲೇ 30 ಜನ ಅಳತೆ ನೀಡಿದ್ದು 20 ದಿನಗಳ ನಂತರ ಉಚಿತ ಜೋಡಣೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದ್ದರು
ತಾಲ್ಲೂಕು ವೈದ್ಯಾಧಿಕಾರಿ ಪ್ರಕಾಶ್ ಮಾತನಾಡಿ ಈ ಕಾರ್ಯಕ್ರಮ ಮಾಡುತ್ತಿರುವುದರಿಂದ ವಿಶೇಷ ಚೇತನ ವ್ಯಕ್ತಿಗಳಿಗೆ ತುಂಬಾ ಅನುಕೂಲವಾಗುತ್ತಿದೆ ನಮ್ಮ ತಾಲ್ಲೂಕು ಗುಡ್ಡಗಾಡು ಪ್ರದೇಶದ ಜೊತೆ ಬಡತನದಿಂದ ಸಮಸ್ಯೆಯಲ್ಲಿ ಸಿಲುಕಿರುವವರು ಹೆಚ್ಚು ಸಂಸ್ಥೆಗಳು ಉಚಿತ ಜೋಡಣೆ ಮಾಡುತ್ತಿರುವುದು ಅನುಕೂಲವಾಗಿದೆ ಎಂದು ತಿಳಿಸಿದರು
ಈ ಸಂಧರ್ಭದಲ್ಲಿ ರೈಸ್ ಬೈಯೋನಿಕ್ ತಜ್ಞರಾದ ವಾಸಿಮ್ ಮತ್ತು ಶೋಕತ್, ತಾಲ್ಲೂಕು ವಿವಿದ್ದೋದೇಶ ಪುನರ್ವಸತಿ ಸಂಯೋಜಕ ಕವಿರತ್ನ ಸೂಳೆರಿಪಾಳ್ಯ ಶಿವಣ್ಣ, ಎಲ್ಲಮಳ ಗ್ರಾಮ ಪಂಚಾಯ್ತಿ ಶಿವ ಶಂಕರ್, ಬಿ ಗುಂಡಾಪುರ ನಾಗರಾಜ್ ಇನ್ನಿತ್ತರು ಇದ್ದರು
ವರದಿಗಾರರು ಪಿ ಸುರೇಶ್ ಬಿ ಗುಂಡಾಪುರ 7022991304